ಬೆಂಗಳೂರು, ಜೂ.2- ನಗರದಲ್ಲಿ ವೀಲಿಂಗ್ ಪ್ರಕರಣ ಗಳು ಮರುಕಳಿಸುತ್ತಲೇ ಇದ್ದು ರಾತ್ರಿ ಪುಂಡರು ರಸ್ತೆಯಲ್ಲಿ ರಾಡು ತಾಗಿಸಿಕೊಂಡು ಬೆಂಕಿ ಭರಿಸಿ ಆತಂಕವನ್ನುಂಟು ಮಾಡಿದ್ದಾರೆ.
ಗೊರಗುಂಟೆಪಾಳ್ಯ, ನೆಲಮಂಗಲ ಎಕ್ಸ್ಪ್ರೆಸ್ ವೇ ನಲ್ಲಿ ಪುಂಡರು ಬೈಕ್ನಲ್ಲಿ ವೀಲಿಂಗ್ ಮಾಡುತ್ತ ಕೈಯಲ್ಲಿ ಮಾರಕಾಸ್ತ್ರ ಹಿಡಿದು ರಸ್ತೆಗೆ ತಾಗಿಸಿಕೊಂಡು ಬೆಂಕಿ ಭರಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.
ವಾರ್ ರೂಮ್ ಗ್ಯಾರಂಟಿ – ಹೈಕಮಾಂಡ್ ಘೋಷಣೆ – ಸಿದ್ದು ಸಿಡಿಮಿಡಿ
ಈ ರೀತಿ ರಸ್ತೆಯಲ್ಲಿ ವೀಲಿಂಗ್ ಮಾಡುತ್ತ ಸ್ಟೆಂಟ್ ಮಾಡುವ ಪುಂಡರಿಂದ ಇತರೆ ವಾಹನ ಸವಾರರಿಗೆ ಆತಂಕ ಉಂಟಾಗಿದೆ. ನಗರದಲ್ಲಿ ಆಗಾಗ್ಗೆ ಪ್ರಮುಖ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತ ಪುಂಡರು ಕೇಕೆ ಹಾಕುತ್ತಿರುವುದು ಕಂಡು ಬಂದಿದ್ದು, ವೀಲಿಂಗ್ ಹಾವಳಿಗೆ ಪೊಲೀಸರು ಬ್ರೆಕ್ ಹಾಕದಿದ್ದಲ್ಲಿ ಮುಂದೊಂದು ದಿನ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಮಾರಕಾಸ್ತ್ರ ಹಿಡಿದು ಈ ರೀತಿ ವೀಲಿಂಗ್ ಮಾಡುವ ಪುಂಡರನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
BengaluruTrafficPolice, #bike, #Wheeling,