ಸೋನಭದ್ರ,ಮೇ.25-ಭೋಜ್‍ಪುರಿ ಚಲನಚಿತ್ರ ನಿರ್ದೇಶಕ ಸುಭಾಷ್ ಚಂದ್ರ ತಿವಾರಿ ಅವರು ಉತ್ತರ ಪ್ರದೇಶದ ಸೋನ್‍ಭದ್ರಾದಲ್ಲಿರುವ ಹೋಟೆಲ್ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಸುಭಾಷ್ ಅವರು ತಮ್ಮ ತಂಡದೊಂದಿಗೆ ಸೋನಭದ್ರಾದಲ್ಲಿರುವ ಹೋಟೆಲ್ ತಿರುಪತಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ತಂಗಿದ್ದರು. ಅಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶ್ವೀರ್ ಸಿಂಗ್ ತಿಳಿಸಿದ್ದಾರೆ.
ಅವರ ದೇಹದ ಮೇಲೆ ಯಾವುದೇ ಗೋಚರವಾದ ಗಾಯವಿಲ್ಲ, ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಪಡೆದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಯಶ್ವೀರ್ ಸಿಂಗ್ ಹೇಳಿದ್ದಾರೆ.
ನಟ ನಿತೇಶ್ ಪಾಂಡೆ ಮಹಾರಾಷ್ಟ್ರದ ಇಗತ್‍ಪುರಿ ಹೋಟೆಲ್‍ನಲ್ಲಿ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳ ನಂತರ ಸುಭಾಷ್ ಚಂದ್ರ ಅವರ ನಿಧನದ ಸುದ್ದಿ ಬಂದಿದೆ.
ನಿತೇಶ್‍ಅವರು ‘ತೇಜಸ್’, ‘ಮಂಜಿಲೇನ್ ಅಪಾನಿ ಅಪಾನಿ’, ‘ಸಾಯಾ’, ‘ಅಸ್ತಿತ್ವ ಏಕ್ ಪ್ರೇಮ್ ಕಹಾನಿ’, ‘ಮತ್ತು ‘ದುರ್ಗೇಶ್ ನಂದಿನಿ’ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೆ, ‘ಬಧಾಯಿ ದೋ’, ‘ಓಂ ಶಾಂತಿ ಓಂ’ ಮತ್ತು ‘ಖೋಸ್ಲಾ ಕಾ ಘೋಸ್ಲಾ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
#BhojpuriDirector, #SubhashChandraTiwari, #founddead,