ತುಮಕೂರು,ಅ.10 -ಭಾರತ್ ಜೋಡೋ ಯಾತ್ರೆ ಜಿಲ್ಲೆಯಲ್ಲಿ ಮೂರನೇ ದಿನ ಪ್ರಾರಂಭಗೊಂಡಿದ್ದು, ಎಐಸಿಸಿ ಮುಖಂಡ ರಾಹುಲ್ ಜೊತೆ ಹೆಜ್ಜೆ ಹಾಕಲು ಜನೋತ್ಸಾಹ ಇಮ್ಮಡಿಯಾಗಿದ್ದು, ಮೂರನೇ ದಿನವೂ ಜನಸಾಗರ ಹರಿದುಬಂದಿದೆ.
ಚಿನಾಹಳ್ಳಿ ತಾಲ್ಲೂಕಿನ ಬಳಕಟ್ಟೆಯಿಂದ ಪ್ರಾರಂಭಗೊಂಡಿರುವ ಪಾದಯಾತ್ರೆ ಹುಳಿಯಾರು ಮೂಲಕ
ಕೆಂಕೆರೆ ಬಸವನಗುಡಿಯವರೆಗೆ ಸಾಗಲಿದ್ದು ನಂತರ ರಾಗಾ ಹಿರಿಯೂ ರುವರೆಗೆ ಭದ್ರತಾ ದೃಷ್ಟಿಯಿಂದ ವಾಹನದಲ್ಲಿ ಸಾಗಲಿದ್ದಾರೆ. ಬಸವನಗುಡಿಯಿಂದ ಹಿರಿಯೂರುವರೆಗಿನ ಮಾರ್ಗ ಅರಣ್ಯ ಪ್ರದೇಶಲ್ಲಿರುವುದರಿಂದ
ಎಐಸಿಸಿ ಈ ಮಾರ್ಗದಲ್ಲಿ ಪಾದಯಾತ್ರೆಯನ್ನು ರದ್ದುಪಡಿಸಿದ್ದು, ಹಿರಿಯೂರಿನಿಂದ ಇಂದು ಸಂಜೆ ಪಾದಯಾತ್ರೆ ಪುನಾರಂಭಗೊಳ್ಳಲಿದೆ.
ತುಮಕೂರು ಜಿಲ್ಲೆಯ ಹುಳಿಯಾರು ಮೂಲಕ ಯಾತ್ರೆ ಹಿರಿಯೂರು ತಾಲ್ಲೂಕು ಪ್ರವೇಶಿಸಲಿದೆ. ತುಮಕೂರು ಗಡಿಯಿಂದ ಯಾತ್ರಾರ್ಥಿಗಳು ವಾಹನದಲ್ಲಿ ಹಿರಿಯೂರು ನಗರಕ್ಕೆ ಸಂಜೆ 4 ಗಂಟೆಗೆ ತಲುಪಲಿದ್ದು, ವಿಜ್ಞಾನ ಕಾಲೇಜು ಮೈದಾನದಲ್ಲಿ ಯಾತ್ರೆಗೆ ಸ್ವಾಗತ ಓ ಕೋರಲು ತಯಾರಿ ಮಾಡಿಕೊಳ್ಳಲಾಗಿದೆ.
ಹಿರಿಯೂರು ನಗರದಿಂದ ಆರಂಭವಾಗುವ ಪಾದಯಾತ್ರೆ ಬಾಲೇನಹಳ್ಳಿ ಗೇಟ್‍ವರೆಗೆ ಸಾಗಲಿದೆ. ಕಾಂಗ್ರೆಸ್ ಮುಖಂಡರು ಹಾಗೂ ಭಾರಿ ಸಂಖ್ಯೆಯ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಂಜೆ 7 ಗಂಟೆಯವರೆಗೆ ಯಾತ್ರೆಯಲ್ಲಿ ಹೆಜ್ಜೆ ಹಾಕುವ ರಾಹುಲ್, ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಬೆಳಿಗ್ಗೆ ಪ್ರಾರಂಭಗೊಂಡ ಪಾದಯಾತ್ರೆಗೆ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ವೇಣುಗೋಪಾಲ್, ಮಾಜಿ ಸಚಿವ ಟಿ.ಬಿಜಯಚಂದ್ರ, ವೈ.ಸಿ.ಸಿದ್ದರಾಮಯ್ಯ, ಡಿ.ಟಿ.ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.
ಕಲಾತಂಡಗಳ ಮೆರೆಗು: ಐಕತ್ಯಾ ಯಾತ್ರೆಯಲ್ಲಿ ಕೇರಳದ ವಾದ್ಯ ಮತ್ತು ಯವ ಕಾಂಗ್ರೆಸ್‍ನ ಬ್ಯಾಂಡ್ ಮೇಳದೊಂದಿಗೆ ಸ್ಥಳೀಯ ಕಲಾತಂಡಗಳು ಭಾಗವಹಿಸುತ್ತಿವೆ. ಪಾದಯಾತ್ರೆಯನ್ನು ವೀಕ್ಷಿಸಲು ದಾರಿಯುದ್ದಕ್ಕೂ ಗ್ರಾಮಸ್ಥರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ಪೋಸ್ಟರ್ ಬಿಸಿ: ಕಾಂಗ್ರೆಸ್ ಜೋಡೋ ಯಾತ್ರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ನಿನ್ನೆ ಪೆÇೀಸ್ಟರ್ ಬಿಸಿ ತಟ್ಟಿತ್ತು. ಸಿದ್ದರಾಮಯ್ಯನವರೇ, ನಾನು ರಾಜು ಕಾಂಗ್ರೆಸ್‍ನಿಂದಲೇ ನನ್ನ ಕೊಲೆ ಆಗಿದ್ದು ಪಿಎಫ್‍ಐ, ಎಸ್‍ಡಿಪಿಐ ಮೇಲಿನ ನಿಮ್ಮ ಪ್ರೀತಿಗೆ, ಅವರ ಮೇಲಿನ ಪ್ರಕರಣಗಳನ್ನು ಕೈಬಿಟ್ಟಿದ್ದಕ್ಕೆ ನಾನು ಕೊಲೆಯಾದೆ ಎಂದು ಯಾರೋ ಅನಾಮಿಕರು ಅಂಟಿಸಿದ್ದ ಪೆÇೀಸ್ಟರ್‍ಗಳು ಮುಜುಗರ ಉಂಟುಮಾಡಿದೆ.