ಭಿವಾನಿ,ಫೆ.27-ಹರಿಯಾಣದಲ್ಲಿ ಕಾರಿನಲ್ಲಿ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದ್ದ ಎರಡು ಶವಗಳು ಗೋ ಭಕ್ಷಕರಾದ ಜುನೈದ್ ಮತ್ತು ನಾಸೀರ್ ಎಂಬುವರದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ದೃಡಪಡಿಸಿದೆ ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಅಪಹರಣಕ್ಕೊಳಗಾಗಿದ್ದ ರಾಜಸ್ಥಾನದ ಭರತ್‍ಪುರ ಮೂಲದ ವ್ಯಕ್ತಿಗಳ ಶವಗಳು ಫೆಬ್ರವರಿ 16 ರಂದು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ವಾಹನದೊಳಗೆ ಪತ್ತೆಯಾಗಿದ್ದವು. ಮೃತರ ಕುಟುಂಬಗಳು ಅವರನ್ನು ಬಜರಂಗದಳದ ಸದಸ್ಯರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಮತ್ತೆ ಪರಮಾಣು ಬೆದರಿಕೆ ಹಾಕಿದ ರಷ್ಯಾ ಅಧ್ಯಕ್ಷ ಪುಟಿನ್
ಶವಗಳನ್ನು ಎಫ್‍ಎಸ್‍ಎಲ್‍ಗೆ ರವಾನಿಸಿದ್ದು ವರದಿಯಲ್ಲಿ ಎರಡು ಶವಗಳು ನಾಸೀರ್ ಮತ್ತು ಜುನೈದ್ ಅವರದ್ದು ಎನ್ನುವುದು ದೃಢಪಟ್ಟಿದೆ ಎಂದು ಐಜಿ ಗೌರವ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಸ್ಥಳದಿಂದ ಎಫ್‍ಎಸ್‍ಎಲ್ ಮಾದರಿಗಳನ್ನು ಸಂಗ್ರಹಿಸಲಾಗಿದೆ. ನಾಸಿರ್ ಮತ್ತು ಜುನೈದ್ ಅವರ ಕುಟುಂಬದ ಸದಸ್ಯರ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದ್ದು, ಎಸ್‍ಯುವಿಯಲ್ಲಿ ಕಂಡುಬಂದ ರಕ್ತದ ಕಲೆಗಳು ಮತ್ತು ಸುಟ್ಟ ವಾಹನದಲ್ಲಿ ಪತ್ತೆಯಾದ ಮೂಳೆಗಳು ಹೊಂದಾಣಿಕೆಯಾಗುತ್ತವೆ.
ರ‍್ಯಾಗಿಂಗ್ ಪಿಡುಗಿಗೆ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಬಲಿ
ಇಬ್ಬರ ಮೇಲೆ ಕೆಲವರು ಹಲ್ಲೆ ನಡೆಸಿ ವಾಹನಕ್ಕೆ ಬೆಂಕಿ ಇಟ್ಟಿರುವ ಸಾಧ್ಯತೆ ಇದ್ದು, ಆರೋಪಿಗಳ ಬಂಧನಕ್ಕೆ ತೀವ್ರ ಕಾರ್ಯಚರಣೆ ಕೈಗೊಳ್ಳಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
Bhiwani, Deaths, Forensic, Report, Confirms, Charred, Bodies, Found, Haryana,