ಹಲ್ಲೆ ನಡೆಸಿ ಪರಾರಿಯಾಗಿದ್ದ ದರೋಡೆಕೋರನ ಸೆರೆ

Social Share

ಬೆಂಗಳೂರು, ನ.13- ಕಿತ್ತುಕೊಂಡು ಹೋಗಿದ್ದ ಮೊಬೈಲ್‍ನ್ನು ವಾಪಸ್ ನೀಡುವಂತೆ ಕೇಳಲು ಬಂದ ಡಿಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಂಪಂಗಿರಾಮನಗರದ ನಿವಾಸಿ ಟೋನಿ (23) ಬಂಧಿತ ಆರೋಪಿ. ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅಕ್ಟೋಬರ್ 18ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಅನುಶಾ ವಲ್ಲೂರಿ ಎಂಬವರು ಜಯನಗರ 2ನೇ ಬ್ಲಾಕ್‍ನ ತಮ್ಮ ಪಿಜಿಯಿಂದ ಕಚೇರಿಗೆ ನಡೆದು ಹೋಗುತ್ತಿದ್ದರು. ಈ ಸಮಯದಲ್ಲಿ ಹಿಂದಿನಿಂದ ಸ್ಕೂಟರ್‍ನಲ್ಲಿ ಬಂದಿ ಇಬ್ಬರು ದರೋಡೆಕೋರರು ಮೊಬೈಲ್ ಕಸಿದು ಪರಾರಿಯಾಗಿದ್ದರು.

ದುಷ್ಕರ್ಮಿಗಳಿಂದ ಮನೆ, ದೇವಾಲಯ ಧ್ವಂಸ

ಅನುಶಾ ಸಹಾಯಕ್ಕಾಗಿ ಕೂಗಿಕೊಂಡಾಗ ಸಮೀಪದಲ್ಲೇ ಇದ್ದ ಫುಡ್ ಡಿಲಿವರಿ ಕೆಲಸ ಮಾಡುವ ಸೂರ್ಯ ಸಹಾಯಕ್ಕೆ ಬಂದಿದ್ದಾರೆ. ತಮ್ಮ ಸ್ನೇಹಿತರ ಮೊಬೈಲ್‍ನಲ್ಲಿ ಇದ್ದ ಫೈಂಡ್ ಮೈ ಡಿವೈಸ್ ಆ್ಯಪ್‍ನಲ್ಲಿ ಅನುಶಾ ಅವರ ಮೊಬೈಲ್ ಸಂಖ್ಯೆ ದಾಖಲಿಸಿದ್ದಾರೆ. ಜಿಪಿಆರ್ ಆಧರಿಸಿ ಮೊಬೈಲ್ ಕಳವು ಆರೋಪಿಗಳು ಇರುವ ಸ್ಥಳ ಪತ್ತೆಯಾಗಿದೆ.

ಸೂರ್ಯ ಸ್ನೇಹಿತರೊಂದಿಗೆ ಅಲ್ಲಿಗೆ ತೆರಳಿದ್ದಾರೆ.ಹಾಡು ಹಗಲೇ ಮೊಬೈಲ್ ಕಸಿದು ಬಂದಿದ್ದ ಆರೋಪಿಗಳು ಸುಧಾಮನಗರದ ಸಮೀಪ ಟೀ ಅಂಗಡಿಯೊಂದರ ಮುಂದೆ ನಿಂತು ಟೀ ಕುಡಿಯುತ್ತಿದ್ದರು. ಅಲ್ಲಿಗೆ ಬಂದ ಸೂರ್ಯ ಕಳುವು ಮಾಡಿದ್ದ ಮೊಬೈಲ್ ವಾಪಾಸ್ ನೀಡುವಂತೆ ಕೇಳಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿಗಳು ಮತ್ತು ಸೂರ್ಯನ ನಡುವೆ ಸಂಘರ್ಷವಾಗಿದೆ. ಆರೋಪಿ ಚಾಕು ತೆಗೆದು ಹಲ್ಲೆ ನಡೆಸಿದ್ದಾನೆ. ಇದರಿಂದ ಸೂರ್ಯ ಅವರ ಮುಖಕ್ಕೆ ಗಾಯವಾಗಿದೆ. ಅನುಶಾ ಅವರು ಗಾಯಾಳು ಸೂರ್ಯನಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಕಾಂಗ್ರೆಸಿಗರನ್ನು ಮನೆಗೆ ಕಳಿಸುತ್ತಾರೆ : ಜೋಷಿ

ದುಷ್ಕøತ್ಯ ಎಸಗಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಎರಡು ಪ್ರತ್ಯೇಕ ಅಪರಾಧ ಕೃತ್ಯಗಳ ಕುರಿತು ಪ್ರಕರಣ ದಾಖಲಾಗಿದೆ. ಸಿದ್ದಾಪುರದಲ್ಲಿ ಮೊಬೈಲ್ ಕಳವು ಪ್ರಕರಣ ದಾಖಲಾದರೆ, ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹಲ್ಲೆ ಸಂಬಂಧ ಪಟ್ಟಂತೆ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೋದಿ ನಾಮಬಲವಿಲ್ಲದೆ ಬಿಜೆಪಿಯವರ ಯೋಗ್ಯತೆಗೆ ಠೇವಣಿ ಕೂಡ ಸಿಗಲ್ಲ : ಜೆಡಿಎಸ್

Articles You Might Like

Share This Article