ಹೈಟೆನ್ಷನ್ ಲೈನ್ ಬಳಿ ಮನೆ ಕಟ್ಟಿಕೊಂಡಿರುವವರಿಗೆ ಶುರುವಾಯ್ತು ನಡುಕ

Social Share

ಬೆಂಗಳೂರು,ಜ.20-ಮನೆ ಮೇಲೆ ಗಾಳಿಪಟ ಹಾರಿಸಲು ಹೋದ 11 ವರ್ಷದ ಬಾಲಕನಿಗೆ ಹೈಟೆನ್ಷನ್ ವೈರ್ ತಾಕಿ ಮೃತಪಟ್ಟ ಘಟನೆ ನಂತರ ಅನಕೃತ ಕಟ್ಟಡ ಮಾಲೀಕರುಗಳಿಗೆ ನಡುಕ ಶುರುವಾಗಿದೆ.

ಕಾರಣ ಇಷ್ಟೆ, ಬಿಬಿಎಂಪಿ ಅಕಾರಿಗಳು ಹೈಟೆನ್ಷನ್ ಲೈನ್ ಹಾದು ಹೋಗಿರುವ ಪ್ರದೇಶಗಳಲ್ಲಿ ಅನಕೃತವಾಗಿ ಕಟ್ಟಡ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ನೋಟೀಸ್ ನೀಡಲು ತೀರ್ಮಾನಿಸಿರುವುದರಿಂದ ಮನೆ ಮಾಲೀಕರುಗಳಿಗೆ ನಡುಕ ಆರಂಭವಾಗಿದೆ.

ಹೈಟೆನ್ಷನ್ ಹಾದು ಹೋಗಿರುವ ಜಾಗದಲ್ಲಿ ಸುಮಾರು 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಈ ಮನೆಗಳನ್ನು ತೆರವುಗೊಳಿಸುವಂತೆ ಬೆಸ್ಕಾಂ ಸಂಸ್ಥೆಯವರು ಬಿಬಿಎಂಪಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ನಾವು ನೋಟೀಸ್ ನೀಡಲು ನಿರ್ಧರಿಸಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ 2 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲ: ಡಿಕೆಶಿ

ಬಿ ಖಾತಾ ನಿವೇಶನ ಹೊಂದಿರುವಂತವರು ನೆಲಮಹಡಿ ಹಾಗೂ ಎರಡಂತಸ್ತಿನ ಕಟ್ಟಡ ಮಾತ್ರ ಕಟ್ಟಲು ಅವಕಾಶವಿದೆ ಆದರೆ, ನಗರದಲ್ಲಿ ಹಲವೆಡೆ ಅದಕ್ಕೂ ಮೀರಿ ಕಟ್ಟಡಗಳನ್ನು ಕಟ್ಟಿಕೊಂಡಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ರೀತಿ ಕಾನೂನು ಉಲ್ಲಂಘಿಸಿ ಕಟ್ಟಡ ಕಟ್ಟಿಕೊಂಡಿರುವವರಿಗೂ ನೋಟೀಸ್ ನೀಡಲು ನಾವು ತೀರ್ಮಾನಿಸಿದ್ದೇವೆ ಎಂದು ರವೀಂದ್ರ ವಿವರಿಸಿದ್ದಾರೆ.

ಇದರ ಜೊತೆಗೆ ಬೆಸ್ಕಾಂನವರು ನೀಡಿರುವ 10 ಸಾವಿರ ಮನೆಗಳ ಸರ್ವೇ ಮಾಡಿ ದಾಖಲೆ ಪರಿಶೀಲನೆ ನಡೆಸುವಂತೆ ಎಲ್ಲಾ ವಲಯ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮೆಟ್ರೋ ಎಂಡಿ ಅಂಜುಮ್ ಪರ್ವೇಜ್‍ಗೆ ಪೊಲೀಸ್ ನೋಟಿಸ್

ತ್ವರಿತಗತಿಯಲ್ಲಿ ಬೆಸ್ಕಾಂ ಪಟ್ಟಿ ಸರ್ವೇ ಮಾಡಿ ಮಾಹಿತಿ ದಾಖಲಿಸುವಂತೆ ಪಾಲಿಕೆ ಇಂಜಿನಿಯರ್ ಗಳಿಗೆ ತಾಕೀತು. ಜನರು ಕಾನೂನು ಮೀರಿ ಹೆಚ್ಚುವರಿ ಅಂತಸ್ತು ನಿರ್ಮಾಣ ಮಾಡಿರೋದ್ರಿಂದ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಭವಿಷ್ಯದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ನಾವು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

BESCOM, high tension line, BBMP, houses, notice,

Articles You Might Like

Share This Article