ಅಮರನಾಥಗೌಡ ಹಾಗೂ ದ್ವಾರಕೀಶ್‍ಗೆ ನಾಳೆ ಗೌರವ ಡಾಕ್ಟರೇಟ್ ಪ್ರದಾನ

Social Share

ಬೆಂಗಳೂರು, ಡಿ.4- ನಾಳೆ ನಡೆಯಲಿರುವ ಬೆಂಗಳೂರು ವಿಶ್ವವಿದ್ಯಾಲಯದ 57ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅನಿವಾಸಿ ಭಾರತೀಯ ಹಾಗೂ ಅಮೆರಿಕಾ ಕನ್ನಡ ಸಂಘಟನೆಗಳ ಒಕ್ಕೂಟ(ಅಕ್ಕ)ದ ಸಂಸ್ಥಾಪಕ ಅಧ್ಯಕ್ಷರಾದ ಅಮರನಾಥಗೌಡರು, ಕನ್ನಡ ಚಿತ್ರ ರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ದ್ವಾರಕೀಶ್, ಚಿತ್ರಕಲಾವಿದ ಡಾ. ಟಿ.ಅನಿಲ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗತ್ತದೆ.

ಕನ್ನಡ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗೆ ದ್ವಾರಕೀಶ್ ಅವರಿಗೆ, ಕಾನೂನು ಮತ್ತು ಸಮುದಾಯ ಸೇವಾ ಕ್ಷೇತ್ರದಲ್ಲಿ ಕೊಡುಗೆಯನ್ನು ನೀಡಿರುವ ಅಮೆರಿಕಾದ ಕಾನೂನು ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷರಾದ ಅಮರನಾಥ ಗೌಡ ಅವರಿಗೆ, ಖ್ಯಾತ ಕಲಾವಿದ, ಚಿತ್ರಕಲಾವಿದ ಛಾಯಾಗ್ರಾಹಕ, ಸಮಾಜ ಸೇವಕರಾದ ಡಾ. ಟಿ.ಅನಿಲ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪುದಾನ ಮಾಡಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಡಾ.ಎಸ್.ಎಂ. ಜಯಕರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವ ಜರುಗಲಿದ್ದು, ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.

ಹೈಟೆನ್ಷನ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು

ವಿಶ್ವವಿದ್ಯಾಲಯದ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ. ಜಗದೀಶ್ ಕುಮಾರ್ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

57ನೇ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 300 ಬಂಗಾರದ ಪದಕಗಳು ಹಾಗೂ 73 ನಗದು ಬಹುಮಾನಗಳನ್ನು ಒಟ್ಟು 167 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. 267 ಅಭ್ಯರ್ಥಿಗಳಿಗೆ ಡಾಕ್ಟ ರೇಟ್ ಪದವಿ ಪ್ರದಾನ ಮಾಡಲಾಗು ವುದು. ಘಟಿಕೋತ್ಸವದಲ್ಲಿ ಬೆಳ್ಳಿಯ 20 ಗ್ರಾಂ ಬಿಲ್ಲಾಯ ಮೇಲೆ ಮೇಲೆ 1.3 ಗ್ರಾಂ ಚಿನ್ನ ದಿಂದ ಕೆತ್ತಲಾದ ಪದಕಗಳನ್ನು ನೀಡಲಾಗುವುದು ಎಂದು ಹೇಳಿದರು.

ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ : ಬೊಮ್ಮಾಯಿ

ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮತ್ತು ಶಿಕ್ಷಣದಲ್ಲಿ ಹೊಸ ವಿಧಾನಗಳನ್ನು ಅನುಸರಿಸುವಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಯಾವಾಗಲೂ ಮುಂಚೂಣಿಯಲ್ಲಿದೆ. ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡು

ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ 34,337 ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣಪತ್ರಗಳನ್ನು ಘಟಿಕೋತ್ಸವದ ನಂತರ, ಭಾರತ ಸರ್ಕಾರದ ಉಪಕ್ರಮವಾದ ಡಿಜಿ ಲಾಕರ್ ಮತ್ತು ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿ ನಿಂದ ಡೌನ್‍ಲೋಡ್ ಮಾಡಬಹುದಾಗಿದೆ. ಘಟಿಕೋ ತ್ಸವದ ನಂತರ ಪ್ರಮಾಣಪತ್ರಗಳನ್ನು ಎಂದಿನಂತೆ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯಸಭೆ ವಿಪಕ್ಷ ನಾಯಕರಾಗಿಯೂ ಖರ್ಗೆ ಮುಂದುವರಿಕೆ

ಪರೀಕ್ಷೆ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಪರೀಕ್ಷೆಯು ಮುಗಿದ ಕೊನೆಯ ದಿನಾಂಕದಿಂದ ಒಂದು ವಾರದೊಳಗೆ ಫಲಿತಾಂಶಗಳನ್ನು ಪ್ರಕಟಿಸಲಾಗಿರುವುದರಿಂದ ಸ್ನಾತಕೋತ್ತರ ಕೋರ್ಸ್‍ಗಳ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವಾಗಿರುತ್ತದೆ ಎಂದರು.

Articles You Might Like

Share This Article