ದುಬಾರಿಯಾಯ್ತು ವೀಳ್ಯದೆಲೆ

Social Share

ಬೆಂಗಳೂರು, ಜ.29- ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿದಿದ್ದು, ಚಳಿಯ ಪ್ರಮಾಣ ಹೆಚ್ಚಾಗಿದ್ದರಿಂದ ವೀಳ್ಯದೆಲೆ ಮೇಲೆ ಪರಿಣಾಮ ಬಿರಿದೆ.

ಮೈ ಕೊರೆವ ಚಳಿಯಿಂದ ವೀಳ್ಯದೆಲೆ ಬೆಳೆಯಲ್ಲಿ ಭಾರೀ ಕುಂಠಿತವಾಗಿದೆ. ಚಳಿಗೆ ಎಲೆಗಳು ಸರಿಯಾಗಿ ಬರುತ್ತಿಲ್ಲ. ತುಮಕೂರು ಜಿಲ್ಲೆಯ ತೋವಿನಕೆರೆ, ಕೋಳಾಲ, ಸಂತೆಗಳಲ್ಲಿ ಎಲೆಗಳ ಪೆಂಡಿ ನೋಡುವುದೇ ಒಂದು ಚಂದ.
ಕ್ರಮವಾಗಿ ಜೋಡಿಸಿ ಕೈಯಲ್ಲಿ ಹಿಡಿದು ಎಲೆಗಳನ್ನು ಮಾರಾಟ ಮಾಡುತ್ತಿದ್ದರೆ.

ಎಂಥವರೂ ಕೂಡ ಒಂದು ಕ್ಷಣ ಆಕರ್ಷಿಸದಿರದು. ಆದರೆ ಕಳೆದ ಕೆಲ ತಿಂಗಳುಗಳಿಂದ ಎಲೆಗಳು ನಿಗದಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ನೂರರ ಗಡಿ ದಾಟಿದೆ.ತೋವಿನಕೆರೆ ಸಂತೆಗೆ ಗುಬ್ಬಿ, ತಿಪಟೂರು, ಮಧುಗಿರಿ ಸೇರಿದಂತೆ ಆಂಧ್ರ, ಹಿಂದೂಪೂರದಿಂದಲೂ ಖರೀದಿಗೆ ಜನರು ಬರುತ್ತಾರೆ .

ದೇಶದ ಹಲವೆಡೆ ವಿವಾದಾತ್ಮಕ ಬಿಬಿಸಿ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಪ್ರಯತ್ನ

ಅಷ್ಟು ಪ್ರಮಾಣದಲ್ಲಿ ಈ ಭಾಗದಲ್ಲಿ ವೀಳ್ಯದಲೆ ಬೆಳೆಯಲಾಗುತ್ತದೆ. ಚಳಿ ಹಾಗೂ ಇಬ್ಬನಿಯಿಂದ ಎಲೆಗಳು ಸರಿಯಾಗಿ ಬಾರದೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಇನ್ನೂ ಎರಡು ತಿಂಗಳು ಇದೇ ಬೆಲೆ ಇರಲಿದೆ. ಚಳಿಯ ಪ್ರಮಾಣ ಇಳಿಕೆಯಾದರೆ ಎಲೆಗಳು ಚೆನ್ನಾಗಿ ಬರುತ್ತವೆ. ಬೆಲೆಯೂ ಕೂಡ ಕಡಿಮೆ ಯಾಗಲಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

#BetelLeaves, #PriceHike,

Articles You Might Like

Share This Article