ನವದೆಹಲಿ,ಜ.8- ರಾಹುಲ್ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹರಿಯಾಣ ತಲುಪಿದ್ದು, ದಟ್ಟ ಮಂಜಿನ ನಡುವೆಯೂ ಕಾರ್ಯಕರ್ತರು ಶರ್ಟ್ ತೆಗೆದು ನೃತ್ಯ ಮಾಡುತ್ತಿರುವುದು ಯಾತ್ರೆಗೆ ಮತ್ತಷ್ಟು ಹುರುಪು ತರಿಸಿದೆ.
ದಟ್ಟ ಮಂಜಿನ ನಡುವೆಯೂ ಕಾರ್ಯಕರ್ತರು ಶರ್ಟ್ ತೆಗೆದು ಬಸ್ ಮೇಲೆ ನೃತ್ಯ ಪ್ರದರ್ಶನ ಮಾಡುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಯಾತ್ರೆಯ ಬ್ಯಾನರ್ ಹಿಡಿದುಕೊಂಡಿರುವ ಯುವಕರ ಗುಂಪೊಂದು ಗುಲಾಬಿ ಪೇಟ ಧರಿಸಿ ಬಸ್ಗಳ ಮೇಲೆ ಶರ್ಟ್ರಹಿತರಾಗಿ ನೃತ್ಯ ಮಾಡುತ್ತ ಯಾತ್ರೆಯನ್ನು ಹುರಿದುಂಬಿಸುತ್ತಿದ್ದಾರೆ.
ಮೈ ಕೊರೆಯುವ ಚಳಿಯಲ್ಲೂ ಇಂತಹ ಸಾಹಸ ಏಕೆ ಎಂದರೆ ಯಾತ್ರೆಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ಅವರೇ ನನಗೆ ಚಳಿ ಗಾಳಿ ಸೋಕುವುದಿಲ್ಲ ಎಂದಿದ್ದಾರೆ. ಅವರ ಹೇಳಿಕೆಗೆ ಬೆಂಬಲ ಸೂಚಿಸಿ ನಾವು ಇಂತಹ ಕಾರ್ಯಕ್ಕೆ ಕೈ ಹಾಕಿದ್ದೇವೆ ಎನ್ನುತ್ತಾರೆ ಅವರು.
ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಸಿರು ಆಮೆ
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಆರಂಭಿಸಲಾದ ಯಾತ್ರೆಯು ಪ್ರಸ್ತುತ ಹರಿಯಾಣದಲ್ಲಿದೆ. ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಹರಿಯಾಣ ತಲುಪಿರುವ ಶೀಘ್ರ ಪಂಜಾಬ್ ತಲುಪಲಿದೆ. ಅಂತಿಮವಾಗಿ ಯಾತ್ರೆ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.
Bharat Jodo Yatra, Supporters, Dance, Shirtless, Cold Wave,