ಸುಗಮ ಸಂಚಾರ ಜಾರಿ- ಅಪಘಾತ ತಡೆ: ನಾಳೆ ನಾಗರಿಕ ಸಂಚಾರ ವೇದಿಕೆ ಸಭೆ

Social Share

ಬೆಂಗಳೂರು, ಡಿ.9- ನಗರ ಸಂಚಾರ ಪೊಲೀಸ್ ವಿಭಾಗವು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾಗರಿಕ ಸಂಚಾರ ವೇದಿಕೆ ಸಭೆಯನ್ನು ನಾಳೆ ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಳಗ್ಗೆ 11.30ರಿಂದ 1.30 ಗಂಟೆಯವರೆಗೆ ನಗರದ ಎಲ್ಲಾ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ ಸಭೆ ನಡೆಸಲಾಗುತ್ತದೆ. ನಗರದ ರಸ್ತೆಗಳಲ್ಲಿ ಸುಗಮ ಸಂಚಾರವನ್ನು ಜಾರಿಗೊಳಿಸಲು ಹಾಗೂ ಅಪಘಾತಗಳನ್ನು ಸಮರ್ಥವಾಗಿ ತಡೆಗಟ್ಟಲು ಸಾರ್ವಜನಿಕರ ಸಹಕಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ನಾಗರಿಕ ಸಂಚಾರ ವೇದಿಕೆ ಸಭೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ನಿವಾರಿಸುವುದಷ್ಟೇ ಅಲ್ಲದೆ ಸಂಚಾರವನ್ನು ಸುಗಮಗೊಳಿಸುವ ಹಾಗೂ ರಸ್ತೆ ಸುರಕ್ಷತೆಯನ್ನು ವೃದ್ಧಿಸುವಂತಹ ಸಲಹೆಗಳನ್ನು ಸಹ ಸಾರ್ವಜನಿಕರು ಮುಕ್ತವಾಗಿ ನೀಡಬಹುದಾಗಿದೆ.

ನಟ ಅನಿರುದ್ಧ್ ನಿರ್ಬಂಧ ತೆರವಿಗೆ ಎಸ್.ನಾರಾಯಣ್ ಸಂಧಾನ

ಸಾರ್ವಜನಿಕರು ನೀಡುವ ಉತ್ತಮ ಸಲಹೆಗಳನ್ನು ಪರಿಗಣಿಸಿ ಅವುಗಳನ್ನು ನಿಯಮಗಳನ್ನಾಗಿ ಪರಿವರ್ತಿಸಿ ಕಾರ್ಯಗತಗೊಳಿಸಲಾಗುವುದು. ಸಾರ್ವಜನಿಕರು ಸಂಚಾರದ ಬಗ್ಗೆ ತಮ್ಮ ದೂರು, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

ಸಾರ್ವಜನಿಕರು ತಮ್ಮ ಹಿಂದಿನ ಪ್ರಕರಣಗಳ ಬಗ್ಗೆ ವಿವರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಬ್ರೇಕ್, ಕಟೀಲ್ ಮುಂದುವರಿಕೆ

ನಗರದ ಎಲ್ಲಾ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ ನಡೆಯುವ ನಾಗರಿಕ ಸಂಚಾರ ವೇದಿಕೆ ಸಭೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ತಮ್ಮ ಸಲಹೆಗಳನ್ನು ಮುಕ್ತವಾಗಿ ನೀಡಿ ನಗರದಲ್ಲಿ ಸುಗಮ ಸಂಚಾರವನ್ನು ಜಾರಿಗೊಳಿಸಿ ಅಪಘಾತಗಳನ್ನು ತಡೆಗಟ್ಟಲು ಸಂಚಾರ ಪೊಲೀಸರೊಂದಿಗೆ ಸಹಕರಿಸುವಂತೆ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾದ ಎಂ.ಎ. ಸಲೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bengaluru, traffic, Commissioner, MA Saleem, meeting,

Articles You Might Like

Share This Article