ಬೆಂಗಳೂರು, ಜ.7- ತಮಾಷೆಗಾಗಿ ಶಾಲೆಯೊಂದಕ್ಕೆ ಇ-ಮೇಲ್ ಮಾಡಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು, ನಗರದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಎಂಬುದನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬ 9ನೇ ತರಗತಿ, ಮತ್ತೊಬ್ಬ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇವರಿಬ್ಬರು ಗೋಗಲ್ ನೋಡುತ್ತಿದ್ದಾಗ ಸಾಣೆಗೊರವನಹಳ್ಳಿ ಮುಖ್ಯರಸ್ತೆಯಲ್ಲಿರುವ ಎನ್ಪಿಎಸ್ ಶಾಲೆಯ ಅಧಿಕೃತ ವೆಬ್ಸೈಟ್ ವಿಳಾಸ ದೊರೆತಿದೆ.
ಈ ಶಾಲೆಗೆ ಬಾಂಬ್ ಇಡಲಾಗಿದೆ ಎಂಬ ಸಂದೇಶ ಕಳುಹಿಸೋಣ ಎಂದು ಈ ಇಬ್ಬರು ವಿದ್ಯಾರ್ಥಿಗಳು ಮಾತನಾಡಿಕೊಂಡು ಆ ಶಾಲೆಯ ವೆಬ್ಸೈಟ್ಗೆ ಜ.5ರಂದು ರಾತ್ರಿ 8.30ರ ಸುಮಾರಿನಲ್ಲಿ ಇ-ಮೇಲ್ ಮಾಡಿ, ಶಾಲೆ ಆವರಣದಲ್ಲಿ ನಾಲ್ಕು ಜಿಲೆಟಿನ್ ಕಡ್ಡಿಗಳನ್ನು ಇಡಲಾಗಿದೆ. ಅದು ಕೆಲ ಸಮಯದಲ್ಲೇ ಸ್ಪೋಟಗೊಳ್ಳಲಿದೆ ಎಂದು ಸಂದೇಶ ಕಳುಹಿಸಿದ್ದಾರೆ.
ನಿನ್ನೆ ಬೆಳಗ್ಗೆ ಶಾಲೆಗೆ ಬಂದ ಮುಖ್ಯಸ್ಥರು ಎಂದಿನಂತೆ ಇ-ಮೇಲ್ ನೋಡುತ್ತಿದ್ದಾಗ, ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ನೋಡಿ ಗಾಬರಿಯಾಗಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಹೊರಗೆ ಕರೆತಂದರು. ಈ ಸಂದೇಶದಿಂದ ಕೆಲಕಾಲ ಆತಂಕ ಉಂಟಾಗಿತ್ತು.
ವಿಷಾಹಾರ ಸೇವನೆ : ಕೇರಳದ ಯುವತಿ ಮಂಗಳೂರಿನಲ್ಲಿ ನಿಧನ
ಸುದ್ದಿ ತಿಳಿದ ಬಸವೇಶ್ವರ ನಗರ ಠಾಣೆ ಪೆಪೊಲೀಸರು, ಬಾಂಬ್ ನಿಷ್ಕ್ರೀಯ ದಳ, ಶ್ವಾನದಳ ಸ್ಥಳಕ್ಕೆ ದಾವಿಸಿ ಶಾಲೆಯ ಆವರಣವನ್ನೆಲ್ಲಾ ಪರಿಶೀಲಿಸಿದರಾದರೂ ಯಾವುದೇ ವಸ್ತುಗಳು ಕಂಡು ಬಂದಿರಲಿಲ್ಲ.
ಇದು ಸುಳ್ಳು ಇ-ಮೇಲ್ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕೆಲವೇ ಗಂಟೆಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಸಂದೇಶ ಕಳುಹಿಸಿರುವುದನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Bengaluru, school, bomb threat, minor, students,