ಕದ್ದ ಮಾಹಿತಿಯನ್ನು ಚುನಾವಣೆ ವೇಳೆ ಮಾರಿಕೊಳ್ಳಲು ಮುಂದಾಗಿತ್ತಾ ಚಿಲುಮೆ ಸಂಸ್ಥೆ..!

Social Share

ಬೆಂಗಳೂರು,ನ.19- ಚಿಲುಮೆ ಸಂಸ್ಥೆಯಿಂದ ಓಟರ್ ಐಡಿ ಡಿಲೀಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುತ್ತಿದೆ. ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಚಿಲುಮೆ ಸಂಸ್ಥೆಯವರು ತಾವು ಕಳುವು ಮಾಡಿದ್ದ ಮಾಹಿತಿಯನ್ನು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಮಾರಾಟ ಮಾಡಿಕೊಳ್ಳಲು ತೀರ್ಮಾನಿಸಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಮತದಾರರ ಮಾಹಿತಿ ಕಲೆ ಹಾಕಲು ಚಿಲುಮೆ ಸಂಸ್ಥೆಯವರು ಈ ಹಿಂದೆ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವುದಕ್ಕೆ ಇದೀಗ ಸಾಕ್ಷಿ ದೊರೆತಿದೆ. ಕಾಲೇಜು ವಿದ್ಯಾರ್ಥಿಗಳ ಐಡಿ ಕಾರ್ಡ್ ಬಳಕೆ ಮಾಡಿಕೊಂಡು ಚಿಲುಮೆ ಸಂಸ್ಥೆಯವರು ಸರ್ವೇ ಮಾಡಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ.

ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆಗೆ ನಾಳೆ ಸಿಎಂ ಚಾಲನೆ

ಮತದಾರರ ಮಾಹಿತಿ ಕಲೆ ಹಾಕಲು ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿದ್ದರಿಂದ ಅನುಮಾನಗೊಂಡ ಬಸವನಗುಡಿಯ ಬಾಲಾಜಿ ಎಂಬುವರು ಪ್ರಶ್ನಿಸಿದಾಗ ವೋಟರ್ ಐಡಿ ವೇರಿಪಿಕೇಷನ್ ಮಾಡೋಕೆ ಬಂದಿದ್ದಿವಿ ಎಂದಿದ್ದರು.

ಮತದಾರರ ವೈಯಕ್ತಿಕ ಮಾಹಿತಿ ಕಳುವಿನ ಬಗ್ಗೆ ದಾಖಲೆ ಸಿಕ್ಕಿಲ್ಲ: ತುಷಾರ್ ಗಿರಿನಾಥ್

ನಿಮಗೆ ಅನುಮತಿ ನೀಡಿದವರು ಯಾರು ಎಂದು ಮರು ಪ್ರಶ್ನಿಸಿದಾಗ ವೇರಿಫಿಕೇಶನ್‍ಗೆ ಬಂದಿದ್ದವರು ಸ್ಥಳದಿಂದ ಕಾಲ್ಕಿತ್ತಿದ್ದರು. ಆ ಸಂದರ್ಭದಲ್ಲಿ ಬಿಬಿಎಂಪಿ ಸಿಬ್ಬಂದಿಗಳೇ ಮಧ್ಯ ಪ್ರವೇಶಿಸಿ ಬಾಲಾಜಿ ಅವರನ್ನು ಸಮಾಧಾನ ಪಡಿಸಿದ್ದರಂತೆ. ಈ ಘಟನೆ ಆದ ನಂತರ ಮತದಾರರ ಲಿಸ್ಟ್‍ನಿಂದ ಬಾಲಾಜಿ ಹಾಗೂ ಅವರ ಕುಟುಂಬ ವರ್ಗದವರ ಹೆಸರುಗಳು ನಾಪತ್ತೆಯಾಗಿತಂತೆ.

Bengaluru, voter, data, theft, chilume,

Articles You Might Like

Share This Article