ಬೆಂಗಳೂರು,ಫೆ.11- ವಾಹನ ಸವಾರರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ನಿನ್ನೆ ಸಂಜೆಯವರೆಗೂ 85 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಕೊನೆ ದಿನವಾದ ಇಂದು ಒಟ್ಟು 100 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಇದೆ.
ಹೈಕೋರ್ಟ್‍ನ ಲೋಕಾ ಅದಾಲತ್‍ನಲ್ಲಿ ಸೂಚಿಸಿದ ಪ್ರಕಾರ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಶೇ.50 ರಿಯಾಯಿತಿಯೊಂದಿಗೆ ದಂಡ ಸಂಗ್ರಹಿಸಲು ಫೆ.3ರಿಂದ ಆರಂಭಿಸಲಾಯಿತು. ಆರಂಭದಿಂದಲೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ಏಳು ಕೋಟಿ ರೂಪಾಯಿ ಸಂಗ್ರಹವಾಗಿ, 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿದ್ದವು. ಎಂಟನೆ ದಿನವಾದ ನಿನ್ನೆ ಸಂಜೆಯವರೆಗೂ 31,11,546 ಪ್ರಕರಣಗಳು ಇತ್ಯರ್ಥವಾಗಿದ್ದು, ಒಟ್ಟು 85,83,07,541 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಶೇ.50 ರಿಯಾಯಿತಿ ದಂಡ ವಸೂಲಿಯಲ್ಲಿ ಪೊಲೀಸರಿಂದ ನಿಯಮ ಉಲ್ಲಂಘನೆ
ಇಂದು ಮಧ್ಯ ರಾತ್ರಿ 12 ಗಂಟೆಯವರೆಗೂ ದಂಡ ಪಾವತಿಸಲು ಕಾಲಾವಕಾಶವಿದೆ. ಹಾಗಾಗಿ ವಾಹನ ಸವಾರರು, ಮಾಲೀಕರು ದಂಡ ಪಾವತಿಗಾಗಿ ವಿವಿಧ ಸಂಚಾರಿ ಠಾಣೆಗಳಿಗೆ ಮುಗಿ ಬಿದ್ದು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುತ್ತಿದ್ದಾರೆ. ದುಬಾರಿ ದಂಡದಿಂದಾಗಿ ಜನರ ಜೇಬಿಗೆ ಕತ್ತರಿ ಬೀಳುತ್ತಿತ್ತು.
ರಿಯಾಯಿತಿ ಸೌಲಭ್ಯ ಘೋಷಿಸಿದ ಬಳಿಕ ಬಹಳಷ್ಟು ಜನ ಪ್ರಕರಣಗಳಿಂದ ಮುಕ್ತರಾಗಲು ಮುಂದಾಗಿದ್ದಾರೆ. ಆನ್‍ಲೈನ್‍ನಲ್ಲಿ ಎಲ್ಲಿಲ್ಲದ ಸ್ಪಂದನೆ ವ್ಯಕ್ತವಾಗಿದೆ. ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿರುವವರು ನೇರವಾಗಿ ಠಾಣೆಗಳಿಗೆ ತೆರಳಿ ದಂಡ ಪಾವತಿಸುತ್ತಿದ್ದಾರೆ.
BIG NEWS : ಬೆಂಗಳೂರಿನಲ್ಲಿ ಅಲ್‍ಖೈದಾ ಲಿಂಕ್ ಹೊಂದಿರುವ ಶಂಕಿತ ಉಗ್ರನ ಸೆರೆ
ಬಹುತೇಕ ಪ್ರಕರಣಗಳು ಅಂತ್ಯಗೊಂಡಂತಾಗಿದ್ದು, ಸರ್ಕಾರಕ್ಕೂ ಹೆಚ್ಚಿನ ಆದಾಯ ಬಂದಿದೆ. ವಾಹನ ಸವಾರರು ದಂಡನೆಯಿಂದ ಮುಕ್ತರಾಗಿ ಮುಂದಿನ ದಿನಗಳಲ್ಲಿ ನಿರ್ಭೀತಿಯಿಂದ ವಾಹನ ಚಲಾಯಿಸಲು ಅವಕಾಶ ಕಲ್ಪಿಸಿದಂತಾಗಿದೆ. ಒಂದು ವೇಳೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡರೆ ನಾಳೆಯಿಂದ ಪೂರ್ಣ ಪ್ರಮಾಣದ ದಂಡವನ್ನು ತೆರಬೇಕಾಗಲಿದೆ.
Bengaluru, traffic, fine, collection, last day,