ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ 11 ಮೇಲ್ಸೇತುವೆ ನಿರ್ಮಾಣ

Social Share

ಬೆಂಗಳೂರು,ಫೆ.9- ಸಂಚಾರ ದಟ್ಟಣೆ ನಿಯಂತ್ರಿಸಲು ಇದೇ ಮೊದಲ ಬಾರಿಗೆ ನಗರಕ್ಕೆ 11 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು.
ನಗರದ ಎಚ್.ಎ.ಎಲ್ ಮುಖ್ಯರಸ್ತೆಯ ಸುರಂಜನ್ ದಾಸ್ ರಸ್ತೆ ಜಂಕ್ಷನ್‍ನಲ್ಲಿ ಕೆಳಸೇತುವೆ ಲೋಕಾರ್ಪಣೆಯನ್ನು ಮಾಡಿ ಅವರು ಮಾತನಾಡಿದರು.

ಬೆಂಗಳೂರು ಅತೀ ಹೆಚ್ಚು ಬೆಳೆಯುತ್ತಿರುವ ನಗರ, ಐದು ಸಾವಿರ ವಾಹನಗಳು ನಿತ್ಯ ರಸ್ತೆಗೆ ಬರುತ್ತಿದೆ. ಅದರೆ ರಸ್ತೆ ಮಾತ್ರ ಹಾಗೆ ಇದೆ. ರಸ್ತೆ ಅಭಿವೃದ್ಧಿ ಮಾಡುವ ಉದ್ದೇಶದಿಂದ ಇಂದು ವೈಟ್ ಫೀಲ್ಡ ನಿಂದ ಎಂ.ಜಿ.ರಸ್ತೆಯವರಿಗೂ ವಾಹನ ದಟ್ಟಣೆ ನಿಯಂತ್ರಿಸುವ ಸುರಂಜನ್ ದಾಸ್ ರಸ್ತೆ ಜಂಕ್ಷನ್‍ನಲ್ಲಿ ಕೆಳಸೇತುವೆ ಲೋಕಾರ್ಪಣೆಯನ್ನು ಇಂದು ಮಾಡಲಾಗಿದೆ ಎಂದರು.

ಮೆಟ್ರೊ 3ನೇ ಅಂತದ ಕೆಲಸವು ಕಾರ್ಯರೂಪದಲ್ಲಿದೆ, ರಾಜಕಾಲುವೆಗಳಿಗೆ 2 ಸಾವಿರ ಕೋಟಿ ಅನುದಾನವನ್ನು ನೀಡಲಾಗಿದೆ, ಪ್ರಮುಖ ಕೆರೆಗಳಿಗೆ ಕ್ರಶ್ ಗೇಟುಗಳನ್ನು ಅಳವಡಿಸುವ ಕಾರ್ಯವನ್ನು ಸಹ ಮಾಡಲಾಗುತ್ತಿದೆ ಎಂದು ನುಡಿದರು.

ಬಂಡಾಯಕ್ಕೆ ಇತಿಶ್ರೀ ಹಾಡಲು ಬಿಜೆಪಿ ಕಾರ್ಯತಂತ್ರ

ನಮ್ಮ ಶಾಸಕರು ಕೇವಲ ರಸ್ತೆ, ಒಳಚರಂಡಿ, ವಿದ್ಯುತ್ ದೀಪ ಅಭಿವೃದ್ಧಿ ಕೆಲಸಗಳನಷ್ಟೆ ಅಷ್ಟೇ ಮಾಡುತ್ತಿಲ್ಲ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲೂ ದಾಪುಗಾಲನಾಗಿ ಆಸ್ಪತ್ರೆ, ಶಾಲಾ, ಕಾಲೇಜು ನಿರ್ಮಾಣಗಳನ್ನು ಸಹ ಮಾಡತ್ತಿದ್ದಾರೆ ಎಂದರು.

ನಗರಾಭಿವೃದ್ಧಿ ಸಚಿವ ಹಾಗೂ ಕೆ.ಆರ್.ಪುರಂ ಶಾಸಕ ಬಿ.ಎ.ಬಸವರಾಜು ಮಾತನಾಡಿ, ಬೆಂಗಳೂರು ನಗರದ ಅಭಿವೃದ್ಧಿಗೆ 7 ಸಾವಿರ ಕೋಟಿಗಳ ಅನುದಾನವನ್ನು ಸಿಎಂ ನೀಡಿದ್ದಾರೆ. ಮಾರತ್ತಹಳ್ಳಿ, ವೈಟ್ ಫೀಲ್ಡ ಮುಖ್ಯ ರಸ್ತೆ ಕಲ್ಪಿಸುವ 19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಮೃತ ನಗರೋತ್ಥಾನ ಯೋಜನೆಯಲ್ಲಿ ಕೆಳಸೇತುವೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಟೀನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರಿಗೆ ಎಲಿವೇಟೆಡ್ ಕಾರಿಡಾರ್‍ಮಾಡಲು ಅನುದಾನವನ್ನು ಸಹ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಅಧಿಕಾರಿಗಳಾದ ರಾಕೇಶ್ ಸಿಂಗ್, ತ್ರಿಲೋಕ್ ಚಂದ್ರ, ಸ್ಥಳೀಯ ಮುಖಂಡರಾದ ಮಾರ್ಕೆಟ್ ರಮೇಶ್, ಪಾಲಿಕೆ ಮಾಜಿ ಸದಸ್ಯ ಎಸ್.ಜಿ. ನಾಗರಾಜ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Bengaluru, traffic, control, flyover, CM Bommai,

Articles You Might Like

Share This Article