ಬಳ್ಳಾರಿ ತಲುಪಿದ ಭಾರತ್ ಜೋಡೋ ಯಾತ್ರೆ ನಾಳೆ ಬೃಹತ್ ಸಮಾವೇಶ

Social Share

ಬೆಂಗಳೂರು, ಅ.14- ಭಾರತ್ ಜೋಡೋ ಯಾತ್ರೆ ರಾಜ್ಯದ ರಾಜಕೀಯ ಕೇಂದ್ರೀಕೃತ ಪ್ರದೇಶ ಬಳ್ಳಾರಿಗೆ ತಲುಪಿದ್ದು, ನಾಳೆ ಅಲ್ಲಿಯೇ ಬೃಹತ್ ಸಮಾವೇಶ ನಡೆಯಲಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ 3700 ಕಿಲೋ ಮೀಟರ್ ಯಾತ್ರೆ ಈವರೆಗೂ ಒಟ್ಟು 1022 ಕಿಲೋ ಮೀಟರ್ ಕ್ರಮಿಸಿದೆ. ಇದರಲ್ಲಿ ರಾಹುಲ್ ಗಾಂಧಿ ಮತ್ತು ತಂಡ 679 ಕಿಲೋ ಮೀಟರ್ ಹೆಜ್ಜೆ ಹಾಕಿದ್ದಾರೆ.

ಹದಿಮೂರನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ ಇಂದು ಬೆಳಗ್ಗೆ ರಾಂಪುರದಿಂದ ಆರಂಭವಾಯಿತು. ಮೊದಲ ಹಂತ ಆಂಧ್ರ ಪ್ರದೇಶದ ಜಾಜಿರಕಲ್ಲುವರೆಗೂ 13 ಕಿಲೋ ಮೀಟರ್ ನಡೆದಿದೆ. ಸಂಜೆ 6.5 ಕಿಲೋ ಮೀಟರ್ ನಡೆದು ಒಟ್ಟು ದಿನದ ಯಾತ್ರೆ 19 ಕಿಲೋ ಮೀಟರ್ಗಳಷ್ಟಾಗಲಿದೆ. ಸಂಜೆ ಹಲಕುಂಡಿ ಮಠದ ಬಳಿ ವಿಶ್ರಾಂತಿ ಪಡೆಯಲಿದೆ.

ರಾಷ್ಟ್ರೀಯ ನಾಯಕರಾದ ದಿಗ್ವಿಜಯಸಿಂಗ್, ಕೆ.ಸಿವೇಣಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿ ಅನೇಕರು ಹೆಜ್ಜೆ ಹಾಕಿದ್ದಾರೆ.

ಆರಂಭದಲ್ಲಿ ಬಳ್ಳಾರಿಯ ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗುವಾಗ ದಾರಿಯುದ್ಧಕ್ಕೂ ಸಾಲುಗಟ್ಟಿ ನಿಂತಿದ್ದ ಜನ ರಾಹುಲ್ ಗಾಂಧಿಯವರನ್ನು ಕಂಡು ಪುಳಕಿತರಾದರು. ಅಲ್ಲಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಒಳಜಗಳ ಮರೆತು ನಾಯಕರು ಒಟ್ಟಾಗಿ ಹೆಜ್ಜೆ ಹಾಕಿದರು. ಹನುಮವೇಶಧಾರಿಗಳು ಯಾತ್ರೆಯಲ್ಲಿ ಕಾಣಿಸಿಕೊಂಡರು. ಅಥ್ಲೆಟಿಕ್ ಒಬ್ಬಳು ಯಾತ್ರೆಯ ಮುಂದೆ ತನ್ನ ಕೌಶಲ್ಯ ಪ್ರದರ್ಶನ ಮಾಡಿದರು.

ರಾಜ್ಯದ ಗಡಿಯ ಭಾಗವಾಗಿರುವ ಮೊಳಕಾಲ್ಮೂರಿನ ಕಣಕುಪ್ಪೆ ಗ್ರಾಮದ ಮೂಲಕ ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಹಿರೇಹಾಳ್ ಸೇರಿ ಹಲವು ಗ್ರಾಮಗಳಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಒಬಳಪುದಲ್ಲಿ ರಾಹುಲ್ ಗಾಂಧಿಗಾಗಿ ವೇದಿಕೆ ಸಿದ್ಧಗೊಳಿಸಿ ಸಣ್ಣ ಕಾರ್ಯಕ್ರಮದಲ್ಲಿ ಮೇಕೆ ಮರಿಗಳನ್ನು ಉಡುಗೊರೆ ನೀಡಲು ಜನ ಕಾಯುತ್ತಿದ್ದರು. ಆದರೆ ರಾಹುಲ್ ಗಾಂಧಿ ವೇದಿಕೆ ಹತ್ತದೆ ಪಾದಯಾತ್ರೆ ಮುಂದುವರೆಸಿದರು. ಮೇಕೆ ಮರಿ ನೀಡಲು ನಿಂತಿದ್ದವರಿಗೆ ನಿರಶೆಯಾಯಿತು. ಬಿಸಿಲಿನ ತಾಪ ಯಾತ್ರಿಗಳನ್ನು ಹೈರಾಣು ಮಾಡಿತ್ತು.

ಜಾರ್ಜರಿ ಕಲ್ಲಿನ ಟೋಲ್ ಬಳಿ ರಾಹುಲ್ಗಾಂ ಯಾತ್ರೆ ಅಂತ್ಯಗೊಂಡಿತ್ತು. ಅಲ್ಲಿಂದ ರಾಹುಲ್ ವಿಶ್ರಾಂತಿಗಾಗಿ ತೆರಳಿದರು. ನಾಳೆ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜಸ್ಥಾನ ಮತ್ತು ಚತ್ತಿಸ್ಘಡದ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.

Articles You Might Like

Share This Article