ಡಿಜಿಟಲ್ ಮೀಟರ್ ಅಳವಡಿಕೆಯಿಂದ ದುಪ್ಪಟ್ಟಾಯ್ತು ಕರೆಂಟ್ ಬಿಲ್..!

Social Share

ಬೆಂಗಳೂರು,ಫೆ.20- ಬೆಸ್ಕಾಂ ಅಳವಡಿಸುತ್ತಿರುವ ಡಿಜಿಟಲ್ ಮೀಟರ್‍ಗಳು ಜನರಿಗೆ ಬರೆ ಎಳೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಬೆಸ್ಕಾಂ ಸಂಸ್ಥೆ ತಮ್ಮ ಗ್ರಾಹಕರ ಮನೆಗಳಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್‍ಗಳನ್ನು ಡಿಜಿಟಲ್ ಮೀಟರ್‍ಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಹಮ್ಮಿಕೊಂಡಿದೆ.

ಈಗಾಗಲೆ ನಗರದ ಶೇ.60ರಷ್ಟು ಮನೆಗಳಲ್ಲಿ ಡಿಜಿಟಲ್ ಮೀಟರ್ ಆಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಇಂತಹ ಸಂದರ್ಭದಲ್ಲಿ ಡಿಜಿಟಲ್ ಮೀಟರ್‍ಗಳು ಗ್ರಾಹಕರ ತಲೆ ಬಿಸಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಳಚಿತು ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ, ಎಸ್.ಕೆ.ಭಗವಾನ್ ಇನ್ನಿಲ್ಲ

ಡಿಜಿಟಲ್ ಮೀಟರ್‍ಗಳನ್ನು ಅಳವಡಿಸಿದ ನಂತರ ಈ ಹಿಂದೆ ಬರುತ್ತಿದ್ದ ವಿದ್ಯುತ್ ಬಿಲ್ ದುಪ್ಪಟ್ಟಾಗಿದ್ದು, ಡಿಜಿಟಲ್ ಮೀಟರ್‍ಗಳು ಜನರ ಜೇಬಿಗೆ ದುಬಾರಿಯಾಗುತ್ತಿವೆ ಎಂಬ ಬಗ್ಗೆ ದೂರುಗಳು ದಾಖಲಾಗುತ್ತಿವೆ.

ಡಿಜಿಟಲ್ ಮೀಟರ್ ಅಳವಡಿಕೆ ನಂತರ ಈ ಹಿಂದೆ 500 ರೂ ಬರ್ತಿದ್ದ ಬಿಲ್ ಇದೀಗ 1000 ರೂ.ಗಳಿಗೆ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಡಿಜಿಟಲ್ ಮೀಟರ್‍ಗಳಿಂದ ಬಿಲ್ ದುಪ್ಪಟ್ಟಾಗಿ ಬರುತ್ತಿರುವ ಬಗ್ಗೆ ಇದುವರೆಗೂ 70 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

IAS-IPS ಅಧಿಕಾರಿಗಳ ಬೀದಿ ರಂಪಾಟ : ರೂಪಾ ಮತ್ತು ಸಿಂಧೂರಿಗೆ ನೋಟಿಸ್

ಕಳೆದ 6 ತಿಂಗಳುಗಳಿಂದ ಗ್ರಾಹಕರು ದೂರಿನ ಮೇಲೆ ದೂರು ನೀಡುತ್ತಿದ್ದರೂ ಬೆಸ್ಕಾಂ ಸಂಸ್ಥೆಯವರು ಮಾತ್ರ ಅದಕ್ಕೂ ನಮಗೂ ಸಂಬಂಧವಿಲ್ಲದ್ದಂತೆ ಸುಮ್ಮನಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

BESCOM, electricity, digital meter, bill,

Articles You Might Like

Share This Article