ಬೆಂಗಳೂರು, ಡಿ.10- ಆಂಧ್ರಪ್ರದೇಶದ ಮದನ ಪಲ್ಲಿಯ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ಗುಂಡಿ ನ ಸುರಿಮಳೆಗೈದು ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ವೈಟ್‍ಫೀಲ್ಡ್ ವಿಭಾಗದ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆಂಧ್ರದ ಪ್ರಕಾಶಂ ಜಿಲ್ಲೆಯ ಮುಂಡ್ಲಮೂರಿನಲ್ಲಿ ಆರೋಪಿಗಳಾದ ಮನೋಜ್‍ಕುಮಾರ್, ಜಯಪ್ರಕಾಶ್ ಹಾಗೂ ಪ್ರವೀಣ್‍ನನ್ನು ಬಂಧಿಸಿದೆ.
ಆಂಧ್ರಪ್ರದೇಶದ ತಂಬಲಪಲ್ಲಿಯ ವನಮರೆಡ್ಡಿಗಾರುಪಲ್ಲಿ ಗ್ರಾಮದ ರೌಡಿ ಶಿವಶಂಕರ್ ರೆಡ್ಡಿಯ ತಂದೆ ಜಯಚಂದ್ರರೆಡ್ಡಿ ಕುಟುಂಬದವರಿಗೂ ಇವರ ಮನೆ ಪಕ್ಕದ ನಿವಾಸಿ ಬೈಯ್ಯರೆಡ್ಡಿ ಕುಟುಂಬದವರಿಗೂ ಗಲಾಟೆಯಾಗಿ ವೈಮನಸ್ಯ ಉಂಟಾಗಿತ್ತು. 2011ನೇ ಸಾಲಿನಲ್ಲಿ ಶಿವಶಂಕರ್ ರೆಡ್ಡಿ ತನ್ನ ತಂದೆಯೊಂದಿಗೆ ಸೇರಿಕೊಂಡು ಬೈಯ್ಯರೆಡ್ಡಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುತ್ತಾನೆ.
ಗಡಿ ಸಂಘರ್ಷ : ಸೋಮವಾರ ಅಮಿತ್ ಷಾ ಜತೆ ಸಂಸದರ ಮಾತುಕತೆ
ಬೈಯರೆಡ್ಡಿ ಸಹಚರರು ಹಾಗೂ ಸಂಬಂಧಿಕರು ಇದೇ ದ್ವೇಷದಿಂದ ಶಿವಶಂಕರ್ ರೆಡ್ಡಿಯ ತಂದೆಯನ್ನು ಕೊಲೆ ಮಾಡಿದ್ದು, ಇದಕ್ಕೆ ಪ್ರತಿಕಾರವಾಗಿ ಜಯಚಂದ್ರರೆಡ್ಡಿ ಕಡೆಯವರು ತಮ್ಮನ್ನು ಕೊಲೆ ಮಾಡುವ ಉದ್ದೇಶ ಹೊಂದಿರುವುದನ್ನು ಬೈಯ್ಯರೆಡ್ಡಿ ಕಡೆಯ ಸಹಚರರು ತಿಳಿದುಕೊಂಡರು.
ಬೆಂಗಳೂರಿನ ಕೆಆರ್‍ಪುರ ಸಮೀಪದ ಕುರುಸೊನ್ನೆನಹಳ್ಳಿ ಬಳಿ ರೌಡಿ ಶಿವಶಂಕರ ರೆಡ್ಡಿ ಸೀಗೇಹಳ್ಳಿ ಹ್ಯಾಪಿಗಾರ್ಡನ್ ಬಳಿ ಅಪಾರ್ಟ್‍ಮೆಂಟ್ ಕಟ್ಟಿಸುತ್ತಿರುವ ಮಾಹಿತಿಯನ್ನು ಭೈಯ್ಯರೆಡ್ಡಿ ಕಡೆಯ ಸಹಚರರು ತಿಳಿದುಕೊಂಡು ಹಳೆ ಜಿದ್ದಿನಿಂದ ಶಿವಶಂಕರ್ ರೆಡ್ಡಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು .
ಕಟ್ಟಡ ಪರಿಶೀಲನೆಗಾಗಿ ಡಿ.8ರಂದು ಶಿವಶಂಕರ್ ರೆಡ್ಡಿ ತನ್ನ ಕಾರು ಚಾಲಕ ಅಶೋಕ್ ರೆಡ್ಡಿ ಜೊತೆ ಬೆಂಗಳೂರಿಗೆ ಬಂದಿರುವ ಮಾಹಿತಿ ತಿಳಿದುಕೊಂಡಿದ್ದಾರೆ. ಅಂದು ಮಧ್ಯಾಹ್ನ ಶಿವಶಂಕರ್ ರೆಡ್ಡಿ ತಾನು ಕಟ್ಟಿಸುತ್ತಿದ್ದ ಅಪಾರ್ಟ್‍ಮೆಂಟ್‍ನ ಜಾಗಕ್ಕೆ ಹೋಗುತ್ತಿದ್ದಾಗ ಎದರುಗಡೆಯಿಂದ ಪರಿಚಯಸ್ಥರೊಬ್ಬರು ಬಂದಿದ್ದನ್ನು ನೋಡಿ ಕಾರು ನಿಲ್ಲಿಸಿ ಶಿವಶಂಕರ ರೆಡ್ಡಿ ಇಳಿದು ಮಾತನಾಡಿಸುತ್ತಿದ್ದರು.
ಅದೇ ಸಂದರ್ಭದಲ್ಲಿ ಎರಡು ಪಲ್ಸರ್ ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಪೂರ್ವ ನಿಯೋಜಿತ ಸಂಚಿನಂತೆ ಪಿಸ್ತೂಲಿನಿಂದ ಏಕಾಏಕಿ ಶಿವಶಂಖರ ರೆಡ್ಡಿ ಹಾಗೂ ಚಾಲಕ ಅಶೋಕ್ ರೆಡ್ಡಿ ಮೇಲೆ ಎಂಟು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು.
ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲುನಿತೀಶ್ ವೈಫಲ್ಯ ಕಾರಣ : ಪ್ರಶಾಂತ್
ಗುಂಡಿನ ದಾಳಿಯಿಂದಾಗಿ ಶಿವಶಂಕರ ರೆಡ್ಡಿಯ ಭುಜ ಹಾಗೂ ಕಾಲುಗಳಿಗೆ ನಾಲ್ಕು ಗುಂಡುಗಳು ಬಿದ್ದಿದ್ದರೆ, ಆತನ ಕಾರು ಚಾಲಕ ಅಶೋಕ್ ರೆಡ್ಡಿ ಕಾಲಿಗೆ ಒಂದು ಗುಂಡು ತಾಗಿದೆ. ಗುಂಡು ತಗುಲಿದ್ದರೂ ಅದನ್ನು ಲೆಕ್ಕಿಸದೇ ಕಾರು ಚಾಲಕ ಅಶೋಕ್ ರೆಡ್ಡಿ ಕಾರನ್ನು ಚಾಲನೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿ ಶಿವಶಂಕರ ರೆಡ್ಡಿ ಯನ್ನು ಚಿಕಿತ್ಸೆಗೆ ದಾಖಲಿಸಿ ನಂತರ ಆತನೂ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಕೆಆರ್‍ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಶಂಕರ ರೆಡ್ಡಿ ಕೊಲೆ ಯತ್ನ ನಡೆದಿರುವುದನ್ನು ಕೆಆರ್‍ಪುರಂ ಠಾಣೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವೈಟ್‍ಫೀಲ್ಡ್ ವಿಭಾಗದ ವಿಶೇಷ ತಂಡ ಆರೋಪಿಗಳ ಬಗ್ಗೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ.
ಈ ಪ್ರಕರಣವು ಅತಿ ಗಂಭೀರವಾಗಿದ್ದು, ಕೃತ್ಯ ನಡೆದ 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾದ ಇತರೆ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.
ಗುಂಡೇಟಿನಿಂದ ಗಾಯಗೊಂಡಿರುವ ಶಿವಶಂಕರ ರೆಡ್ಡಿ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಂಬಲಪಲ್ಲಿ, ಕುರುಬಲಕೋಟ ಮಂಡಲಂ ವನಮರೆಡ್ಡಿಗಾರುಪಲ್ಲಿ ಗ್ರಾಮದವನಾಗಿದ್ದು, ಆತನ ವಿರುದ್ಧ ಆಂಧ್ರದ ಮುಡಿವೇಡು ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳು, ಮದನಪಲ್ಲಿ ಗ್ರಾಮಾಂತರ ಠಾಣೆ, ಆಂಧ್ರದ ತಂಬಲಪಲ್ಲಿಧಿಲೀಸ್ ಠಾಣೆ ಹಾಗೂ ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ.
Bengaluru, shootout, case ,Three arrested,