ಅಮರನಾಥಗೌಡ ಹಾಗೂ ದ್ವಾರಕೀಶ್‍ಗೆ ಗೌರವ ಡಾಕ್ಟರೇಟ್ ಪ್ರದಾನ

Social Share

ಬೆಂಗಳೂರು,ಡಿ.5- ಅಮೆರಿಕ ಕನ್ನಡ ಸಂಘಟನೆಗಳ ಒಕ್ಕೂಟ(ಅಕ್ಕ)ದ ಸಂಸ್ಥಾಪಕ ಅಧ್ಯಕ್ಷರಾದ ಅಮರನಾಥಗೌಡ, ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಬಂಗ್ಲೆ ಶಾಮರಾವ್ ದ್ವಾರಕನಾಥ್ (ದ್ವಾರಕೀಶ್), ಚಿತ್ರಕಲಾವಿದ ಡಾ.ಕುಮಾರ್ ಸೇರಿದಂತೆ ಹಲವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾನಿಲಯದ 57ನೇ ವಾರ್ಷಿಕ ಘಟಿಕೋತ್ಸವದಲ್ಲಿ, ವಿವಿಗಳ ಕುಲಾಪತಿಗಳಾಗಿರುವ ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಎಸ್.ಎಂ.ಜಯಕರ ಸೇರಿದಂತೆ ಹಲವು ಗಣ್ಯರು ಈ ಪದವಿ ನೀಡಿ ಸನ್ಮಾನಿಸಿದರು.

ದೂರದ ಅಮೆರಿಕದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಡಾ.ಅಮರನಾಥ ಗೌಡ ಅವರಿಗೆ, ಕಳೆದ ಐದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸೇವೆ ಸಲ್ಲಿಸಿರುವ ದ್ವಾರಕೀಶ್ ಅವರಿಗೆ ಹಾಗೂ ಖ್ಯಾತ ಕಲಾವಿದ, ಚಿತ್ರಕಲಾವಿದ, ಛಾಯಾಗ್ರಾಹಕ, ಸಮಾಜ ಸೇವಕರಾದ ಡಾ. ಕುಮಾರ್ ಅವರಿಗೆ ಇಂದು ಗೌರವ ಡಾಕ್ಟರೇಟ್ ನೀಡಲಾಯಿತು.

ಇದೇ ಸಂದರ್ಭದಲ್ಲಿ ಪಿಎಚ್‍ಡಿ ಪದವೀಧರರು ಹಾಗೂ ರ್ಯಾಂಕ್ ಪಡೆದ ಸುಮಾರು 167 ವಿದ್ಯಾರ್ಥಿಗಳಿಗೆ ಸ್ವರ್ಣಪದಕ ಮತ್ತು ನಗದು ಬಹುಮಾನವನ್ನು ನೀಡಲಾಯಿತು. ಎಂಎ ಕನ್ನಡ ವಿಭಾಗದಲ್ಲಿ ಪ್ರಥಮ ಶ್ರೇಣಿ ಪಡೆದ ಕೀರ್ತಿ ನೇಗಿನಾಲ್, ಗಣೇಶ್‍ಮೂರ್ತಿ.ಜಿ.ಎಸ್, ಚೈತ್ರ.ಎಸ್, ಅಂಬಿಕಾ.ಬಿ.ವಿ, ದಯಾನಂದ್.ಎಸ್, ಮಹೇಶ್.ಕೆ.ಸಿ, ಅನುಷಾ.ಜೆ.ಎನ್, ಮಾಲಾಶ್ರೀ.ಕೆ.ಕೆ ಹಾಗೂ ಮಂಜುನಾಥ್ ಅವರಿಗೆ ಸ್ವರ್ಣಪದಕ ಮತ್ತು ಬಹುಮಾನವನ್ನು ವಿತರಿಸಲಾಯಿತು.

ಎಂಎ ಆಂಗ್ಲ ಭಾಷೆಯಲ್ಲಿ ರಜನಿ ರವೀಂದ್ರ, ಶ್ವೇತ.ಎಚ್, ಎಂಎ ಸಂಸ್ಕøತ ವಿಭಾಗದಿಂದ ಮಯೂರ, ಎಂಎ ಹಿಂದಿ ವಿಭಾಗದಲ್ಲಿ ರವೀಂದ್ರ ಭಾಟಿ, ಫರ್ನಾಂಡೀಸ್, ಜ್ಯೋತಿ, ಜೆನೈರ್ ಅಂಬಾರ್, ಎಂಎ ತೆಲುಗು ವಿಭಾಗದಿಂದ ವಂಶಿಕೃಷ್ಣ ಶನಿವಾದ, ಉರ್ದು ವಿಭಾಗದಿಂದ ಗಲ್ಜರ್ ಬಾನು, ಸಬರಿಕ್ ಆಲಿಖಾನ್, ಎಂಎ ಅರ್ಥಶಾಸ್ತ್ರ, ಎಂಎ ರಾಜ್ಯಶಾಸ್ತ್ರ, ಎಂಎ ಇತಿಹಾಸ, ಎಂಎ ಕರ್ನಾಟಕ ಸಂಗೀತ, ಎಂಎ ಕಲಾರಂಗಭೂಮಿ, ಎಂಎ ನೃತ್ಯ, ತತ್ವ ಶಾಸ್ತ್ರ, ಎಂಎ ಮಹಿಳಾ ಅಧ್ಯಯನ, ಎಂಎ ಗ್ರಾಮೀಣಾಭಿವೃದ್ಧಿ ಮತ್ತು ನಿರ್ವಹಣೆ, ಎಂಎ ಸಮಾಜಕಾರ್ಯ,

