ಬೆಂಗಳೂರಲ್ಲಿ ರೈಲಿಗೆ ತಲೆಕೊಟ್ಟು ಮೂವರು ಆತ್ಮಹತ್ಯೆ

Social Share

ಬೆಂಗಳೂರು, ಜ.9- ರೈಲಿಗೆ ಸಿಕ್ಕಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತಪಟ್ಟವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ.

ಸುಮಾರು 50 ವರ್ಷದಂತೆ ಕಾಣುವ ಗಂಡಸು, 45 ವರ್ಷದ ಮಹಿಳೆ ಹಾಗೂ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಈ ಮೂವರು ತೊಂಡೆಬಾವಿ ರೈಲ್ವೆ ನಿಲ್ದಾಣದ ಸಮೀಪ ಬಂದು ರೈಲ್ವೆ ಹಳಿ ಬಳಿ ಕಾದಿದ್ದು, ರೈಲು ಬರುತ್ತಿದ್ದಂತೆಯೇ ಈ ಮೂವರು ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತೆ ಕೊರೊನಾ ಕಾಟ, ಸೋಂಕಿಗೆ ಮತ್ತೊಬ್ಬ ಬಲಿ

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯೇ ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೂವರ ಮೃತದೇಹಗಳನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಮೂವರು ಯಾವ ಊರಿನವರು, ಸ್ಥಳೀಯರೇ, ಒಂದೇ ಕುಟುಂಬದವರೇ, ಏತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Articles You Might Like

Share This Article