ಬೆಸ್ಕಾಂ ಬ್ರಹ್ಮಾಸ್ತ್ರ : 3 ತಿಂಗಳ ಬಿಲ್ ಕಟ್ಟದಿದ್ದರೆ ಪರವಾನಗಿ ರದ್ದು

Social Share

ಬೆಂಗಳೂರು,ನ.16- ಇನ್ಮುಂದೆ ವಿದ್ಯುತ್ ಬಿಲ್ ಪಾವತಿಸಲು ವಿಳಂಬ ಧೋರಣೆ ಅನುಸರಿಸಿದರೆ ನೀವು ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿದುಕೊಳ್ಳಬೇಕಾಗುತ್ತದೆ ಜೋಕೆ…

ಜನರಿಗೆ ಪದೆ ಪದೆ ಶಾಕ್ ನೀಡಿ ಬೆಚ್ಚಿ ಬೀಳಿಸುವ ಬೆಸ್ಕಾಂನವರು ಇದೀಗ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.
ಅದೆನೆಂದರೆ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಮೂರು ತಿಂಗಳು ಕಟ್ಟದೆ ಬಾಕಿ ಉಳಿಸಿಕೊಂಡರೆ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆಯಂತೆ.

ಇದುವರೆಗೂ ವಿದ್ಯುತ್ ಬಿಲ್ ಪಾವತಿಸದಿದ್ದರೆ ಬೆಸ್ಕಾಂ ಸಿಬ್ಬಂದಿಗಳು ಬಿಲ್ ಪಾವತಿಸದ ಮನೆಯವರ ವಿದ್ಯುತ್ ಸಂಪರ್ಕದ ಫ್ಯೂಸ್ ಕಿತ್ತು ಹಾಕುತ್ತಿದ್ದರು. ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಸ್ಕಾಂನವರು ಮೂರು ತಿಂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ವಿದ್ಯುತ್ ಸಂಪರ್ಕದ ಪರವಾನಿಗಿಯನ್ನೇ ರದ್ದುಗೊಳಿಸುವುದಾಗಿ ಬಿಗ್ ಶಾಕ್ ನೀಡಿದ್ದಾರೆ.

BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಬಾಕಿ ಇರುವ ವಿದ್ಯುತ್ ಬಿಲ್ ಸಂಗ್ರಹಕ್ಕೆ ಹೊಸ ಐಡಿಯಾ ಕಂಡುಕೊಂಡಿರುವ ಬೆಸ್ಕಾಂನವರು ಗ್ರಾಹಕರ ಮೇಲೆ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ನೀವು ನಿಮ್ಮ ಮನೆಯ ಮೂರು ತಿಂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ಬೆಸ್ಕಾಂನವರು ನಿಮ್ಮ ಮನೆಯ ವಿದ್ಯುತ್ ಸಂಪರ್ಕದ ಪರವಾನಿಗಿಯನ್ನೇ ರದ್ದುಗೊಳಿಸುತ್ತಾರೆ.

ಹಾಗಾದರೆ ನೀವು ಮತ್ತೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ, ವಿದ್ಯುತ್ ಕನೆಕ್ಷನ್‍ಗಾಗಿ ಮತ್ತೆ ಅರ್ಜಿ ಸಲ್ಲಿಸಿ ಹೊಸದಾಗಿ ಪರವಾನಿಗಿ ಪಡೆಯುವುದು ಅನಿವಾರ್ಯವಂತೆ. ಬಿಲ್ ಪಾವತಿ ವಿಳಂಬ ಮಾಡಿ ವಿದ್ಯುತ್ ಸಂಪರ್ಕ ಕಡಿತ ಮಾಡಿಕೊಂಡು ಮತ್ತೆ ಸಂಪರ್ಕ ಪಡೆಯಲು ಹಣ ಪಾವತಿಸಲು ಸಾಧ್ಯವಿಲ್ಲದವರು ಕರೆಂಟ್ ಇಲ್ಲದೆ ಕತ್ತಲಲ್ಲೇ ಜೀವನ ಕಳೆಯಬೇಕಾಗುತ್ತದೆ. ಮಾತ್ರವಲ್ಲ ಹೊರ ದೇಶಗಳಿಗೆ ಪ್ರಯಾಣ ಬೆಳೆಸಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರಿಗೆ ಇದೀಗ ಆತಂಕ ಶುರುವಾಗಿದೆ.

ಅಮೇರಿಕ ಸಂಸತ್‌ನಲ್ಲಿ ಟ್ರಂಪ್’ಗೆ ಹೆಚ್ಚಿದ ಬಲ

ಆರ್ಥಿಕ ಸಂಕಷ್ಟದಿಂದ ಪಾರಾಗಲು ಬೆಸ್ಕಾಂ ಇಂತಹ ತೀರ್ಮಾನ ಕೈಗೊಂಡಿದ್ದು, ಗ್ರಾಹಕರು ಸರಿಯಾದ ಸಮಯಕ್ಕೆ ಬಿಲ್ ಪಾವತಿಸುವ ಮೂಲಕ ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸಿಕೊಳ್ಳುವಂತಹ ತೊಂದರೆ ತೆಗೆದುಕೊಳ್ಳಬೇಡಿ ಎಂದು ಬೆಸ್ಕಾಂ ಎಂ.ಡಿ. ಮಹಾಂತೇಶ್ ಬಿಳಗಿ ಅವರು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಅಚಂತಾ ಶರತ್ ಕಮಲ್‍ಗೆ ಖೇಲ್ ರತ್ನ ಪ್ರಶಸ್ತಿ

ಕೆಲ ಅಪಾರ್ಟ್‍ಮೆಂಟ್ ನಿವಾಸಿಗಳು ತಿಂಗಳುಗಳು ಕಳೆದ್ರೂ ಬಿಲ್ ಪಾವತಿ ಮಾಡ್ತಿರಲಿಲ್ಲ ಇದರಿಂದ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಇದರಿಂದ ಪಾರಾಗುವ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಬೇಕಾಯಿತು ಎಂದು ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜು ತಿಳಿಸಿದ್ದಾರೆ.

Articles You Might Like

Share This Article