ಬೆಂಗಳೂರು, ಜ.16- ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಸುತ್ತಾಡುತ್ತಾ ಸರ ಅಪಹರಿಸುತ್ತಿದ್ದ ಇಬ್ಬರು ರೌಡಿಗಳು ಸೇರಿದಂತೆ ಮೂವರು ಆರೋಪಿಗಳನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿ 90 ಸಾವಿರ ಬೆಲೆಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಪ್ರಾವಿಜನ್ ಸ್ಟೋರ್ ಅಂಗಡಿ ನಡೆಸುವ ಪಿರ್ಯಾದುದಾರರು ಡಿ. 14ರಂದು ಸಂಜೆ 5.45ರ ಸುಮಾರಿನಲ್ಲಿ ಮಗನನ್ನು ಕರೆದುಕೊಂಡು ಹೆಗ್ಗನಹಳ್ಳಿ ಕ್ರಾಸ್, ಸಂಜೀವಿನಿ ನಗರ, 8ನೇ ಕ್ರಾಸ್ ನಲ್ಲಿ ನಡೆದು ಕೊಂಡು ಮನೆಗೆ ಹೋಗುತ್ತಿದ್ದರು.
ಆ ವೇಳೆ ಎದುರಿನಿಂದ ಬೈಕ್ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ಇಬ್ಬರು ಪಿರ್ಯಾದಿ ಬಳಿ ಬಂದು ಕೊರಳಲ್ಲಿದ್ದ 20 ಗ್ರಾಂ ತೂಕದ ತಾಳಿ ಸಮೇತ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 90 ಸಾವಿರ ಬೆಲೆಯ 20 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಎರಡು ತಲ್ವಾರ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಪ್ರಮುಖ ಆರೋಪಿಯು ಕೆಜಿ ಹಳ್ಳಿ ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಯಾಗಿದ್ದು, ಎರಡನೇ ಆರೋಪಿಯು ರಾಜಗೋಪಾಲನಗರ ಠಾಣೆಯ ರೌಡಿ.
ಪ್ರೀಯಾಂಕ ಗಾಂಧಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ‘ಕೈ’ನಾಯಕರು
ಆರೋಪಿಗಳು ಸಾರ್ವಜನಿಕರ ಬಳಿ ಸುಲಿಗೆ ಮಾಡುವುದನ್ನೇ ಪ್ರವೃತ್ತಿಯಾಗಿಸಿಕೊಂಡಿದ್ದರು. ಈ ಆರೋಪಿಗಳ ಬಂಧನದಿಂದ ರಾಜಗೋಪಾಲನಗರ, ಬ್ಯಾಡರಹಳ್ಳಿ, ಶಿವಾಜಿನಗರ, ಕುಮಾರಸ್ವಾಮಿ ಲೇಔಟ್, ಬಾಗಲೂರು, ಯಲಹಂಕ ನ್ಯೂಟೌನ್ ಸೇರಿದಂತೆ ಒಟ್ಟು ಆರು ಸುಲಿಗೆ ಪ್ರಕರಣ ಮತ್ತು ಗಂಗಮ್ಮನ ಗುಡಿ ಕೊಲೆ ಬೆದರಿಕೆ ಕೆಜಿ ಹಳ್ಳಿ ಠಾಣೆಯ ಒಂದು ದ್ವಿಚಕ್ರ ವಾಹನ ಪತ್ತೆಯಾಗಿರುತ್ತದೆ.
Bengaluru, Two, rowdies, arrested,