ಚಿಕ್ಕಮಂಗಳೂರು,ಜ.27- ಒಂದು ವೇಳೆ ಪಕ್ಷದ ನೀತಿ ಸಿದ್ದಾಂತವನ್ನು ಒಪ್ಪಿ ಬಂದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಅವರು ಬಿಜೆಪಿಯ ಸಿದ್ದಾಂತವನ್ನು ಒಪ್ಪಿ ಬಂದರೆ ಖಂಡಿತವಾಗಿಯೂ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಹೊಳೆನರಸೀಪುರದಲ್ಲಿ ಅವರಿಗಿಂತ ಒಳ್ಳೆಯ ಅಭ್ಯರ್ಥಿ ಇನ್ಯಾರು ಬೇಕು ಎಂದು ಪ್ರಶ್ನಿಸಿದರು.
ಯಾರೇ ಬಂದರೂ ಖಂಡಿವಾಗಿಯೂ ಅವರ ಹಿನ್ನಲೆ ನೋಡಿಕೊಂಡು ಪಕ್ಷದ ವರಿಷ್ಠರು ಟಿಕೆಟ್ ತೀರ್ಮಾನಿಸುತ್ತಾರೆ. ಅದರಂತೆ ಭವಾನಿ ರೇವಣ್ಣ ಬಂದರೂ ಕೂಡ ನಾವು ಮುಕ್ತ ಸ್ವಾತಂತ್ರ್ಯ ನೀಡಲಾಗುವುದು ಎಂದರು.
ಹುಬ್ಬಳ್ಳಿಗೆ ಅಮಿತ್ ಷಾ: ಚುನಾವಣೆ ಕಾರ್ಯತಂತ್ರಕ್ಕೆ ಸರಣಿ ಸಭೆ
ನಾವು ಯಾರನ್ನೂ ಕೂಡ ಪಕ್ಷಕ್ಕೆ ಬರಬೇಕೆಂದು ಒತ್ತಡ ಹಾಕುವುದಿಲ್ಲ. ಬಂದವರಿಗೆ ಟಿಕೆಟ್ ಕೊಡುತ್ತೇವೆ ಎಂದು ಖಾತರಿಯನ್ನೂ ನೀಡುವುದಿಲ್ಲ. ನನ್ನಂತೆ ಅನೇಕರು ಪಕ್ಷಕ್ಕಾಗಿ ದುಡಿದಿದ್ದಾರೆ. ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಸಾಮಥ್ರ್ಯಕ್ಕೆ ಅನುಗುಣವಾಗಿ ಟಿಕೆಟ್ ಕೊಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ ಸಿ.ಟಿ.ರವಿ, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಇನ್ನು ಕೆಲವರು ಅವರ ಜೊತೆ ಮಾತುಕತೆ ನಡೆಸಬೇಕು. ಅಂತಿಮವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರು ಎಂದು ರವಿ ಹೇಳಿದರು.
Bhavani Revanna, CT Ravi, BJP ticket, Holenarasipura,