ಬೆಂಗಳೂರು, ಫೆ.10- ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ಅಧಿವ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದ್ದು, ನಾಳೆ ರಾತ್ರಿ 12 ಗಂಟೆವರೆಗೂ ದಂಡ ಕಟ್ಟಬಹುದಾಗಿದೆ.
ಸಂಚಾರ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಫೆ.11ರ ವರೆಗೆ ಶೇ.50ರಷ್ಟು ರಿಯಾಯಿತಿಗೆ ಸಾರಿಗೆ ಇಲಾಖೆ ಆದೇಶಿಸಿತ್ತು. ಈ ರಿಯಾಯಿತಿಯು ನಾಳೆ ಮಧ್ಯರಾತ್ರಿವರೆಗೆ ಮಾತ್ರ ಇರಲಿದೆ.
ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ಕುರ್ಚಿಗಳು ಖಾಲಿ ಖಾಲಿ
ಸಂಚಾರ ಉಲ್ಲಂಘನೆ ಸಂಬಂಧ ಹಳೆ ಪ್ರಕರಣಗಳ ದಂಡ ಪಾವತಿಗೆ ರಿಯಾಯ್ತಿ ನೀಡಿರುವುದರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಆರ್ಥಿಕ ಸಂಕಷ್ಟದಲ್ಲಿರುವ ವಾಹನ ಸವಾರರು ದಂಡ ಪಾವತಿ ದಿನಾಂಕವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ನಿರ್ಮಾಣ
ಈ ರಿಯಾಯಿತಿ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ದಂಡ ಸಂಗ್ರಹವಾಗಿದೆ. ಇದುವರೆಗೂ 23,73,852 ಪ್ರಕರಣಗಳು ಇತ್ಯರ್ಥವಾಗಿದ್ದು, ನಿನ್ನೆವರೆಗೂ ಒಟ್ಟು 65 ಕೋಟಿ 93 ಲಕ್ಷ 60 ಸಾವಿರ 291 ರೂ. ಸಂಗ್ರಹವಾಗಿದೆ. ಇಂದು 75 ಕೋಟಿ ರೂ. ದಾಟುವ ನಿರೀಕ್ಷೆ ಇದೆ.
Bengaluru, traffic, police, fine,