ಗುಜರಾತ್‍ನ ಸಿಎಂ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕರ

Social Share

ಅಹಮದಾಬಾದ್,ಡಿ.12- ಗುಜರಾತ್‍ನ ಮುಖ್ಯಮಂತ್ರಿಯಾಗಿ 2ನೇ ಅವಧಿಗೆ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕರಿಸಿದ್ದು, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ರಾಜ್ಯಗಳ ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು, ಪ್ರಭಾವಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಹಮದಾಬಾದ್‍ನ ಎಲಿಪ್ಯಾಡ್ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಬಿಜೆಪಿಯ ಪದಗ್ರಹಣ ನಡೆಯಿತು. ಪಟೇಲ್ ಅವರು ಗಟ್ಲೋಡಿಯ ಕ್ಷೇತ್ರದಲ್ಲಿ 1.92 ಲಕ್ಷ ದಾಖಲೆಯ ಅಂತರದಲ್ಲಿ ವಿಜಯಿಯಾಗಿದ್ದರು

ಮತ್ತೆ ಮುಷ್ಕರಕ್ಕಿಳಿಯಲು ಸಾರಿಗೆ ನೌಕರರ ತೀರ್ಮಾನ.

182 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 156ರಲ್ಲಿ ಜಯಗಳಿಸಿ ಪ್ರಚಂಡ ಜಯಭೇರಿ ಬಾರಿಸಿತ್ತು. ಆನಂತರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಲವ್ ಜಿಹಾದ್ ಪ್ರಕರಣಗಳ ತನಿಖೆಗೆ ವಿಶೇಷ ಶಾಖೆ ಸ್ಥಾಪಿಸುವಂತೆ ಆಗ್ರಹ

2021ರ ಸೆಪ್ಟೆಂಬರ್‍ನಲ್ಲಿ ಬಿಜೆಪಿ ಹೈಕಮಾಂಡ್ ಆಗಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಬದಲಾವಣೆ ಮಾಡಿ ಭೂಪೇಂದ್ರ ಪಟೇಲ್ ಅವರಿಗೆ ಪಟ್ಟಾಭಿಷೇಕ ಮಾಡಿತ್ತು. ಅಂದಿನಿಂದ ಪಟೇಲ್ ಯಶಸ್ಸಿನತ್ತ ಮುಖ ಮಾಡಿದ್ದಾರೆ.

Bhupendra Patel, take oath, Gujarat CM,

Articles You Might Like

Share This Article