ಬೆಂಗಳೂರು, ಮೇ 26- ಏರಿಯಾದಲ್ಲೇ ನಾವೇ ಕಿಂಗ್, ಎಲ್ಲರೂ ನನ್ನ ಮಾತೇ ಕೇಳಬೇಕೆಂದು ಸ್ನೇಹಿತರಿಗೆ ಧಮ್ಕಿ ಹಾಕುತ್ತಿದ್ದ ರೌಡಿಯನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಮಾಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ರಂಗನಾಥ ಕಾಲೋನಿ ನಿವಾಸಿ ರೇಣುಕುಮಾರ್ (24) ಕೊಲೆಯಾದ ರೌಡಿ. ಈತ ಮಹದೇವಪುರ ಪೊಲೀಸ್ ಠಾಣೆಯ ರೌಡಿಶೀಟರ್. ಈತನ ವಿರುದ್ಧ ಕೊಲೆಯತ್ನ, ಹಲ್ಲೆ, ದರೋಡೆ ಸೇರಿದಂತೆ ಏಳು ಪ್ರಕರಣಗಳಿವೆ.ರೇಣುಕುಮಾರ್ ತನ್ನ ಜೊತೆಗಾರರಿಗೆ ಏರಿಯಾದಲ್ಲಿ ನಾನೇ ಕಿಂಗ್, ನನ್ನನ್ನು ಬಿಟ್ಟು ನೀವು ಏನೂ ಮಾಡಬಾರದು, ನಾನು ಹೇಳಿದಂತೆ ಕೇಳಬೇಕು, ನಾನು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದೇನೆ, ನನ್ನ ಮಾತು ಕೇಳದಿದ್ದರೆ ನಿಮ್ಮನ್ನೆಲ್ಲಾ ಹೊಡೆದು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದನು.
ಮೇ.29 ರಂದು NVS-01 ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ
ಈತನ ವರ್ತನೆಯಿಂದ ಸ್ನೇಹಿತರು ರೋಸಿಹೋಗಿ ಕೊಲೆಗೆ ಸಂಚುರೂಪಿಸಿದ್ದಾರೆ. ರಾತ್ರಿ 9.45ರ ಸುಮಾರಿನಲ್ಲಿ ರಿಂಗ್ ರಸ್ತೆಯ ರಾಘಾ ಅಪಾರ್ಟ್‍ಮೆಂಟ್ ಬಳಿಯ ವೇಬ್ರಿಡ್ಜ್ ಬಳಿ ರೇಣುಕುಮಾರ್ ನಿಂತಿದ್ದನು. ಆ ಸಂದರ್ಭದಲ್ಲಿ ಸ್ನೇಹಿತನೊಬ್ಬ ಬಂದು ನಿನ್ನ ಜೊತೆ ಮಾತನಾಡಬೇಕೆಂದು ಹೇಳಿ ಕರೆದೊಯ್ಯುತ್ತಿದ್ದಾಗ ಮೂರ್ನಾಲ್ಕು ಮಂದಿ ಸೇರಿಕೊಂಡು ಲಾಂಗು, ಮಚ್ಚಿನಿಂದ ದಾಳಿ ನಡೆಸಿ ರೇಣುಕುಮಾರ್‍ಗೆ ತಲೆ, ಇನ್ನಿತರ ಭಾಗಗಳಿಗೆ ಮನಬಂದಂತೆ ಹೊಡೆದು ಪರಾರಿಯಾಗಿದ್ದಾರೆ.
ಸೋನಿಯಾ ಗಾಂಧಿ ಭೇಟಿಯಾದ ಸಿದ್ದರಾಮಯ್ಯ
ಹಲ್ಲೆಯಿಂದ ಗಂಭೀರಗಾಯಗೊಂಡಿದ್ದ ರೇಣುಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಮಹದೇವಪುರ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ. ರೇಣುಕುಮಾರ್ ತಾಯಿ ನೀಡಿದ ದೂರನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಕಾರ್ಯದಲ್ಲಿ ತೊಡಗಿದ್ದಾರೆ.
#Bengaluru, #Rowdy, #murder,