ರಾಹುಲ್ ಯಾತ್ರೆಗೆ ಹೆಚ್ಚಿದ ಹುಮ್ಮಸ್ಸು

Social Share

ಬೆಂಗಳೂರು,ಅ.12- ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಯ 10ನೇ ದಿನವಾದ ಇಂದು ಮತ್ತಷ್ಟು ವೈಶಿಷ್ಟ್ಯಗಳಿಗೆ ಕಾರಣವಾಯಿತು. ಬೆಳಗ್ಗೆ ನಿಗದಿತ ಸಮಯಕ್ಕೆ ಚಳ್ಳಕೆರೆ ಪಟ್ಟಣದಿಂದ ಆರಂಭವಾದ ಪಾದಯಾತ್ರೆಗೆ ಜನಸ್ತೋಮದ ಬೆಂಬಲ ಕಂಡುಬಂದಿತು. ಪಟ್ಟಣದಾದ್ಯಂತ ಫ್ಲೆಕ್ಸ್, ಬ್ಯಾನರ್‍ಗಳ ಅಬ್ಬರ ಜೋರಾಗಿತ್ತು.

ಪ್ರಮುಖವಾಗಿ ಕಾಂಗ್ರೆಸ್ ನಾಯಕರ ಲ್ಲಿರುವ ಒಗ್ಗಟ್ಟನ್ನು ಪ್ರತಿಪಾದಿ ಸುವ ಫ್ಲೆಕ್ಸ್‍ಗಳು ವ್ಯಾಪಕವಾಗಿದ್ದವು. ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಪರಸ್ಪರ ಅಪ್ಪಿಕೊಂಡಿರುವುದು, ಮಲ್ಲಿಕಾರ್ಜುನ ಖರ್ಗೆ-ಸಿದ್ದರಾಮಯ್ಯ ಒಟ್ಟಾಗಿರುವುದು, ರಾಹುಲ್ ಗಾಂv- ಸಿದ್ದರಾಮಯ್ಯ ಅವರ ಕೈ ಹಿಡಿದು ಓಡುತ್ತಿರುವುದು ಸೇರಿದಂತೆ ಅನೇಕ ಭಾವಚಿತ್ರಗಳನ್ನೊಳಗೊಂಡ ಫ್ಲೆಕ್ಸ್‍ಗಳು ವ್ಯಾಪಕವಾಗಿದ್ದವು.

ಕಾಂಗ್ರೆಸ್‍ನ ಆಂತರಿಕ ಕಚ್ಚಾಟದ ಕುರಿತು ಬಿಜೆಪಿ ಪದೇ ಪದೇ ಪ್ರಸ್ತಾಪಿಸುತ್ತಲೇ ಇದೆ. ಅದಕ್ಕೆ ತಿರುಗೇಟು ನೀಡುವಂತೆ ಇಂದು ಕಾಂಗ್ರೆಸ್ ಫ್ಲೆಕ್ಸ್ , ಬ್ಯಾನರ್‍ಗಳನ್ನು ಹಾಕಿದೆ. ಅದ್ಧೂರಿ ಸ್ವಾಗತ ನಾಯಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತು.

ರಾಹುಲ್‍ಗಾಂಧಿ ಎಂದಿನಂತೆ ಜನಸಾಮಾನ್ಯರೊಂದಿಗೆ, ಮಕ್ಕಳೊಂದಿಗೆ ಸಂವಾದ ನಡೆಸುತ್ತಲೇ ಹೆಜ್ಜೆ ಹಾಕಿದರು. ಪೌರಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಅವರ ಕಷ್ಟಸುಖಗಳನ್ನು ಆಲಿಸಿದರು. ಅವರೊಂದಿಗೆ ಕೈ ಹಿಡಿದು ಹೆಜ್ಜೆ ಹಾಕಿದರು.

ಬಾಲಕಿಯೊಬ್ಬಳು ಭರತನಾಟ್ಯ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಳು. ನೃತ್ಯ ಕಂಡು ರಾಹುಲ್ ಗಾಂಧಿ ಪುಳಕಿತರಾಗಿ ಆಕೆಯನ್ನು ಅಭಿನಂದಿಸಿದರು. ಕೆಲ ವಿದ್ಯಾರ್ಥಿನಿಯರಿಗೆ ರಾಹುಲ್ ಗಾಂ ಅವರನ್ನು ಭೇಟಿ ಮಾಡಲು ಭದ್ರತಾ ಸಿಬ್ಬಂದಿ ಅವಕಾಶ ಮಾಡಿಕೊಟ್ಟಾಗ ಕೈ ಹಿಡಿದು ಜೊತೆ ಜೊತೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಈ ನಡುವೆ ಯಾತ್ರೆಯ ಜನದಟ್ಟಣೆಯಿಂದಾಗಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್‍ವೊಂದು ಅದೇ ಮಾರ್ಗದಲ್ಲಿ ಬಂದು ಯಾತ್ರೆ ಮಧ್ಯದಲ್ಲಿ ಸಿಲುಕಿಕೊಂಡಿತು. ಸೈರೆನ್ಸ್ ಶಬ್ದ ಕೇಳಿದ ರಾಹುಲ್ ಗಾಂಧಿ ಖುದ್ದಾಗಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟರು.

