ಕೋಲ್ಕತ್ತಾ,ಫೆ.2- ನಿಮ್ಮ ಆರ್ಶೀವಾದವಿಲ್ಲದೆ ನಾವು ಉತ್ತಮವಾಗಿರುತ್ತೇವೆ ಏಕೆಂದರೆ ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನಕ್ಕೆ ಒಗ್ಗಿಕೊಂಡಿದ್ದೇವೆ ಎಂದು ವಿಶ್ವಭಾರತಿ ವಿಶ್ವ ವಿದ್ಯಾಲಯ ಆಡಳಿತ ಮಂಡಳಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಡ್ಡು ಹೊಡೆದಿದೆ.
ನೊಬೆಲ್ ಪ್ರಶಸ್ತಿ ಪುರಸ್ಕøತ ಅಮತ್ರ್ಯ ಸೇನ್ ಅವರು ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿದ್ದಾರೆ ಎಂಬ ವಿಶ್ವಭಾರತಿ ವಿಶ್ವವಿದ್ಯಾಲಯದ ಆರೋಪಕ್ಕೆ ಸಂಬಂಧಿಸಿದಂತೆ ಆರಂಭವಾದ ಗಲಾಟೆ ಇದೀಗ ಸಂಪೂರ್ಣ ರಾಜಕೀಯ ಕದನಕ್ಕೆ ತಿರುಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಿಶ್ವವಿದ್ಯಾಲಯ ಹೇಳಿಕೆ ನೀಡಿದೆ.
ವಿಶ್ವ ಭಾರತಿ ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. ನಿಮ್ಮ ಆಶೀರ್ವಾದವಿಲ್ಲದೆ ನಾವು ಉತ್ತಮವಾಗಿದ್ದೇವೆ ಏಕೆಂದರೆ ನಾವು ಪ್ರಧಾನಿಯವರ ಮಾರ್ಗದರ್ಶನಕ್ಕೆ (ಮಾರ್ಗದರ್ಶನ) ಒಗ್ಗಿಕೊಂಡಿದ್ದೇವೆ ಎಂಬ ಹೇಳಿಕೆಗೆ ವಿಶ್ವಭಾರತಿ ವಕ್ತಾರ ಮಹುವಾ ಬ್ಯಾನರ್ಜಿ ಸಹಿ ಹಾಕಿದ್ದಾರೆ.
ಈ ಹಿಂದೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೊಬೆಲ್ ಪ್ರಶಸ್ತಿ ವಿಜೇತ ಅಮತ್ರ್ಯ ಸೇನ್ ಅವರು ಅಕ್ರಮವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ವಿಶ್ವ ವಿದ್ಯಾಲಯದ ಆರೋಪವನ್ನು ಅಲ್ಲಗಳೆದಿದ್ದರು ಮಾತ್ರವಲ್ಲ, ಆ ಭೂಮಿಯನ್ನು ಅಮತ್ರ್ಯ ಸೇನ್ ಅವರ ತಂದೆ ಅಶುತೋಷ್ ಸೇನ್ ಅವರಿಗೆ ಸೇರಿದ್ದು, ವಿವಿ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದು ಹೇಳಿದ್ದರು. ಮಾತ್ರವಲ್ಲ, ಮಮತಾ ಬ್ಯಾನರ್ಜಿ ಅವರು ಅಮತ್ರ್ಯ ಸೇನ್ ಅವರ ಕ್ಷಮೆಯಾಚಿಸಲು ವಿಶ್ವವಿದ್ಯಾಲಯವನ್ನು ಕೇಳಿದರು.
ಧಾರವಾಡ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ನಿರ್ಮಲಾ
ಅಮತ್ರ್ಯ ಸೇನ್ ಈ ರೀತಿಯ ವಿವಾದದಲ್ಲಿ ಭಾಗಿಯಾಗಬಾರದು ಎಂದು ಬಿಜೆಪಿ ಹೇಳಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಘೋಷ್ ಸುದ್ದಿಗಾರರೊಂದಿಗೆ ಮಾತನಾಡಿ, ಅಮತ್ರ್ಯ ಸೇನ್ ಅನೇಕ ಜನರಿಗೆ ಐಕಾನ್ ಆಗಿದ್ದು, ಅವರು ಈ ರೀತಿಯ ವಿವಾದದಲ್ಲಿ ಭಾಗಿಯಾಗಬಾರದು, ಇದರಲ್ಲಿ ಏನಾದರೂ ಸತ್ಯವಿದ್ದರೆ ಅವರೇ ಮುಂದೆ ಬಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
“Better, Off, Without, Your, Blessing, Bengal University, Mamata Banerjee,