ಬೆಂಗಳೂರು,ಡಿ.9- ಇನ್ಮುಂದೆ ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿದರೆ, ರೂಲ್ಸ್ ಬ್ರೇಕ್ ಮಾಡಿದರೆ ಮುಲಾಜಿಲ್ಲದೆ ದಂಡ ಪಾವತಿಸಲಬೇಕು. ಏಕೆಂದರೆ, ವಾಹನ ಸವಾರರ ಮೇಲೆ ಸಂಚಾರಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅವರ ಕಣ್ತಪ್ಪಿಸಿ ಬಚಾವಾಗಲು ಸಾಧ್ಯವೇ ಇಲ್ಲ.
ಪೊಲೀಸರು ಇಲ್ಲ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸ ಬಹುದು, ತ್ರಿಬಲ್ ರೈಡಿಂಗ್ ಹೋಗಬಹುದು, ಸಿಗ್ನಲ್‍ನಲ್ಲಿ ಯಾರು ಇಲ್ಲ ಎಂದು ಸಿಗ್ನಲ್ ಜಂಪ್ ಮಾಡಬಹುದು ಎಂದು ಭಾವಿಸಿಕೊಂಡಿದ್ದರೆ ನಿಮ್ಮ ಊಹೆ ತಪ್ಪು ಯಾಕೆಂದರೆ ನೀವು ಯಾರಿಗೂ ತಿಳಿಯದಂತೆ ಮಾಡುವ ತಪ್ಪು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿರುತ್ತದೆ.
ಅದೇಗೆ ಅಂತೀರಾ… ಬೆಂಗಳೂರು ಸಂಚಾರಿ ಪೊಲೀಸರು ಅಪ್‍ಡೇಟ್ ಆಗಿದ್ದು, ಸಂಚಾರಿ ನಿಯಮ ಉಲ್ಲಂಘಿಸುವವರ ಪತ್ತೆಗೆ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ಮೊರೆ ಹೋಗಿದ್ದಾರೆ.
ಹೊಸಕೋಟೆ ಕಾಂಗ್ರೆಸ್‍ನಲ್ಲಿ ಶಾಸಕರ ವಿರುದ್ಧ ಅಸಮಾಧಾನ ಸ್ಪೋಟ
ಐಟಿಎಂ ಸಿಸ್ಟಮ್‍ನಲ್ಲಿ ಹೈಯೆಂಡ್ ಕ್ಯಾಮರಾ ಬಳಸಿ ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಸಂಚಾರಿ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ. ಅ ಕ್ಯಾಮರಾಗಳಲ್ಲಿ ನಿಮ್ಮ ಸಂಪೂರ್ಣ ಚಲನವಲನ ರೆಕಾರ್ಡ್ ಆಗುತ್ತಿರುತ್ತದೆ.
ದಿನದ 24 ಗಂಟೆಗಳ ಕಾಲ ಐಟಿಎಂಸಿ ಸಿಸ್ಟಮ್‍ಗಳಲ್ಲಿ ಅಳವಡಿಸಿ ರುವ ಹೈ ಎಂಡ್ ಕ್ಯಾಮರಾಗಳು ಆನ್ ಆಗಿರುವುದರಿಂದ ರಾತ್ರಿ ವೇಳೆ ಯಾರು ಇಲ್ಲ ಎಂದು ಬೇಜವಾಬ್ದಾರಿಯಿಂದ ನೀವು ವಾಹನ ಚಾಲನೆ ಮಾಡುವುದು ರೆಕಾರ್ಡ್ ಆಗಲಿದೆ.
ಈಗಾಗಲೇ ನಗರದ 50ಕ್ಕೂ ಹೆಚ್ಚು ಜಂಕ್ಷನ್‍ಗಳಲ್ಲಿ 250 ಹೈ ಎಂಡ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ನಗರದ ಬಹುತೇಕ ವೃತ್ತಗಳಲ್ಲೂ ಕ್ಯಾಮರಾ ಅಳವಡಿಸಲು ತೀರ್ಮಾನಿಸ ಲಾಗಿದೆ.
ಹೇಗೆ ಕೆಲಸ ಮಡುತ್ತೆ ಈ ಕ್ಯಾಮರಾಗಳು..?
ಅತ್ಯಾಧುನಿಕ ಸಲಕರಣೆ ಹೊಂದಿರುವ ಈ ಐಟಿಎಂ ಕ್ಯಾಮರಾಗಳು ತ್ರಿಬಲ್ ರೈಡಿಂಗ್ ಮಾಡುವ ವಾಹನ ಸವಾರರ ಮೂರು ಮಂದಿಯ ಪೋಟೋ ಕ್ಲಿಕ್ಕಿಸುತ್ತದೆ, ಮಾತ್ರವಲ್ಲ ನಂಬರ್ ಪ್ಲೇಟ್ ಸಮೇತ ವಿಡಿಯೋ ಮಾಡುವ ಕ್ಯಾಪಸಿಟಿ ಹೊಂದಿದೆ.
ಸಿಎಂ ಬೊಮ್ಮಾಯಿ ಜೊತೆ ಆರ್‌ಎಸ್‌ಎಸ್ ನಾಯಕ ಮುಕುಂದ್ ಗುಪ್ತ ಮಾತುಕತೆ
ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸುವ ಚಾಲಕರನ್ನು ಕವರ್ ಮಾಡುವ ಸಾಮಥ್ರ್ಯ ಹೊಂದಿವೆ ಐಟಿಎಂ ಕ್ಯಾಮರಾಗಳು. ಸಿಗ್ನಲ್ ಬ್ರೇಕ್ ಮಾಡೋದು, ಓವರ್ ಸ್ಪೀಡ್‍ನಲ್ಲಿ ವಾಹನ ಚಲಾಯಿಸಿದರೂ ಐಟಿಎಂ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಅರ್ಜೆಂಟ್ ನಲ್ಲಿ ಸ್ಪಾಟ್ ಲೈನ್ ದಾಟಿದ್ರೂ ಬೀಳುತ್ತೆ ಪ್ರೂಫ್ ಸಮೇತ ಫೈನ್, ರೂಲ್ಸï ಬ್ರೇಕ್ ಮಾಡಿದ ಕೆಲವೇ ಸೆಕೆಂಡ್‍ಗಳಲ್ಲೇ ವಿಡಿಯೋ ಜೊತೆ ನಿಮ್ಮ ಬಳಿಗೆ ಪೊಲೀಸರು ಬರುತ್ತಾರೆ, ಸ್ಥಳದಲ್ಲೇ ಕ್ಯೂ ಆರ್ ಕೋಡ್ ಮೂಲಕ ಫೈನ್ ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ, 24 ಗಂಟೆಗಳಲ್ಲೇ ನಿಮ್ಮ ಮನೆ ಬಾಗಿಲಿಗೆ ಪೊಲೀಸರ ನೋಟೀಸ್ ಬರೋದಂತೂ ಗ್ಯಾರಂಟಿ. ನೊಟೀಸ್ ಬಂದ್ಮೇಲೆ ಕೋರ್ಟ್ ಗೆ ಹೋಗಿ ಫೈನ್ ಕಟ್ಟಬೇಕಾಗುತ್ತದೆ.
Bengaluru, traffic, violation, ITM cameras, trafficpolice,