ಇಂದಿನ ಮಹತ್ವದ ಬೆಳವಣಿಗೆ ಎಂದರೆ ಐಕ್ಯತಾ ಯಾತ್ರೆಯಲ್ಲಿ ತೊಡಗಿಸಿಕೊಂಡಿರುವ ಭಾರತ ಯಾತ್ರಿಗಳ ಪೈಕಿ 33 ಮಂದಿ ಅಂಗಾಂಗ ದಾನ ಮಾಡಲು ಒಪ್ಪಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಂದ ಪ್ರೇರಣೆ ಪಡೆದ ಯಾತ್ರಾತ್ರಿಗಳು ಪುನೀತ್ ರಾಜ್‍ಕುಮಾರ್ ಫೋಟೋ ಹಿಡಿದು ದಾನಪತ್ರಗಳಿಗೆ ಸಹಿ ಹಾಕಿದರು.

ಅಂಗಾಂಗ ದಾನ ಮಾಡಿದ ಮೂರು ಕುಟುಂಬಗಳ ಸದಸ್ಯರೊಂದಿಗೆ ರಾಹುಲ್ ಗಾಂಧಿ ಸ್ವಲ್ಪ ದೂರ ಹೆಜ್ಜೆ ಹಾಕಿದರು. ಇಂದಿನ ಯಾತ್ರೆಯಲ್ಲಿ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹಳಿಯಾಲ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಕಾರವಾರ, ಸೊರಬ, ರಾಣೆಬೆನ್ನೂರು, ಕುಮುಟಾ, ಬೈಂದೂರು, ಭಟ್ಕಳ, ಶಿರಸಿ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಬೆಳಗ್ಗೆ ಮೊದಲ ಹಂತದ ಪಾದಯಾತ್ರೆ ಗಿರಿಯಮ್ಮನಹಳ್ಳಿವರೆಗೂ 16 ಕಿ.ಮೀವರೆಗೂ ತಲುಪಿ ವಿಶ್ರಾಂತಿ ಪಡೆಯಿತು.
ಎಐಸಿಸಿ ನಾಯಕರಾದ ದಿಗ್ವಿಜಯ್ ಸಿಂಗ್, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀ ಬ್ರೇಕ್ ವೇಳೆ ಯಾತ್ರೆಗೆ ಜೊತೆ ಸೇರಿಕೊಂಡರು. ಮಾಜಿ ಸಚಿವ ಡಿ.ಸುಧಾಕರ್ ಅವರ ಕೈ ಹಿಡಿದು ರಾಹುಲ್ ಗಾಂ ಜಾಗಿಂಗ್ ಮಾಡಿದರು. ಆದರೆ ಸುಧಾಕರ್ ಅವರು 30 ಮೀಟರ್ ದೂರ ಓಡುವಷ್ಟರಲ್ಲಿ ಸುಸ್ತಾಗಿ ನಿಂತರು. ಅವರನ್ನು ಅಪ್ಪಿ ರಾಹುಲ್ ಗಾಂ ವಿಶ್ರಾಂತಿಗೆ ಅವಕಾಶ ಕೊಟ್ಟರು.
ಈ ಮೊದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಯವರ ಫಿಟ್‍ನೆಸ್ ಓಟದಲ್ಲಿ ಪಾಸಾಗಿದ್ದು ಗಮನಾರ್ಹ.

ಚಳ್ಳಕೆರೆಯಿಂದ ಯಾತ್ರೆ ಮುಂದುವರೆದು ಸಾರಿಗೆ ಸಚಿವ ಶ್ರೀರಾಮುಲು ಕ್ಷೇತ್ರ ಮೊಳಕಾಲ್ಮೂರು ಪ್ರವೇಶಿಸಿದ್ದು, ಅದ್ಧೂರಿ ಸ್ವಾಗತ ದೊರೆತಿದೆ.

Articles You Might Like

Share This Article