ಫಿನ್‍ಲ್ಯಾಂಡ್, ಜು. 12- ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಸಾಬೀತುಪಡಿಸಿರುವ ಭಗವಾನಿ ದೇವಿ ಅವರು ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಯುವ ಅಥ್ಲಿಟ್‍ಗಳಲ್ಲಿ ಸೂರ್ತಿ ತುಂಬಿದ್ದಾರೆ.
ಇಲ್ಲಿ ನಡೆಯುತ್ತಿರುವ ವಿಶ್ವ ಮಾಸ್ಟರ್ಸ್ ಅಥ್ಲೇಟಿಕ್ಸ್‍ನ 100 ಮೀಟರ್ ಓಟದಲ್ಲಿ ಪಾಲ್ಗೊಂಡಿದ್ದ ಭಗವಾನಿ ದೇವಿ (94) ಅವರು 24.74 ಸೆಕೆಂಡ್‍ಗಳನ್ನು ಗುರಿಯನ್ನು ಮುಟ್ಟುವ ಮೂಲಕ ಸ್ವರ್ಣ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.
ಭಗವಾನಿ ದೇವಿ ಅವರು 100 ಮೀಟರ್ ಓಟದಲ್ಲಿ ಮಾತ್ರವಲ್ಲದೆ ಷಾಟ್ ಪೂಟ್ ವಿಭಾಗದಲ್ಲೂ ಲವಲವಿಕೆಯಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕವನ್ನು ತಮ್ಮ ಕೊರಳಿಗೆ ಧರಿಸಿಕೊಂಡಿದ್ದಾರೆ.
ಅನುರಾಗ್ ಠಾಕೂರ್‍ರ ಗುಣಗಾನ:
ಫಿನ್‍ಲ್ಯಾಂಡ್‍ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೇಟಿಕ್ಸ್‍ನಲ್ಲಿ ವಯಸ್ಸಿನ ಹಂಗನ್ನು ತೊರೆದು ಭಾರತದ ಕ್ರೀಡಾಪಟುಗಳು ಪಾಲ್ಗೊಂಡಿದ್ದು ಹೆಮ್ಮೆಯ ವಿಷಯವೇ. ಅದರಲ್ಲೂ ಭಗವಾನಿ ದೇವಿ ಅವರು ಚಿನ್ನ ಹಾಗೂ ಕಂಚಿನ ಪದಕವನ್ನು ದೇಶಕ್ಕೆ ಗೆದ್ದು ಕೊಟ್ಟಿದ್ದಾರೆ ಅವರ ಕ್ರೀಡಾಸೂರ್ತಿಗೆ ಹ್ಯಾಟ್ಸಾಪ್ ಎಂದು ಟ್ವೀಟ್‍ನಲ್ಲಿ ಗುಣಗಾನ ಮಾಡಿದ್ದಾರೆ.
ಭಗವಾನಿ ದೇವಿ ಅವರ ಮೊಮ್ಮಗ ವಿಕಾಸ್ ದಾಗರ್ ಕೂಡ ಪಾಲ್ಗೊಂಡು ಪ್ರಶಸ್ತಿ ಜಯಿಸಿ ಗಮನ ಸೆಳೆದರು.
ಫಿನ್‍ಲ್ಯಾಂಡ್‍ನ ಟಮ್‍ಪರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೇಟಿಕ್ಸ್‍ನಲ್ಲಿ 35 ಕ್ಕೂ ಮೇಲ್ಪಟ್ಟ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.