ಕಾಂಗ್ರೆಸ್ ಭಾರತ್ ಜೊಡೋಯಾತ್ರೆ ಕುರಿತು ಪ್ರಹ್ಲಾದ್ ಜೋಶಿ ವ್ಯಂಗ್ಯ

Social Share

ಹುಬ್ಬಳ್ಳಿ,ಅ.23- ಪ್ರದಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಅಚ್ಚುಕಟ್ಟಾಗಿ ಜೊಡೋ ಆಗಿದೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ನೀವು ಭಾರತ ಜೋಡೋ ಮಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಚೀನಾಗೆ ಭೂಮಿ ಕೊಟ್ಟಿದ್ದರ ಜೊಡೋ ಮಾಡಿ. ನೀವು ತೋಡೋ ಮಾಡಿದವರ ಪಾರ್ಟಿಯವರು. ಮೊದಲು ತೋಡೋ ಮಾಡಿದರ ಜೋಡೋ ಮಾಡಿ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತ್ ಜೊಡೋ ಕಾಂಗ್ರೆಸ್ ತೊಡೋ ಯಾತ್ರೆಯಾಗುತ್ತಿದೆ. ರಾಹುಲ್ ಗಾಂಧಿಯವರಿಗೆ ಯಾರೋ ಬರೆದು ಕೊಡುತ್ತಾರೆ. ಅದನ್ನು ಅವರು ಓದುತ್ತಾರೆ. ಬರೆದು ಕೊಟ್ಟಿದ್ದು ಬಿಟ್ಟು ಪ್ರತ್ಯೇಕ ಪ್ರಶ್ನೆ ಮಾಡಿದರೆ ಅವರಿಗೆ ಉತ್ತರ ಕೊಡುವುದಕ್ಕೆ ಬರುವುದಿಲ್ಲ. ಬಾಯಿಪಾಠ ಮಾಡಿಸಿದ್ದು ಬಿಟ್ಟು ಬೇರೆ ಹೇಳಲು ಬರುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ಸಚಿವ ಸೋಮಣ್ಣ

ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಹಿನ್ನಲೆ. ಭಾರತ ಗೆಲ್ಲುತ್ತದೆ ಇಂಡಿಯಾ ಗೆಲ್ಲಬೇಕು ಗೆಲ್ಲುತ್ತದೆ. ಅದರ ಬಗ್ಗೆ ಅನುಮಾನ ಬೇಡ ಎಂದು ಇದೇ ವೇಳೆ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ದೀಪಾವಳಿ ಬಳಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಮುಖ್ಯಮಂತ್ರಿಗಳು ಹಬ್ಬದ ಮುಗಿದ ಬಳಿಕ ದೆಹಲಿಗೆ ಬರುವುದಾಗಿ ಹೇಳಿದ್ದಾರೆ. ಈ ವೇಳೆ ಚರ್ಚಿಸುವುದಾಗಿ ಹೇಳುವ ಮೂಲಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಜೋಶಿ ಸುಳಿವು ಕೊಟ್ಟರು.

ಮಾಹಾದಾಯಿ ಕಾಮಗಾರಿ ಕಾರ್ಯಾಗಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗೋವಿಂದ ಕಾರಜೋಳ ಮುತುವರ್ಜಿಯಿಂದ ಒಳ್ಳೆಯ ಕೆಲಸ ಆಗುತ್ತಿದೆ. ಟೆಕ್ನಾಲಜಿ ಉಪಯೋಗಿಸಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಕಾಡು ಹಾಳು ಕಡಿಮೆ ಮಾಡಬೇಕಿದೆ. ತಾಂತ್ರಿಕತೆ ಉಪಯೋಗಿಸಿ ಅರಣ್ಯ ಉಳಸಬೇಕಿದೆ ಎಂದರು.

ಒಂದು ವರ್ಷದೊಳಗೆ ನೀರು ಬರುತ್ತದೆ. ಇದು ರೈತರಿಗೆ ಅರ್ಥವಾಗಬೇಕು. ಕೆಲವರು ನಿರುದ್ಯೋಗಿಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಎನ್. ಹೆಚ್. ಕೋನರೆಡ್ಡಿ ಅವರ ವಿರುದ್ದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಗುಜರಾತ್ ಚುನಾವಣೆಗೆ ದಿನಗಣನೆ : ಮತ್ತೆ ನೆನಪಾಗುತ್ತಿದ್ದಾರೆ ಈ ಹೋರಾಟಗಾರರು

ಸಂತಾಪ: ಸವದತ್ತಿ ಶಾಸಕ ಹಾಗೂ ವಿಧಾನಸಭಾ ಉಪಾಸಭಾಧ್ಯಕ್ಷ ಆನಂದ್ ಮಾಮನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಹ್ಲಾದ್ ಜೋಷಿ, ಆನಂದ್ ಮಾಮನಿ ಅವರು ವೈಯಕ್ತಿಕವಾಗಿ ನನಗೆ ಬಹಳ ಆತ್ಮೀಯರಾಗಿದ್ದರು. ಮೂರು ಬಾರಿ ಶಾಸಕರಾಗಿದ್ದ ಮಾಮನಿ ಜನಾನುರಾಗಿ ನಾಯಕರಾಗಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ನಷ್ಟ ಉಂಟಾಗಿದೆ. ಪರಮಾತ್ಮ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥಿಸಿದರು.

Articles You Might Like

Share This Article