ರೌಡಿಗಳಿಗೆ ಖಾಕಿ ಚಾಟಿ : ಗೂಂಡಾ ಕಾಯ್ದೆಯಡಿ 23 ಮಂದಿ ಬಂಧನ, 13 ಮಂದಿ ಗಡಿಪಾರು

Social Share

ಬೆಂಗಳೂರು, ಜ.4- ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲಾಗಿದ್ದು, ಕಳೆದ 2022ನೇ ಸಾಲಿನಲ್ಲಿ 22 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 40 ರೌಡಿಗಳ ವಿರುದ್ಧ ಬಾಂಡ್‍ಗಳ ಮೊತ್ತಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು, 13 ಮಂದಿಯನ್ನು ಗಡಿ ಪಾರು ಮಾಡಲಾಗಿದೆ. ಭದ್ರತಾ ಕಾಯ್ದೆಯಡಿ ಒಟ್ಟು 3100 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಷ ರತ್ತು ಉಲ್ಲಂಘನೆ ಮಾಡಿದ 34 ರೌಡಿಗಳನ್ನು ಕಾರಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ನಾಯಿ ನಿಯತ್ತಿನ ಪ್ರಾಣಿ : ಸಿದ್ದುಗೆ ಸಿಎಂ ಬೊಮ್ಮಾಯಿ ಗುದ್ದು

ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕುರಿತು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಕಳೆದ ಸಾಲಿನಲ್ಲಿ 421 ಜೂಜು, 201 ಕ್ರಿಕೆಟ್ ಬೆಟ್ಟಿಂಗ್, ಸುಮಾರು 154 ಇಮೊರಲ್ ಟ್ರಾಫಿಕ್ ಕಾಯ್ದೆಯಡಿ ದಾಳಿಗಳನ್ನು ಮಾಡಲಾಗಿದೆ ಎಂದರು.

ಆರೋಪಿಗಳಿಗೆ ಶಿಕ್ಷೆ:
2022ರಲ್ಲಿ 75 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದ್ದು, ಇವುಗಳ ಪೈಕಿ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಂಗ್ಲಾದೇಶದ ಸಂತ್ರಸ್ಥೆಯ ವಿರುದ್ಧ ಜರುಗಿದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೂ ಜೀವವಾ ಶಿಕ್ಷೆಯಾಗಿರುತ್ತದೆ.

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 5 ವರ್ಷ ಸಜೆ ಹಾಗೂ 25 ಸಾವಿರ ದಂಡ ವಿಧಿಸಲಾಗಿದೆ ಎಂದರು. ನಗರದಲ್ಲಿ ಒಟ್ಟಾರೆಯಾಗಿ 16 ಕೊಲೆ ಪ್ರಕರಣಗಳು, 10 ಕೊಲೆಯತ್ನ, 2 ವಂಚನೆ, 2 ಮಾದಕ ವಸ್ತು, 6 ಅತ್ಯಾಚಾರ ಪ್ರಕರಣ ಹಾಗೂ ದೌರ್ಜನ್ಯ ಪ್ರಕರಣಗಳು, 31 ಪೋಕ್ಸೋ ಪ್ರಕರಣಗಳು ಹಾಗೂ ಇತರೆ 8 ಕಳವು ಪ್ರಕರಣಗಳಲ್ಲಿ ಆರೋಪಿಗಳಿಗೆ ಸಜೆಯಾಗಿರುತ್ತದೆ.

ಸುಳ್ಳು ಆರೋಪದ ಸೆರವಾಸಕ್ಕೆ 10 ಸಾವಿರ ಕೋಟಿ ಪರಿಹಾರ ಕೇಳಿದ ನಿರ್ದೋಷಿ

ಪ್ರಮುಖ ಪ್ರಕರಣಗಳ ಪತ್ತೆ:
ನಗರದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಕಾಮಾಕ್ಷಿಪಾಳ್ಯ ಆ್ಯಸಿಡ್ ದಾಳಿ ಪ್ರಕರಣ, ಮೂರು ವರ್ಷಗಳಿಂದ ಸತತವಾಗಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಸಂತೋಷ್ ಎಂಬಾತನನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪತ್ತೆ ಮಾಡಿ 51 ಸರ ಅಪಹರಣ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಹಾಗೂ ಬನಶಂಕರಿ ಪೊಲೀಸರು ನಕಲಿ ಪಾಸ್‍ಪೋರ್ಟ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Bengaluru, rowdies, 23 arrested, Police Commissioner, Pratap Reddy,

Articles You Might Like

Share This Article