ಸುಗಮ ಸಂಚಾರಕ್ಕೆ ಕ್ರಮ : ಎಂ.ಎ. ಸಲೀಂ

Social Share

ಬೆಂಗಳೂರು, ಜ.4- ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ. ಸಲೀಂ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 5 ವರ್ಷಕ್ಕೆ ಹೋಲಿಸಿದರೆ 2022ರಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

2018ರಲ್ಲಿ 4611 ಅಪಘಾತಗಳು ಸಂಭವಿಸಿದ್ದು, 2019ರಲ್ಲಿ 4684 ಮತ್ತು 2022ರಲ್ಲಿ 3827 ಅಪಘಾತ ಸಂಭವಿಸಿವೆ.
ವಾಹನಗಳ ಸುಗಮ ಸಂಚಾರಕ್ಕಾಗಿ ನಗರದಲ್ಲಿ ಸಂಚಾರ ದಟ್ಟಣೆ ಇರುವ ಪ್ರದೇಶಗಳನ್ನು ಗುರುತಿಸಿ ಸುಗಮ ಸಂಚಾರಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗಿದೆ.

ಸಂಚಾರ ನಿರ್ವಹಣೆಗೆ ತಂತ್ರಜ್ಞಾನದ ಬಳಕೆಯಿಂದ ಸಂಚಾರ ಉಲ್ಲಂಘನೆ ಮಾಡುವವರ ವಿರುದ್ಧ ಹೆಚ್ಚು ಪ್ರಕರಣಗಳನ್ನು ದಾಖಲಿಸಿ 179.25 ಕೋಟಿಯಷ್ಟು ಹಣವನ್ನು ನವೆಂಬರ್ ಅಂತ್ಯದವರೆಗೆ ದಂಡ ವಿಧಿಸಲಾಗಿದೆ ಎಂದು ಅವರು ವಿವರಿಸಿದರು.

ಅಂಗನವಾಡಿ ಶಿಕ್ಷಕರಾಗಲು ಡಿಫ್ಲೋಮಾ ಕಡ್ಡಾಯ

ನಗರ ಸಂಚಾರ ಪೊಲೀಸ್ ಘಟಕವು ಪ್ರತಿದಿನ ಏರುತ್ತಿರುವ ವಾಹನಗಳ ಸಂಖ್ಯೆಯ ನಡುವೆಯೂ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲದೊಂದಿಗೆ ಹಾಗೂ ಎಲ್ಲಾ ಸಾಮಥ್ರ್ಯಗಳಿಂದ ಸಂಚಾರ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು, ಅಪಘಾತಗಳನ್ನು ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದರು.

ಕಳೆದ ಐದು ವರ್ಷಗಳಿಂದ ನಗರದಲ್ಲಿ ಸಂಭವಿಸುತ್ತಿರುವ ಒಟ್ಟು ಅಪಘಾತಗಳ ಸಂಖ್ಯೆಯು 2018ನೇ ಸಾಲಿಗೆ ಹೋಲಿಸಿದಾಗ ಶೇ. 17ರಷ್ಟು ಇಳಿಕೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ದಾಖಲಾಗುವ ಸಂಪರ್ಕ ರಹಿತ ಪ್ರಕರಣಗಳನ್ನು ಶೇ. 100ಕ್ಕೆ ತರುವ ಧ್ಯೇಯೋದ್ದೇಶವಿದ್ದು ಸಂಚಾರಿ ಪೊಲೀಸ್ ಎಲ್ಲಾ ಮಾನವ ಸಂಪನ್ಮೂಲಗಳನ್ನು ಸಂಚಾರ ನಿಯಂತ್ರಣಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಶಬರಿಮಲೆ ಅಯ್ಯಪ್ಪ ಚಿತ್ರಕ್ಕೆ ಬೆಂಬಲ ನೀಡಿದ್ದ ವ್ಯಕ್ತಿಯ ಅಂಗಡಿ ಧ್ವಂಸ

ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಅನಕೃತ ವಾಹನ ನಿಲುಗಡೆಯನ್ನು ಸಮರ್ಥವಾಗಿ ತಡೆಯುವ ಸಲುವಾಗಿ ಪ್ರಕರಣ ದಾಖಲಿಸುವ ಮೂಲಕ ಕಠಿಣ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಈ ಪ್ರಬಲ ಅಸ್ತ್ರದಿಂದ ನಗರದ ರಸ್ತೆಗಳನ್ನು ಅಧಿನಕೃತ ನಿಲುಗಡೆ ರಹಿತವನ್ನಾಗಿಸುವ ಮೂಲಕ ಸುಗಮ ಸಂಚಾರ ಸುಗಮಗೊಳಿಸುವ ಧ್ಯೇಯೋದ್ದೇಶವಿದೆ.

Bengaluru, Traffic Commissioner, MA Saleem,

Articles You Might Like

Share This Article