ಬೆಂಗಳೂರು, ಫೆ.9- ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ಅವಧಿ ಮುಕ್ತಾಯಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ. ದಂಡ ಪಾವತಿಸುವವರಿದ್ದರೆ ಕೂಡಲೇ ಈ ರಿಯಾಯಿತಿಯನ್ನು ಸದುಪಯೋಗಪಡಿಸಿಕೊಂಡು ದಂಡದಿಂದ ಮುಕ್ತರಾಗಬಹುದಾಗಿದೆ.
ಸಂಚಾರ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಫೆ. 11ರವರೆಗೆ ಶೇ. 50ರಷ್ಟು ರಿಯಾಯಿತಿಗೆ ಸಾರಿಗೆ ಇಲಾಖೆ ಆದೇಶಿಸಿತ್ತು. ಈ ರಿಯಾಯಿತಿ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸಂಚಾರ ಉಲ್ಲಂಘನೆ ಸಂಬಂಧ ಹಳೆ ಪ್ರಕರಣಗಳ ದಂಡ ಪಾವತಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ
ಈ ನಡುವೆ ಆರ್ಥಿಕ ಸಂಕಷ್ಟದಲ್ಲಿರುವ ವಾಹನ ಸವಾರರು ದಂಡ ಪಾವತಿ ದಿನಾಂಕವನ್ನು ವಿಸ್ತರಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ರಿಯಾಯಿತಿ ಅವಯಲ್ಲಿ ನಿರೀಕ್ಷೆಗೂ ಮೀರಿ ದಂಡ ಸಂಗ್ರಹವಾಗಿದೆ. ಇದುವರೆಗೂ 18 ಲಕ್ಷ ಪ್ರಕರಣಗಳು ಇತ್ಯರ್ಥವಾಗಿದ್ದು, ಒಟ್ಟು 51 ಕೋಟಿ 85 ಲಕ್ಷ 40 ಸಾವಿರ 531 ರೂ. ಸಂಗ್ರಹವಾಗಿ ಖಜಾನೆಗೆ ಸೇರಿದೆ.