BEST CEO ಅವಾರ್ಡ್ ಗೆ ಎನ್.ಜಯರಾಮ್ ಭಾಜನ

Social Share

ಬೆಂಗಳೂರು/ಬೆಳಗಾವಿ,ಡಿ.7-ಸಾರ್ವಜನಿಕ ಆಡಳಿತದಲ್ಲಿ ಉತ್ಕರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ ಅವರಿಗೆ ಐಐಎಂಎಂ ಸಂಸ್ಥೆಯ 2022 ನೇ ಸಾಲಿನ Best CEO ಅವಾರ್ಡ್ ದೊರೆತಿದೆ.

ಇತ್ತೀಚೆಗೆ ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ Indian Institute of Material Management (IIMM)ನ ರಾಷ್ಟ್ರೀಯ ಅಧ್ಯಕ್ಷ ಎಚ್.ಕೆ.ಶರ್ಮ ಈ ಪ್ರಶಸ್ತಿ ನೀಡಿದರು.

ಬೆಂಗಳೂರು ಜಲಮಂಡಳಿ ಮುಖ್ಯಸ್ಥರಾಗಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಆರ್ಥಿಕ ಸೋರಿಕೆ ತಡೆಗಟ್ಟಿ ಮಂಡಳಿಗೆ ಆದಾಯ ಸಂಗ್ರಹ, ಮಂಡಳಿ ಸ್ವತ್ತುಗಳ ರಕ್ಷಣೆ, ಜಲಮಂಡಳಿಯಲ್ಲಿ ನೇರ ನೇಮಕಾತಿ ಹೊಂದಿದ ಅಭಿಯಂತರರು ನೌಕರರ ಹಲವಾರು ವರ್ಷಗಳ ಸಮಸ್ಯೆಗಳ ಇತ್ಯರ್ಥ.

ದುಬಾರಿ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ನಾಲ್ವರ ಬಂಧನ

ಪ್ರಾದೇಶಿಕ ಆಯುಕ್ತರಾಗಿ, ಜಿಲ್ಲಾಧಿಕಾರಿಯಾಗಿ ಭೂ ಕಂದಾಯ ಸುಧಾರಣೆಗಳು, ಸಾರ್ವಜನಿಕ ಸಮಸ್ಯೆಗಳ ನಿರ್ವಹಣೆ, ಅಭಿವೃದ್ಧಿ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಯ ಅದ್ಭುತ ನಿರ್ವಹಣೆ ಗಮನಿಸಿ 2004 ನೇ ಬ್ಯಾಚ್ ಐಎಎಸ್ ಅಧಿಕಾರಿ ಎನ್.ಜಯರಾಮ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ದೆಹಲಿ ಪಾಲಿಕೆ ಗದ್ದುಗೆಗೆ ಬಿಜೆಪಿ-ಆಪ್ ನಡುವೆ ಪ್ರಬಲ ಪೈಪೋಟಿ

ಪ್ರಸ್ತುತ ಎನ್. ಜಯರಾಮ ಅವರು ರಾಜ್ಯ ಕಂದಾಯ ಕಾರ್ಯದರ್ಶಿ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾಗಿ ಸರ್ಕಾರದಲ್ಲಿ ಕಾರ್ಯದರ್ಶಿ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Best CEO Award, IIMM, IAS Jayaram,

Articles You Might Like

Share This Article