ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಉಚಿತ ಚಿಕಿತ್ಸೆ

Social Share

ಪುಣೆ, ನ.6-ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಉಚಿತ ಪ್ರಸವ ಚಿಕಿತ್ಸೆ ಜೊತೆಗೆ ಯಾವುದೇ ಶುಲ್ಕ ಪಡೆಯದೆ ಸನ್ಮನಿಸುತ್ತಾರೆ. ಪುಣೆಯ ವೈದ್ಯರೊಬ್ಬರು ಹೆಣ್ಣು ಮಗುವನ್ನು ಉಳಿಸುವ ಧೇಯದೊಂದಿಗೆ ಕಳೆದ 11 ವರ್ಷದಿಂದ ಈ ಉಚಿತ ಸೇವೆ ನಡೆಸಲಾಗುತ್ತಿದೆ.

ಮಹಾರಾಷ್ಟ್ರದ ಹಡಪ್ಸರ್ ಪ್ರದೇಶದಲ್ಲಿ ಹೆರಿಗೆ-ಕಮï-ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ ಗಣೇಶ್ ರಾಖ್ ಅವರು ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶುಹತ್ಯೆಯ ವಿರುದ್ಧ ಜಾಗೃತಿ ಮೂಡಿಸಲು ನಡೆಸಿರುವ ಅಬಿಯಾನ ಗಮನ ಸೆಳೆದಿದೆ.

ಕಳೆದ 11 ವರ್ಷಗಳಲ್ಲಿ 2,400 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಅವರ ಪೋಷಕರು ಮತ್ತು ಸಂಬಂಧಿಕರಿಂದ ಶುಲ್ಕ ವಿಸದೆ ಹೆರಿಗೆ ಮಾಡಿರುವುದಾಗಿ ಡಾ.ರಾಖ್ ತಿಳಿಸಿದ್ದಾರೆ. ತಮ್ಮ ಮೆಡಿಕೇರ್ ಆಸ್ಪತ್ರೆಯಲ್ಲಿ 2012 ರಲ್ಲಿ ಪ್ರಾರಂಭಿಸಿದ ಸಣ್ಣ ಉಪಕ್ರಮವು ಈಗ ವಿವಿಧ ರಾಜ್ಯಗಳಲ್ಲಿ ಮತ್ತು ಕೆಲವು ಆಫ್ರಿಕನ್ ದೇಶಗಳಲ್ಲಿ ಹರಡಿದೆ.

2012 ರ ಮೊದಲು, ಆಸ್ಪತ್ರೆಯ ಆರಂಭಿಕ ವರ್ಷಗಳಲ್ಲಿ, ನಾವು ಇಲ್ಲಿ ವಿಭಿನ್ನ ಅನುಭವಗಳನ್ನು ಕಂಡಿದ್ದೇವೆ, ಕೆಲವು ಸಂದರ್ಭಗಳಲ್ಲಿ ಹೆಣ್ಣು ಮಗು ಜನಿಸಿದರೆ, ಕುಟುಂಬ ಸದಸ್ಯರು ಅವಳನ್ನು ನೋಡಲು ಬರಲು ಹಿಂಜರಿಯುತ್ತಾರೆ. ಇದು ನನ್ನ ಮೇಲೆ ಗಾಢ ಪರಿಣಾಮ ಮೂಡಿಸಿತು ಎಂದು ಹೇಳಿದರು.

ಗಂಡು ಮಗು ಜನಿಸಿದರೆ ಕೆಲವು ಕುಟುಂಬಗಳು ಖುಷಿಯಿಂದ ಆಸ್ಪತ್ರೆಗೆ ಬಂದು ಬಿಲ್ ಪಾವತಿಸುತ್ತಿದ್ದರೂ ಹೆಣ್ಣು ಮಗುವಾದರೆ ಕೆಲವು ಸಂದರ್ಭಗಳಲ್ಲಿ ಉದಾಸೀನ ಧೋರಣೆ ತಾಳುತ್ತಿದ್ದರು ಎಂದರು.

ಬೆಂಗಳೂರಿಗೆ ಬಂದಿಳಿದ AICC ಅಧ್ಯಕ್ಷ ಖರ್ಗೆ, ಕಾಂಗ್ರೆಸ್‍ನಲ್ಲಿ ಹಬ್ಬದ ವಾತಾವರಣ

ಇದರ ಬಗ್ಗೆ ಜಾಗೃತಿ ಮೂಡಿಸಿ ಹೆಣ್ಣು ಮಗು ಜನಿಸಿದರೆ ಸಂಪೂರ್ಣ ವೈದ್ಯಕೀಯ ಶುಲ್ಕವನ್ನು ಮನ್ನಾ ಮಾಡಲು ನಾವು ನಿರ್ಧರಿಸಿದ್ದೇವೆ ಎಂದರು. ಈ ಉಪಕ್ರಮವನ್ನು ಬೇಟಿ ಬಚಾವೋ ಜನಾಂದೋಲನ್ ಎಂದು ನಾಮಕರಣ ಮಾಡಿದ್ದೇವೆ. ಕಳೆದ 11 ವರ್ಷಗಳಲ್ಲಿ, ನಾವು ಯಾವುದೇ ಶುಲ್ಕವಿಲ್ಲದೆ 2,400 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಹೆರಿಗೆ ಮಾಡಿದ್ದೇವೆ ಂದರು.

ಸರ್ಕಾರದ ಸಮೀಕ್ಷೆಯ ಪ್ರಕಾರ ಕಳೆದ 10 ವರ್ಷಗಳಲ್ಲಿ ಆರು ಕೋಟಿಗೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆದಿವೆ ಎಂದು ಡಾ.ರಾಖ್ ಕಳವಳ ವ್ಯಕ್ತಪಡಿಸಿದರು . ಇದು ಒಂದು ರೀತಿಯ ಜನಾಂಗೀಯ ಹತ್ಯೆ ಎಂದು ಅವರು ಹೇಳಿದರು. ಇದು ಒಂದು ಪ್ರದೇಶ, ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗಿಲ್ಲ, ಆದರೆ ಇದು ಜಾಗತಿಕ ಸಾಮಾಜಿಕ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ

ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಶಿವದೀಪ್ ಉಂದ್ರೆ, ಮಿಷನ್‍ನ ಭಾಗವಾಗಿ ದೇಶದ ವಿವಿಧ ರಾಜ್ಯಗಳಿಗೆ ತೆರಳಿ ಲಿಂಗ ಸಂವೇದನೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

Articles You Might Like

Share This Article