ಪಾರ್ಟಿ ಮಾಡಿ ನಂತರ ಯುವತಿ ಮೇಲೆ ಅತ್ಯಾಚಾರವೆಸಗಿದ ಸ್ನೇಹಿತರ ಬಂಧನ

Social Share

ಬೆಂಗಳೂರು,ಫೆ.7- ಅನ್ಯರಾಜ್ಯದವರಾದ ಇಬ್ಬರು ಯುವತಿಯರೊಂದಿಗೆ ಇಬ್ಬರು ಯುವಕರು ತಡರಾತ್ರಿವರೆಗೂ ಪಾರ್ಟಿ ಮಾಡಿದ್ದು, ನಂತರ ಒಬ್ಬಳ ಮೇಲೆ ಅತ್ಯಾಚಾರ ನಡೆಸಿ, ಮತ್ತೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅತ್ಯಾಚಾರಕ್ಕೆ ಒಳಗಾದ ಯುವತಿ ಫೆಬ್ರವರಿ ಐದರಂದು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‍ಗೆ ಶಾಪಿಂಗ್‍ಗೆಂದು ಬಂದಿದ್ದರು. ಆ ವೇಳೆ ಪಂಜಾಬ್‍ನ ವಿಶ್ವವಿದ್ಯಾಲದಲ್ಲಿ ಒಟ್ಟಿಗೆ ಓದಿದ್ದ ಆಕೆಯ ಸ್ನೇಹಿತ ಅಜೇಯ್ ಎಂಬಾತ ಕರೆ ಮಾಡಿ, ತಾನು ಬೆಂಗಳೂರಿಗೆ ಬಂದಿದ್ದು, ಮತ್ತೆ ವಾಪಾಸ್ ಹೋಗುತ್ತಿದ್ದೇನೆ. ಕೊನೆಯ ಬಾರಿ ಭೇಟಿ ಮಾಡೋಣ ಎಂದು ತಿಳಿಸಿದ್ದಾನೆ.

ಬಿಎಂಟಿಸಿ ಎಂಡಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಚಾಲಕ ಸಸ್ಪೆಂಡ್

ಅದರಂತೆ ಆತ ತಾನಿರುವ ಸ್ಥಳದ ಲೋಕೆಷನ್ ಕಳುಹಿಸಿದ್ದಾನೆ. ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾದ ಯುವತಿ ಜಮ್ಮು ಕಾಶ್ಮೀರದ ಮೂಲದವಳಾಗಿದ್ದು, ಎಂಬಿಎ ಪದವೀಧರಳಾಗಿದ್ದಾಳೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ಸ್ನೇಹಿತ ಅಜೇಯ್ ಕರೆಯ ಮೇರೆಗೆ ತನ್ನ ಸ್ನೇಹಿತೆ ಜೊತೆ ರಾತ್ರಿ 11.45ರ ಸುಮಾರಿಗೆ ಕೋರಮಂಗಲಕ್ಕೆ ಹೋಗಿದ್ದಾಳೆ. ಅಲ್ಲಿ ಅಜೇಯ್ ಸ್ನೇಹಿತ ಆದಿತ್ಯನ ರೂಂನಲ್ಲಿ ಎಲ್ಲರೂ ಸೇರಿದ್ದಾರೆ. ತಡರಾತ್ರಿವರೆಗೂ ಮದ್ಯ ಸೇವೆಸಿ, 1.46ರವೆಗೂ ಪಾರ್ಟಿ ಮಾಡಿದ್ದಾರೆ.

ಮತ್ತಿನಲ್ಲಿದ್ದ ಅಜೇಯ್ ಜೋರಾಗಿ ಮ್ಯೂಸಿಕ್ ಹಾಕಿ ತನ್ನ ಸ್ನೇಹಿತೆಯ ಹತ್ತಿರ ಹೋಗಿ ಮೈ ಕೈ ಮುಟ್ಟಿ ಕಿರುಕೂಳ ನೀಡಿದ್ದು, ನಗ್ನವಾಗಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಗರಿಷ್ಠ ಪ್ರಯತ್ನದ ಮೂಲಕ ಆತನನ್ನು ನಿರ್ಬಂಧಿಸಿರುವುದಾಗಿ ಹೇಳಿಕೊಂಡಿದ್ದಾಳೆ.

ನಮ್ಮ ಮೆಟ್ರೋ ರೈಲು ಹಳಿಯಲ್ಲಿ ಬಿರುಕು..!

ಮತ್ತೊಂದೆಡೆ ಆದಿತ್ಯ ಅದೇ ಮನೆಯ ಕೊಣೆಯಲ್ಲಿ ಮಲಗಿದ್ದ ಸಂತ್ರಸ್ಥೆಯ ಸ್ನೇಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಬೆಳಗಿನ ಜಾವ 5 ಗಂಟೆ ಸುಮಾರಿಗೆ ಇಬ್ಬರು ಸೇರಿ ಕ್ಯಾಬ್ ಬುಕ್ ಮಾಡಿ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ.
ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ್ದ ವಿವೇಕನಗರ ಪೊಲೀಸರು ಆರೋಪಿಗಳಾದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗರಕಿಪತಿ ಅಜೇಯ್ ವೆಂಕಟ್ ಸಾಯಿ, ಬಿಹಾರದ ಮುಜಾಫರ್ ಜಿಲ್ಲೆಯ ಆದಿತ್ಯ ಅಭಿರಾಜ್ ಎಂಬುವರನ್ನು ಬಂಧಿಸಿದ್ದಾರೆ.

Bengaluru, woman, Rape, Friends, arrested,

Articles You Might Like

Share This Article