ಬೆಂಗಳೂರು,ಡಿ.26- ಚೀನಾದಿಂದ ಬಂದಿದ್ದ ಆಗ್ರಾ ಮೂಲದ ವ್ಯಕ್ತಿಯೊಬ್ಬರಿಗೆ ಬಿಎಫ್.7 ಸೋಂಕು ತಗುಲಿರುವ ಬಗ್ಗೆ ಏರ್ಪೋರ್ಟ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ್ರಾ ಮೂಲದ ವ್ಯಕ್ತಿ ಚೀನಾದಿಂದ ನೇರವಾಗಿ ಬೆಂಗಳೂರಿಗೆ ಬಂದಿಲ್ಲ. ಆತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗವಾಗಿ ಆಗ್ರಾ ತಲುಪಿದ್ದಾರೆ ಎಂದರು.
ಸೋಂಕತ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಿಂದ ಟ್ರಾನ್ಸಿಸ್ಟ್ ಆಗಿ ಆಗ್ರಾ ತಲುಪಿರುವುದು ಗೊತ್ತಾಗಿದೆ.
ಆತನಿಂದ ಯಾವಾಗ ಸ್ಯಾಂಪಲ್ ಸಂಗ್ರಹಿಸಲಾಗಿದೆ ಎಂಬ ಮತ್ತಿತರ ವಿವರಗಳನ್ನು ಏರ್ಪೋರ್ಟ್ ಅಧಿಕಾರಿಗಳಿಂದ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ನಗರದಲ್ಲಿ ಕೊರೊನಾ ತಡೆಗಟ್ಟುವ ಕುರಿತಂತೆ ಇಂದು ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಾಗುವುದು. ಸಭೆಯಲ್ಲಿ ಸಚಿವರು ನೀಡುವ ಮಾರ್ಗಸೂಚಿಗಳನ್ನು ಯಥಾಪ್ರಕಾರ ಪಾಲಿಸಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ರೆಡ್ಡಿ ಹೊಸ ಪಕ್ಷ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ : ಶ್ರೀರಾಮುಲು
ತಾಂತ್ರಿಕ ಸಲಹಾ ಸಮಿತಿಯವರು ಪ್ರತಿನಿತ್ಯ ನಗರದಲ್ಲಿ ಟೆಸ್ಟಿಂಗ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ಸೂಚಿಸುವ ಮಾರ್ಗಸೂಚಿ ಜಾರಿ ಕುರಿತಂತೆ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಧ್ಯಕ್ಕೆ ನಗರದಲ್ಲಿ ಪ್ರತಿನಿತ್ಯ 500ಕ್ಕಿಂಗ ಕಡಿಮೆ ಟೆಸ್ಟ್ ಮಾಡಲಾಗುತ್ತಿದೆ. ಸರ್ಕಾರದವರು ನೀಡುವ ಟಾರ್ಗೆಟ್ ನೋಡಿ ಎಷ್ಟು ನಡೆಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಆಯುಕ್ತರು ವಿವರಿಸಿದರು.
ಔಟ್ಪೋಸ್ಟ್ ನಲ್ಲಿ ಲಂಚ ಪಡೆಯುತ್ತಿದ್ದ ಕಾನ್ಸ್ಟೆಬಲ್ ಅಮಾನತು
ಕೊರೊನಾ ಸೋಂಕು ಏರಿಕೆ ಮುನ್ಸೂಚನೆ ಇರುವುದರಿಂದ ಸ್ವಾಬ್ ತಪಾಸಣೆಗೆ ಖಾಸಗಿ ಲ್ಯಾಬ್ಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಒಟ್ಟಾರೆ ನಗರದಲ್ಲಿ ಮತ್ತೆ ಕೊರೊನಾ ಉಲ್ಬಣವಾಗದಂತೆ ಎಲ್ಲ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
BF.7 scare, China, returnee, tests positive, Covid, Agra,