ಭೂಪಾಲ್ ಅನಿಲ ದುರಂತ : ಹೆಚ್ಚುವರಿ ಪರಿಹಾರಕ್ಕೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಜಾ

Social Share

ನವದೆಹಲಿ,ಮಾ.14- ವಿಶ್ವವೇ ಬೆಚ್ಚಿ ಬಿದ್ದಿದ್ದ 1984 ರ ಭೂಪಾಲ್ ಅನಿಲ ದುರಂತದಲ್ಲಿನ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಖಾಸಗಿ ಸಂಸ್ಥೆಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಲು ಅವಕಾಶ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾೀಧಿಶರ ಸಂವಿಧಾನ ಪೀಠವು ಎರಡು ದಶಕಗಳ ನಂತರ ಕ್ರಮ ಕೈಗೊಳ್ಳಬೇಕು ಎಂಬುದರಲ್ಲಿ ಯಾವುದೇ ತರ್ಕವಿಲ್ಲ ಎಂದು ಅಭಿಪ್ರಾಯಟ್ಟಿದೆ.

1984ರ ಡಿಸೆಂಬರ್ 2 ಮತ್ತು 3ರ ಮಧ್ಯರಾತ್ರಿಯಲ್ಲಿ ಯುಸಿಸಿ ಕಂಪೆನಿ ಒಡೆತನದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಗಿತ್ತು. ದುರಂತದಲ್ಲಿ ಮೂರು ಸಾವಿರ ಜನ ಮೃತಪಟ್ಟಿದ್ದರು. 1.02 ಲಕ್ಷ ಜನ ಬಾಧಿತರಾಗಿದ್ದರು. ಘಟನೆಗೆ ಸಂಬಂಧ ಪಟ್ಟಂತೆ 1989ರಲ್ಲಿ ಯುಸಿಸಿ ಕಂಪೆನಿ 470 ಮಿಲಿಯನ್ ಡಾಲರ್ ಪರಿಹಾರ ಪಾವತಿಸಿತ್ತು.

ಆಸ್ಟ್ರೇಲಿಯಾಕ್ಕೆ ಪರಮಾಣುಚಾಲಿತ ಜಲಾಂತರಗಾಮಿ ನೌಕೆ : ಬಿಡೆನ್

ದುರ್ಘಟನೆಯಲ್ಲಿ ಮೃತಪಟ್ಟವರು ಹಾಗೂ ಸಂತ್ರಸ್ಥರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನಿಡಲು ಅನಿಲ ದುರಂತಕ್ಕೆ ಕಾರಣವಾಗಿರುವ ಯೂನಿಯನ್ ಕಾರ್ಬೈಡ್ ಕಾಪೆರ್ರೇಷನ್ (ಯುಸಿಸಿ) ಕಂಪೆನಿಯ ಉತ್ತರಾಧಿಕಾರಿ ಸಂಸ್ಥೆಗಳಿಂದ ಹೆಚ್ಚುವರಿಯಾಗಿ 7,844 ಕೋಟಿ ರೂಪಾಯಿಗಳನ್ನು ಕೋರಿ ಕೇಂದ್ರ ಸರ್ಕಾರ ಕ್ಯುರೇಟಿವ್ ಮನವಿ ಸಲ್ಲಿಸಿತ್ತು.

ಈಗಾಗಲೇ ಆರ್‍ಬಿಐನಲ್ಲಿರುವ 50 ಕೋಟಿ ರೂಪಾಯಿಗಳನ್ನೂ ಬಳಸಿಕೊಂಡು ಕೇಂದ್ರ ಸರ್ಕಾರ ಬಾಕಿ ಕ್ಲೈಮ್‍ಗಳಿಗೆ ಪರಿಹಾರ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ಎರಡು ದಶಕಗಳ ಬಳಿಕ ಈ ವಿಷಯವನ್ನು ಸುಪ್ರೀಂಕೋರ್ಟ್ ಮುಂದೆ ತರುವಾಗ ಕೇಂದ್ರ ಸರ್ಕಾರ ಸಮರ್ಥನಿಯವಾದ ತರ್ಕವನ್ನು ಮುಂದಿಟ್ಟಿಲ್ಲ. ಹೀಗಾಗಿಸ ಕ್ಯುರೇಟಿವ್ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಅಭಯ್. ಎಸ್.ಓಕಾ, ವಿಕ್ರಮ್ ನಾಥ್ ಮತ್ತು ಜೆ.ಕೆ.ಮಹೇಶ್ವರ್ ಅವರನ್ನೊಳಗೊಂಡ ಪೀಠ ಹೇಳಿದೆ.

ಬಿಜೆಪಿಗರನ್ನು ಕೆರಳಿಸಿದ ಮೋದಿ ವಿರುದ್ಧದ ರಾಂಧವಾ ಹೇಳಿಕೆ

1989 ರಲ್ಲಿ ಒಪ್ಪಂದದ ಭಾಗವಾಗಿ ಯುಸಿಸಿ ಕಂಪೆನಿ 470 ಮಿಲಿಯನ್ ಡಾಲರ್ (ರೂ. 715 ಕೋಟಿ) ನೀಡಿದೆ. ಆದರೆ ಅದು ಸಾಲುವುದಿಲ್ಲ. ಅದರ ಉತ್ತರಾಧಿಕಾರಿ ಸಂಸ್ಥೆಗಳಿಂದ ಇನ್ನೂ 7,844 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಬೇಕಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಅರ್ಜಿಯನ್ನು ಸುಪ್ರಿಂಕೋರ್ಟ್ ತಳ್ಳಿ ಹಾಕಿತ್ತು. ಇದಕ್ಕೆ ಮೇಲ್ಮನವಿಯನ್ನು ಸಲ್ಲಿಸಲಾಗಿರಲಿಲ್ಲ. ತೀವ್ರಗೊಳ್ಳುತ್ತಿರುವ ಸಮಸ್ಯೆಯನ್ನು ತಿಳಿಗೊಳಿಸಲು ಅಂತಿಮ ಹಂತವಾಗಿ ಕೇಂದ್ರ ಸರ್ಕಾರ ಕ್ಯುರೇಟಿವ್ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜನವರಿ 12 ರಂದು ತೀರ್ಪನ್ನು ಕಾಯ್ದಿರಿಸಿತ್ತು.

Bhopal, gas tragedy, Supreme Court, rejects, Centre, higher, compensation, plea,

Articles You Might Like

Share This Article