ಫತೇಘರ್ ಸಾಹಿಬ್,ಜ.11- ಬಿಜೆಪಿಯ ಭಯ ಮತ್ತು ದ್ವೇಷ ಹರಡುವ ರಾಜಕಾರಣದಿಂದ ಜನ ಬೇಸರಗೊಂಡಿದ್ದು, ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಿ ಯಶಸ್ಸು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪಂಜಾಬ್ನಲ್ಲಿ ಯಾತ್ರೆ ಪ್ರಾರಂಭಿಸುವ ಮೊದಲು ಪತೇಘರ್ಸಾಹಿಬ್ ಸಮೀಪದ ಸಿರ್ಹಿಂದ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ನವರು ದೇಶವನ್ನು ವಿಭಜಿಸಿ, ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು, ಒಂದು ಜಾತಿಯ ವಿರುದ್ಧ ಇನ್ನೊಂದು ಜಾತಿಯನ್ನು, ಒಂದು ಭಾಷೆಯನ್ನು ಇನ್ನೊಂದು ಭಾಷೆಯ ವಿರುದ್ಧ ಎತ್ತಿಕಟ್ಟು ದೇಶದಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಇದರಿಂದ ಭಾತೃತ್ವದ ವಾತಾವರಣ ಹಾಳಾಗುತ್ತಿದೆ ಎಂದರು.
ದೇಶದಲ್ಲಿ ಪ್ರೀತಿ, ಒಗ್ಗಟ್ಟು, ಭ್ರಾತೃತ್ವದ ನೆಲೆಸಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ. ಯಾತ್ರೆಗೆ ಅಪಾರ ಜನಸ್ಪಂದನೆ ವ್ಯಕ್ತವಾಗಿದೆ. ಪ್ರತಿ ರಾಜ್ಯಕ್ಕಿಂತಲೂ ಮತ್ತೊಂದು ರಾಜ್ಯದಲ್ಲಿನ ಬೆಂಬಲ ವ್ಯಕ್ತವಾಗಲಿದೆ.
ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು
ಬಿಜೆಪಿಯವರು ಹರಡುತ್ತಿರುವ ದ್ವೇಷ, ಭಯ ಮತ್ತು ಹಿಂಸಾಚಾರ ಜನರಿಗೆ ಇಷ್ಟವಾಗಿಲ್ಲ. ಇದು ನಮ್ಮ ದೇಶದ ಮಾರ್ಗವಲ್ಲ ಮತ್ತು ಇತಿಹಾಸವೂ ಅಲ್ಲ. ಸಹೋದರತೆ, ಏಕತೆ ಮತ್ತು ಗೌರವದಿಂದ ಕೂಡಿರುವ ಭಾರತವನ್ನು ಉಳಿಸಿಕೊಳ್ಳಲು ಜನ ಬಯಸಿದ್ದಾರೆ. ಅದಕ್ಕಾಗಿಯೇ ನಮ್ಮ ಯಾತ್ರೆಯನ್ನು ಯಶಸ್ಸು ಮಾಡಿದ್ದಾರೆ ಎಂದರು.
ಸಯಾತ್ರೆಯ ಸಂದರ್ಭದಲ್ಲಿ, ರೈತರು, ಸಣ್ಣ ಅಂಗಡಿಕಾರರು, ಕಾರ್ಮಿಕರು ಮತ್ತು ನಿರುದ್ಯೋಗಿ ಯುವಕರೊಂದಿಗೆ ಮಾತನಾಡುವುದರಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ಗಾಂಧಿ ಹೇಳಿದರು.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪ್ರತಿಪಕ್ಷದ ನಾಯಕ ಪರ್ತಪ್ ಸಿಂಗ್ ಬಜ್ವಾ, ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಭೂಪಿಂದರ್ ಸಿಂಗ್ ಹೂಡಾ, ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸೇರಿದಂತೆ ಇತರರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಭಾರತ್ ಜೋಡೋ ಯಾತ್ರೆ ಆರಂಭಕ್ಕೂ ಮುನ್ನ ಗಾಂಧಿ ವಂಶಸ್ಥರು ಗುರುದ್ವಾರ ಫತೇಘರ್ ಸಾಹಿಬ್ನಲ್ಲಿ ನಮನ ಸಲ್ಲಿಸಿದರು. ರಾಹುಲ್ಗಾಂಧಿ ಎಂದಿನಂತೆ ಬಿ ಶರ್ಟ್ನಲ್ಲೇ ಕೊರೆಯುವ ಚಳಿಯಲ್ಲಿ ಯಾತ್ರೆ ಮುನ್ನೆಡೆಸಿದರು.
Bharat Jodo Yatra, India, brotherhood, unity, Rahul, Punjab,