ಚಿಲುಮೆ ಕಚೇರಿಯಲ್ಲಿ ಪ್ರಭಾವಿ ಸಚಿವರೊಬ್ಬರ ಚೆಕ್ ಪತ್ತೆ

Social Share

ಬೆಂಗಳೂರು,ನ.19- ಮತದಾರರ ವೈಯಕ್ತಿಕ ಮಾಹಿತಿ ಕದ್ದ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯಲ್ಲಿ ಪ್ರಭಾವಿ ಸಚಿವರೊಬ್ಬರ ಚೆಕ್, ಬ್ರೋಚರ್ ಹಾಗು ಎನ್‍ವಲಪ್‍ಗಳು ಸಿಕ್ಕಿರುವುದು ಕುತೂಹಲ ಕೆರಳಿಸಿದೆ.

ಇದರ ಜೊತೆಗೆ ಹೊಂಬಾಳೆ ಸಂಸ್ಥೆಗೆ ಸೇರಿದ ಕೆಲವು ದಾಖಲೆಗಳು ಸಿಕ್ಕಿವೆ ಎಂಬುದು ತಿಳಿದುಬಂದಿದೆ. ಕಾಂಗ್ರೆಸ್ ಮುಖಂಡರು ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಂತೆ ಚಿಲುಮೆ ಸಂಸ್ಥೆಯನ್ನು ಸಂಪೂರ್ಣ ಖಾಲಿ ಮಾಡಲಾಗಿತ್ತು.

ಈ ಆರೋಪ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಚಿಲುಮೆ ಸಂಸ್ಥೆ ಮೇಲೆ ಪೊಲೀಸರು ದಾಳಿ ಮಾಡಿದಾಗ ಕೆಲ ಕಂಪ್ಯೂಟರ್‍ಗಳು, ಸಿಪಿಯು ಸೇರಿದಂತೆ ಇನ್ನಿತರ ದಾಖಲೆಗಳು ಸಿಕ್ಕಿವೆ.

ಕದ್ದ ಮಾಹಿತಿಯನ್ನು ಚುನಾವಣೆ ವೇಳೆ ಮಾರಿಕೊಳ್ಳಲು ಮುಂದಾಗಿತ್ತಾ ಚಿಲುಮೆ ಸಂಸ್ಥೆ..!

ಆದರೆ, ಚಿಲುಮೆ ಕಚೇರಿಯಲ್ಲಿ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ ಚೆಕ್, ಬ್ರೋಚರ್ ಹಾಗೂ ಎನ್‍ವಲಪ್‍ಗಳು ಮಾತ್ರವಲ್ಲದೆ ಹೊಂಬಾಳೆ ಸಂಸ್ಥೆಯ ಕೆಲ ದಾಖಲೆಗಳು ಲಭ್ಯವಾಗಿವೆ ಎಂಬುದು ಗೊತ್ತಾಗಿದೆ.

ಆರೋಪ ಕೇಳಿ ಬರುತ್ತಿದ್ದಂತೆ ಚಿಲುಮೆ ಸಂಸ್ಥೆಯವರು ತಮ್ಮ ಇಡಿ ಕಚೇರಿಯನ್ನು ಖಾಲಿ ಮಾಡಿದ್ದರು. ಪ್ರಮುಖ ದಾಖಲೆಗಳಿರುವ ಕಂಪ್ಯೂಟರ್‍ಗಳು ಮತ್ತಿತರ ಪ್ರಮುಖ ವಸ್ತುಗಳನ್ನು ಟಿ.ಬೇಗೂರು ಸಮೀಪವಿರುವ ಸಂಸ್ಥೆಯ ನಿರ್ದೇಶಕ ಕೃಷ್ಣೇಗೌಡ ಅವರ ತೋಟದ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ವೋಟರ್ ಐಡಿ ಗೋಲ್‍ಮಾಲ್, ಆಯೋಗಕ್ಕೆ ಕಾಂಗ್ರೆಸ್ ದೂರು

ಈ ಬಗ್ಗೆ ಮಾಹಿತಿ ದೊರೆತಿದ್ದು ಶೀಘ್ರವೇ ಅಲ್ಲಿಗೆ ತೆರಳಿ ದಾಖಲೆ ವಶಪಡಿಸಿ ಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

Bengaluru, voter, data, theft, Chilume, office, minister, check ,

Articles You Might Like

Share This Article