100ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ

Social Share

ದೌಸ್ಸಾ(ರಾಜಸ್ತಾನ್),ಡಿ.16- ಭಾರತ್ ಜೋಡೋ ಯಾತ್ರೆ 100ನೇ ದಿನ ಪೂರೈಸಿದ್ದು, ಇಂದು ರಾಜಸ್ತಾನದಲ್ಲಿ ನಡೆದ ಪಾದಯಾತ್ರೆಯಲ್ಲಿ ಹಿಮಾಚಲ ಪ್ರದೇಶದ ಪ್ರಮುಖ ನಾಯಕರು ಹೆಜ್ಜೆ ಹಾಕಿದರು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿ ಅಧಿಕಾರ ಹಿಡಿದಿದೆ. ಚುನಾವಣೆ ನೇತೃತ್ವವಹಿಸಿದ್ದ ಪ್ರತಿಭಾಸಿಂಗ್, ನೂತನ ಮುಖ್ಯಮಂತ್ರಿ ಸುಖವಿಂದರ್‍ ಸಿಂಗ್, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರು 100ನೇ ದಿನದ ಯಾತ್ರೆಯಲ್ಲಿ ರಾಹುಲ್‍ಗಾಂಧಿ ಅವರ ಅಕ್ಕಪಕ್ಕದಲ್ಲಿ ಹೆಜ್ಜೆ ಹಾಕಿದರು.

ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯಸಿಂಗ್ ಕೂಡ ಹೆಜ್ಜೆ ಹಾಕಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಾಜೀವ್‍ಶುಕ್ಲ ಅವರು ಯಾತ್ರೆಯ ಜತೆಗೂಡಿದರು.
ಎಐಸಿಸಿಯ ಮತ್ತೊಬ್ಬ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜಸ್ತಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಕುಕ್ಕರ್ ಬಾಂಬ್ ಪ್ರಕರಣ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆ ಶಿವಕುಮಾರ್

ಭಾರತ್ ಜೋಡೋ ಯಾತ್ರೆ ದೇಶದ ಸಾಮಾನ್ಯ ಜನ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪ್ರತಿಬಿಂಬಿಸುವ ದೊಡ್ಡ ಸಾಧನೆಯಾಗಿದೆ. ರಾಹುಲ್‍ಗಾಂಧಿಯವರ ವರ್ಚಸ್ಸನ್ನು ಹಾಳು ಮಾಡಲು ಬಿಜೆಪಿ ಯತ್ನಿಸಿತ್ತು. ಖುದ್ದು ಅವರೇ ವರ್ಚಸ್ಸನ್ನೇ ಕಳೆದುಕೊಂಡಂತಾಗಿದೆ. ಈ ಯಾತ್ರೆ ದೇಶದ ಉದ್ದಗಲಕ್ಕೂ ಮಹತ್ವದ ಸಂದೇಶವನ್ನು ರವಾನೆ ಮಾಡಿದೆ ಎಂದರು.

ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶದ ಮೂಲಕ ಹಾದು ಬಂದಿದೆ. ಪ್ರಸ್ತುತ ರಾಜಸ್ತಾನದಲ್ಲಿ ಸಂಚರಿಸುತ್ತಿದೆ.

ಬೆಂಗಳೂರಿನಲ್ಲಿ ಉಲ್ಬಣಗೊಂಡ ಡೆಂಘೀ; ಕಾಡುತ್ತಿದೆ ಝೀಕಾ ಸೋಂಕಿನ ಭೀತಿ

ಈವರೆಗೂ ಸುಮಾರು 2800 ಕಿ.ಮೀ.ಗಳನ್ನು ಕ್ರಮಿಸಲಾಗಿದ್ದು, ಜಮ್ಮು-ಕಾಶ್ಮೀರಕ್ಕೆ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮೂಲಕ ಪ್ರಯಾಣಿಸಲಿದೆ.

Bharat Jodo Yatra, completes, 100 days, Congress, Rahul Gandhi,

Articles You Might Like

Share This Article