ಅಕ್ರಮದ ನಡುವೆಯೆ ‘ಚಿಲುಮೆ’ಯಿಂದ ಟೆಂಡರ್ ಲಾಬಿ

Social Share

ಬೆಂಗಳೂರು, ನ.25- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಟೀಕೆಗೆ ಗುರಿಯಾಗಿರುವ ಚಿಲುಮೆ ಸಂಸ್ಥೆ ತನ್ನ ಮೇಲಿನ ಆರೋಪದ ಹೊರತಾಗಿಯೂ ಮತ್ತೊಂದು ಟೆಂಡರ್ ಪಡೆಯಲು ಲಾಬಿ ನಡೆಸಿರುವುದು ಬೆಳಕಿಗೆ ಬಂದಿದೆ.
ಬಿಬಿಎಂಪಿ ವತಿಯಿಂದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕಲ್ಯಾಣ ಸಮಿತಿ ವಿಭಾಗ ಈ ಕುರಿತು ಟೆಂಡರ್ ಅನ್ನು ಆಹ್ವಾನಿಸಿದೆ.

ಚಿಲುಮೆ ಸಂಸ್ಥೆ ಟೆಂಡರ್ ಗೆ ಬಿಡ್ ಸಲ್ಲಿಸಿದ್ದು, ಗುತ್ತಿಗೆ ಪಡೆದುಕೊಳ್ಳಲು ಹರಸಾಹಸ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರೂ ಸೇರಿದಂತೆ ಭಾರಿ ಪ್ರಭಾವ ಬಳಸಿ ಟೆಂಡರ್ ಗಿಟ್ಟಿಸುವ ಯತ್ನ ನಡೆಸಿದೆ.

ಮತದಾರರ ಜಾಗೃತಿ ಕುರಿತ ಕಾರ್ಯಕ್ರಮಗಳನ್ನು ಗುತ್ತಿಗೆ ಪಡೆದಿದ್ದ ಚಿಲುಮೆ ಸಂಸ್ಥೆ ಕಾಲ ನಂತರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ಹಸ್ತಕ್ಷೇಪ ನಡೆಸಿವೆ ಎಂಬ ಆರೋಪಗಳು ಕೇಳಿಬಂದಿದೆ. ಇದಷ್ಟೇ ಅಲ್ಲದೆ ಮತದಾರರ ದತ್ತಾಂಶವನ್ನು ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿರುವ ಆರೋಪಗಳು ತನಿಖೆಗೊಳಪಡುತ್ತಿವೆ.

ಬೆಲ್ಟ್ ಹಾಗೂ ದೊಣ್ಣೆಯಿಂದ ವಸತಿ ಶಾಲೆಯ ಮಕ್ಕಳ ಮೇಲೆ ಹಲ್ಲೆ

ಒಂದೆಡೆ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಕೇಂದ್ರ ಚುನಾವಣಾ ಆಯೋಗ ನಿಗಾ ವಹಿಸಿದೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ. ಬಿಬಿಎಂಪಿಯ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ವಿಚಾರಣೆಯೂ ನಡೆಯುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಇದು ಮಾತಿನ ಸಮರಕ್ಕೂ ನಾಂದಿ ಹಾಡಿದೆ.

ಸರ್ಕಾರಿ ಕಚೇರಿ ದುರ್ಬಳಕೆ : ಜೀವರಾಜ್ ವಿರುದ್ಧ ಕ್ರಮಕ್ಕೆ ಮುರೊಳ್ಳಿ ಆಗ್ರಹ

ಇಷ್ಟೆಲ್ಲದರ ನಡುವೆ ಚಿಲುಮೆ ಸಂಸ್ಥೆ ಮತ್ತೊಂದು ಸಂಸ್ಥೆಯ ಟೆಂಡರ್ ಪಡೆಯಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಒಂದು ವೇಳೆ ಚಿಲುಮೆ ಸಂಸ್ಥೆ ಟೆಂಡರ್‍ನಲ್ಲಿ ಭಾಗವಹಿಸಿದ್ದರೂ ಅವರ ಬಿಡ್‍ನ್ನು ಪರಿಗಣಿಸುವುದಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋತ್ ಸ್ಪಷ್ಟಪಡಿಸಿದ್ದಾರೆ.

ಕುಡಿದು ಕೋರ್ಟ್‍ಗೆ ಬಂದ ಕಕ್ಷಿದಾರನಿಗೆ ದಂಡ

ಮತ್ತೊಂದೆಡೆ ಚಿಲುಮೆ ಸಂಸ್ಥೆಗೆ ಈಗಾಗಲೇ ನೀಡಿರುವ ಎಲ್ಲಾ ಟೆಂಡರ್‍ಗಳನ್ನು ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಲು ತಯಾರಿಗಳು ನಡೆದಿವೆ.

Bengaluru, voter, data, theft, Chilume, Tender, lobby,

Articles You Might Like

Share This Article