ಆಂಧ್ರ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ

Social Share

ಕರ್ನೂಲ್,ಅ.18- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಅಖಿಲ ಭಾರತ ಐಕ್ಯತಾ ಯಾತ್ರೆ ಇಂದು ಆಂಧ್ರಪ್ರದೇಶ ಪ್ರವೇಶಿಸಿದೆ. ಆಲೂರು ಕ್ಷೇತ್ರದ ಛತ್ರಗುಡಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಹುಲ್ ಗಾಂಧಿ ಯಾತ್ರೆ ಆರಂಭಿಸಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಾಕೇಶ್ ಶೈಲಜನಾಥ್ ಮತ್ತಿತರ ನಾಯಕರು ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡರು.

ಇಂದು ಆಲೂರು ಹಟ್ಟಿಬೆಳಗಲ ಮತ್ತು ಮುನೀರ್‍ಕುತ್ರಿ ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ. ರಾತ್ರಿ ಅಧೋನಿಯ, ಛಾಗಿ ಗ್ರಾಮದಲ್ಲಿ ವಿಶ್ರಾಂತಿ ಪಡೆಯಲಿದೆ. ಅ.14ರಂದು ಅನಂತಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸಂಚರಿಸಿ ಪಾದಯಾತ್ರೆ ಕರ್ನಾಟಕಕ್ಕೆ ವಾಪಸ್ ಆಗಿತ್ತು. ನಿನ್ನೆಯವರೆಗೂ ಬಳ್ಳಾರಿಯಲ್ಲೇ ತಂಗಿದ್ದ ರಾಹುಲ್ ತಂಡ ಇಂದು ಬೆಳಗ್ಗೆ ಸ್ವಲ್ಪ ದೂರ ಕಾರಿನಲ್ಲಿ ಸಂಚರಿಸಿ ನಂತರ ಪಾದಯಾತ್ರೆಯಲ್ಲಿ ಸಾಗಿದೆ.

ಅ.21ರವರೆಗೂ ಆಂಧಪ್ರದೇಶದಲ್ಲಿ ಸಂಚಾರ ಮಾಡಿ ಬಳಿಕ ಕರ್ನಾಟಕಕ್ಕೆ ಮರಳಲಿದೆ. ಮಾರನೆ ದಿನ ತೆಲಂಗಾಣದ ಮೂಲಕ ಯಾತ್ರೆ ಮುಂದುವರೆಯಲಿದೆ.

Articles You Might Like

Share This Article