ಅಗರ್‍ಮಲ್ವ, ಡಿ. 3- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೊಡೊ ಯಾತ್ರೆ ಇಂದು ಮಧ್ಯಪ್ರದೇಶದ ಮೂಲಕ ರಾಜಸ್ಥಾನ ಪ್ರವೇಶಿಸಲಿದೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಇಂದು ಸಂಜೆಯಿಂದ ರಾಹುಲ್ ಯಾತ್ರೆ ಅಬ್ಬರಿಸಲಿದೆ.
ಭಾನುವಾರ ಬೆಳಗ್ಗೆ ಅಗರ್ ಮಲ್ವ ಜಿಲ್ಲೆಯಲ್ಲಿ ಕೊನೆ ಹೆಜ್ಜೆಗಳನ್ನು ಹಾಕಿದ ರಾಹುಲ್ ಗಾಂಧಿ ಸಂಜೆ ರಾಜಸ್ಥಾನ ಗಡಿ ಪ್ರವೇಶಿಸಲಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ರಾಜಸ್ಥಾನದ ನಾಯಕರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆ ಮುಂದುವರೆಸುವ ಜವಾಬ್ದಾರಿ ಮಾಡಲಿದ್ದಾರೆ.
“ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ”
ಕಳೆದ 12 ದಿನಗಳಿಂದ ಮಧ್ಯಪ್ರದೇಶದಲ್ಲಿ ರಾಹುಲ್‍ಗಾಂಧಿ 380 ಕಿಲೋ ಮೀಟರ್ ಸಂಚರಿಸಿದ್ದಾರೆ. ಬುರಾಹನ್‍ಪುರ್, ಖಂಡ್ವ, ಖರ್ಗೊನ್, ಇಂದೊರ್ ಜಿಲ್ಲೆಗಳಲ್ಲಿ ಸಂಚಾರ ನಡೆಸಿವೆ.
10.50 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳಿಗೆ ಒಡಿಶಾ ಸರ್ಕಾರ ಸಹಿ
ಭಾರತ್ ಜೊಡೊ ಯಾತ್ರೆ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿತ್ತು.
ಇಂದಿಗೆ 88 ದಿನಗಳಾಗಿದ್ದು, ಕಾಶ್ಮೀರದವರೆಗೂ ಯಾತ್ರೆ ಮುಂದುವರೆಯಲಿದೆ. ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಮಹಕಾಲ್ ದೇವಸ್ಥಾನ ಓಂಕಾರೇಶ್ವರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Bharat Jodo Yatra, enter, Rajasthan,