ಎಂಎ ದೃಶ್ಯಕಲೆ, ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ, ಎಂ.ಎಸ್ಸಿ ಭೌತಶಾಸ್ತ್ರ , ಎಂ.ಎಸ್ಸಿ ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಪರಿಸರ ವಿಜ್ಞಾನ, ಪ್ರಾಣಿ ಶಾಸ್ತ್ರ, ಅನ್ವಯಿಕ ಭೂಗರ್ಭ ಶಾಸ್ತ್ರ, ಅನ್ವಯಿಕ ತಳಿ ಶಾಸ್ತ್ರ , ವಾಕ್ ಮತ್ತು ಶ್ರವಣ, ಮನಶಾಸ್ತ್ರ, ಎಂಕಾಂ, ಎಂಎಸ್ಸಿ, ಎಂಬಿಎ, ಎಮ್‍ಡಿ, ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಎಚ್‍ಎಂ, ಎಲ್‍ಎಲ್‍ಬಿ, ಬಿಎಡ್, ಬಿಪಿಎಡ್, ಬಿಇ, ಸಿವಿಲ್ ಇಂಜಿನಿಯರಿಂಗ್ ಬಿಇ ಮೆಕಾನಿಕಲ್ ಎಂಜಿನಿಯರಿಂಗ್, ಬಿಇ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ವಿಭಾಗದ ಒಟ್ಟು 300 ವಿದ್ಯಾರ್ಥಿಗಳಿಗೆ ಬಂಗಾರ ಪದಕ ನೀಡಲಾಗಿದೆ.

ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್ ತಲುಪಿದ ಇಂಗ್ಲೆಂಡ್

ಇದಕ್ಕೂ ಮುನ್ನ ಸ್ವಾಗತಭಾಷಣ ಮಾಡಿದ ಬೆಂಗಳೂರು ವಿವಿ ಕುಲಪತಿ ಡಾ.ಜಯಕರ.ಎಸ್.ಎಂ ಅವರು, ಬೆಂಗಳೂರು ವಿವಿಯು ನ್ಯಾಕ್ ಮಾನ್ಯತೆಯ ಮೂರನೇ ಅವಯಲ್ಲಿ ಎ ಗ್ರೇಡ್‍ನೊಂದಿಗೆ ಮಾನ್ಯತೆ ಪಡೆದಿದೆ. ಮರುಮಾನ್ಯತೆ ಸಿದ್ದತೆ ಪ್ರಗತಿಯಲ್ಲಿದ್ದು, ಈ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಸಚಿವಾಲಯ ಎನ್‍ಐಆರ್‍ಎಫ್ ಶ್ರೇಯಾಂಕದ ಪ್ರಕಾರ ವಿವಿಯು ಅಖಿಲಭಾರತ ಮಟ್ಟದಲ್ಲಿ 64ನೇ ಸ್ಥಾನದಲ್ಲಿದೆ. ಕಳೆದ ಬಾರಿ 69ನೇ ಸ್ಥಾನದಲ್ಲಿತ್ತು. ನಮ್ಮ ವಿವಿಯು ಟೈಮ್ಸ್ ಹೈಯರ್ ಎಜುಕೇಷನ್ 2022ರ ಉದ್ಯೋಗಸ್ಥ ಪದವೀಧರರ ಶ್ರೇಯಾಂಕದಲ್ಲಿ ಜಾಗತಿಕವಾಗಿ 242ನೇ ಸ್ಥಾನದಲ್ಲಿದೆ.
ಐಐಟಿಗಳು ಮತ್ತು ಐಎಎಂಗಳ ಹೊರತಾಗಿ 250ಕ್ಕಿಂತ ಹೆಚ್ಚು ಕಡಿಮೆ ಸ್ಥಾನ ಗಳಿಸಿದ ಎರಡು ವಿವಿಗಳಲ್ಲಿ ಬೆಂಗಳೂರು ವಿವಿಯು ಒಂದಾಗಿದೆ ಎಂದು ಪ್ರಸಂಶಿಸಿದರು.

ಮಹಿಳೆ ಗ್ಯಾಂಗ್ ರೇಪ್ ಮಾಡಿ, ಗುಪ್ತಾಂಗಕ್ಕೆ ಸಿಗರೇಟ್‌ನಿಂದ ಸುಟ್ಟ ಕಾಮುಕರು..!

ವಿವಿ ವತಿಯಿಂದ 18 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ನೊಂದಾಯಿಸಲು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಚುನಾವಣಾ ದಾಖಲಾತಿ ಜಾಗೃತಿ ಅಭಿಯಾನವನ್ನು ನಡೆಸಿದ್ದೇವೆ. ಇದಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಹೇಳಿದರು.

ಇದಲ್ಲದೆ 2022 ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಯು ಅ.28ರಂದು ಕೋಟಿ ಕಂಠ ಗೀತೆ ಗಾಯನವನ್ನು ಆಯೋಜಿಸಲಾಗಿತ್ತು. ಸುಮಾರು 1000 ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು.

ಈ ಬಾರಿ ವಿಭಿನ್ನ ತೀರ್ಪು ನೀಡಿ : ಗುಜರಾತ್ ಜನತೆಗೆ ಕೇಜ್ರಿವಾಲ್ ಮನವಿ

ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ನಮ್ಮ ಸಿಬ್ಬಂದಿಯು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಸರ್ಕಾರದಿಂದ ನಮಗೆ ಎಲ್ಲ ರೀತಿಯ ನೆರವು ಸಿಗುತ್ತಿದೆ. ಸಚಿವ ಅಶ್ವಥ್ ನಾರಾಯಣ ಅವರು ವಿವಿಗಳನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

#BengaluruUniversity, #Honorary, #Doctorate, #Amarnathgowda, #Dwarakish,

Articles You Might Like

Share This Article