ತಿರುವನಂತಪುರಂ,ಸೆ.19- ಭಾರತ್ ಜೋಡೊ ಯಾತ್ರೆಯ 12ನೇ ದಿನವಾದ ಇಂದು ರಾಹುಲ್ ಗಾಂಧಿ ಕೇರಳದ ಲಫ್ಪುಜಾ ಜಿಲ್ಲೆಯ ಹುನ್ನಾಪರ್‍ನಿಂದ ಪಾದಯಾತ್ರೆ ಆರಂಭಿಸಿದರು. ಹಾದಿ ಮಧ್ಯೆ ವಡಕ್ಕಾಲ್ ಬೀಚ್ ಬಳಿಯ ಮೀನುಗಾರರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದು, ಇಂಧನ ದರ ಏರಿಕೆ, ಸಾಮಾಜಿಕ ನೀತಿ ಕೊರತೆ, ಮೀನು ದಾಸ್ತಾನು ಶಿಥೀಲಿಕರಣ, ಶಿಕ್ಷಣದ ಸಮಸ್ಯೆ ಕುರಿತು ಮೀನುಗಾರರು ವಿವರಣೆ ನೀಡಿದರು.
ವಯೋಮಾನ ಮೀರಿ ವೃದ್ಧರು, ಯುವಕರು ಪಾದಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ. ಈ ಹೆಜ್ಜೆಗಳು ನಿಲ್ಲುವುದಿಲ್ಲ. ಭಾರತವನ್ನು ಪುನರ್ ಜೋಡಣೆ ಮಾಡಲಿದೆ ಎಂದು ಕಾಂಗ್ರೆಸ್ ಟ್ವಿಟ್‍ನಲ್ಲಿ ತಿಳಿಸಿದೆ. ಗಾಂಧೀಜಿ ವೇಷಧಾರಿಯೊಬ್ಬರು ಇಂದು ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದು, ದೇಶದ ಭಾವೈಕ್ಯತೆಗೆ ಧಕ್ಕೆಯಾದಾಗಲೆಲ್ಲ ಗಾಂಧೀಜಿ ಮರುಸಂಪರ್ಕಿಸುವ ಕೆಲಸ ಮಾಡುತ್ತಾರೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-09-2022)
ಹಾದಿ ಮಧ್ಯೆ ಯುವಕ ತಂಡವೊಂದು ಸಾಂಸ್ಕøತಿಕ ನೃತ್ಯ ಹಾಗೂ ಬೀದಿನಾಟಕಗಳ ಮೂಲಕ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಪ್ರದರ್ಶನ ನೀಡಿತ್ತು. ಇದನ್ನು ರಾಹುಲ್ ಗಾಂಧಿ ಖುದ್ದಾಗಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದರು.
ನಂತರ ನೃತ್ಯ ತಂಡದಲ್ಲಿದ್ದ ಭಾಗವಹಿಸಿದ್ದ ಕಲಾವಿದರೊಂದಿಗೆ ಸಂವಾದ ನಡೆಸಿದರು.
ದೇಶ ಸುಸ್ಥಿರ ಜೀವನ, ಭದ್ರತಾ ವಿಷಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆ ಕುರಿತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯುವಕರ ಜಾಗೃತಿಗೊಂದರೆ ಪರಿಣಾಮಕಾರಿ ಎಂದು ರಾಹುಲ್ ಗಾಂ ಸಂವಾದದ ವೇಳೆ ಹುರಿದುಂಬಿಸಿದ್ದಾರೆ.
ಎಂದಿನಂತೆ ಭಾರತ್ ಜೋಡೊ ಯಾತ್ರೆಗೆ ಇಂದು ಕೂಡ ಅಪಾರ ಪ್ರಮಾಣದ ಜನಸ್ತೋಮದ ಬೆಂಬಲ ದೊರೆತಿದೆ.