ಮೈ ಕೊರೆಯುವ ಚಳಿಗೆ ಬೆಂಗಳೂರು ಗಢ ಗಢ

Social Share

ಬೆಂಗಳೂರು,ಅ.27-ಮೈ ಕೊರೆಯುವ ಚಳಿಗೆ ನಗರ ಗಢ ಗಢ ಎನ್ನುತ್ತಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮೈ ಕೊರೆಯುವ ಚಳಿಯಿರುವುದರಿಂದ ಜನ ಬೆಳಗಿನ ಜಾವದ ವಾಕಿಂಗ್ ಮರೆತು ರಗ್ಗು ಹೊದ್ದು ಮಲಗುವಂತಾಗಿದೆ.

ಒಂದೇರಡು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಇನ್ನು ಕೆಲ ದಿನಗಳ ಕಾಲ ಮೈ ಕೊರೆಯುವ ಚಳಿಯಲ್ಲೇ ಕಾಲ ಕಳೆಯಬೇಕಿದೆ.

ನಗರದ ತಾಪಮಾನ ಕನಿಷ್ಠ 19 ರಿಂದ 20 ಡಿಗ್ರಿ ಸೆಲ್ಸಿಯಸ್‍ನಿಂದ 16 ಡಿಗ್ರಿಗೆ ಇಳಿಕೆಯಾಗಿರುವುದರಿಂದ ಬೆಳಗಿನ ಜಾವ ಮೈ ಕೊರೆಯುವ ಚಳಿ ಹೆಚ್ಚಾಗಲು ಕಾರಣವಾಗಿದೆಯಂತೆ.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಚಾಲನೆ

ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಭಾರಿ ಪ್ರಮಾಣದ ಮಳೆಯಾಗಿರುವುದರಿಂದ ತಾಪಮಾನದಲ್ಲಿ ಭಾರಿ ಇಳಿಕೆ ಕಂಡು ಬಂದಿರುವುದು ಚಳಿ ಹೆಚ್ಚಾಗಲು ಕಾರಣವಾಗಿದೆ. ಇದರ ಜೊತೆಗೆ ಡಿಸಂಬರ್ ಚಳಿಯೂ ಸೇರಿಕೊಂಡರೆ ಪರಿಸ್ಥಿತಿ ನೀವೇ ಊಹಿಸಿಕೊಳ್ಳಿ.

ಆನ್‍ಲೈನ್‍ನಲ್ಲಿ ಭೂ ಪರಿವರ್ತನೆ ಪೋಡಿ ಸೌಲಭ್ಯ

ಎಚ್ಚರ ಅಗತ್ಯ: ಚಳಿಗಾಲದ ಸಂದರ್ಭದಲ್ಲಿ ಹಲವಾರು ರೋಗ ರುಜಿನೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಜನ ಎಚ್ಚರವಹಿಸುವುದು ಅಗತ್ಯವಾಗಿದೆ.

ಮನೆಯಿಂದ ಹೊರ ಹೋಗುವಾಗ ಕಿವಿ ಮುಚ್ಚುವಂತೆ ಟೋಪಿ ಧರಿಸುವುದರ ಜೊತೆಗೆ ಉಣ್ಣೆ ಬಟ್ಟೆಗಳನ್ನು ಬಳಕೆ ಮಾಡುವುದು ಸೂಕ್ತ. ಬಿಸಿ ಇದ್ದಾಗಲೇ ಊಟ ಮಾಡುವುದು. ಸದಾ ಬಿಸಿನೀರು ಕುಡಿಯುವುದರಿಂದಲೂ ರೋಗ ರುಜಿನೆಗಳಿಂದ ಬಚವಾಗಬಹುದು. ತಣ್ಣನೆಯ ಪದಾರ್ಥಗಳ ಸೇವನೆಯಿಂದ ದೂರ ಇರುವುದನ್ನು ಮಾತ್ರ ಮರೆಯಬಾರದು.

ಖರ್ಗೆ AICC ಅಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ‘ಸಂಚಲನ’

ಮನೆ ಆವರಣ ಸ್ವಚ್ಚವಾಗಿರಿಸಿಕೊಳ್ಳುವುದು. ಸೊಳ್ಳೆ ಹೆಚ್ಚಾಗದಂತೆ ಎಚ್ಚರ ವಹಿಸುವುದು ಜ್ವರ, ಮಲಗುವಾಗ ಕಾಲಿಗೆ ಸಾಕ್ಸ್ ಧರಿಸಿ ಮಲಗುವುದು. ಕೆಮ್ಮು ಕಾಣಿಸಿಕೊಂಡ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತವಾಗಿದೆ.

Articles You Might Like

Share This Article