ಅನಿಲ ಬೆಲೆ ಕಡಿತ ಘೋಷಿಸಿದ ಬಿಡೆನ್

Social Share

ವಾಷಿಂಗ್ಟನ್.ಅ. 20- ನಿರ್ಣಾಯಕ ಮಧ್ಯಂತರ ಚುನಾವಣೆಗೆ ಮುನ್ನ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅನಿಲ ಬೆಲೆಗಳನ್ನು ಕಡಿತಗೊಳಿಸಿ ಅದೇಶ ಮಾಡಿದ್ದಾರೆ. ಇದೇ ವೇಳೆ ಇಂಧನ ಬೆಲೆಗಳ ಹೆಚ್ಚಳಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾರಣ ಎಂದು ಪುನರುಚ್ಚರಿದ್ದು, ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಲ್ಲಿ ಎದ್ದಿರುವ ಗದ್ದಲವೂ ಭಾದಿಸಿದೆ, ನಾನು ಅನಿಲ ಬೆಲೆಗಳನ್ನು ಕಡಿಮೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದಾಗಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಮಹಾ ಮಳೆಗೆ ನಲುಗಿದ ಬೆಂಗಳೂರು, ಕೊಚ್ಚಿಹೋದ ವಾಹನಗಳು

ಇಂಧನ ಇಲಾಖೆಯು ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್‍ನಿಂದ ಇನ್ನೂ 15 ಮಿಲಿಯನ್ ಬ್ಯಾರೆಲ್‍ಗಳನ್ನು ಬಿಡುಗಡೆ ಮಾಡುತ್ತದೆ ಎಂದು ಬಿಡೆನ್ ಹೇಳಿದರು, ತೈಲ ಬೆಲೆಗಳನ್ನು ತಗ್ಗಿಸುವಲ್ಲಿ ಇದುವರೆಗೂ ಶೇಕರಿಸಿದ್ದ ಡ್ರಾಡೌನ್‍ಗಳು ದೊಡ್ಡ ಪಾತ್ರವನ್ನು ವಹಿಸಿವೆ ಎಂದು ವಿಶ್ಲೇಷಕರು ದೃಢಪಡಿಸಿದ್ದಾರೆ ಎಂದು ಅವರು ಹೇಳಿದರು.

ಹಾಸನಂಬ ದರ್ಶನಕ್ಕೆ ಸರತಿ ಸಾಲಿಲ್ಲಿ ನಿಂತಿದ್ದ ಯುವಕ ಹೃದಯಘಾತದಿಂದ ಸಾವು

ನಾವು ಆ ರಾಷ್ಟ್ರೀಯ ಆಸ್ತಿಯನ್ನು ಜವಾಬ್ದಾರಿಯುತವಾಗಿ ಬಳಸುವುದನ್ನು ಮುಂದುವರಿಸಲಿದ್ದೇವೆ ಇದೀಗ, ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಸುಮಾರು 400 ಮಿಲಿಯನ್ ಬ್ಯಾರೆಲ್ ತೈಲ ಸಾಮಥ್ರ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ತುಂಬಿದೆ. ಯಾವುದೇ ತುರ್ತು ಪರಿಹಾರಕ್ಕೆ ಇದು ಸಾಕಷ್ಟು ಹೆಚ್ಚು ಎಂದು ಅವರು ಹೇಳಿದರು.

ಜವಾಬ್ದಾರಿಯುತವಾಗಿ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ನಮ್ಮ ಆಡಳಿತವು ತೈಲ ಉತ್ಪಾದನೆಯನ್ನು ನಿಲ್ಲಿಸಿಲ್ಲ ಅಥವಾ ನಿಧಾನಗೊಳಿಸಿಲ್ಲ ಎಂದು ಅವರು ಪ್ರತಿಪಾದಿಸಿದರು.

ತೆರಿಗೆ ಯೋಜನೆ ವಿರೋಧಿಸಿ ನ್ಯೂಜಿಲೆಂಡ್‍ನಾದ್ಯಂತ ರೈತರ ಪ್ರತಿಭಟನೆ

ನಾವು ದಿನಕ್ಕೆ 12 ಮಿಲಿಯನ್ ಬ್ಯಾರೆಲ್ ತೈಲವನ್ನು ಉತ್ಪಾದಿಸುತ್ತಿದ್ದೇವೆ. ಮತ್ತು ಈ ವರ್ಷದ ಅಂತ್ಯದ ವೇಳೆಗೆ, ನಾವು ದಿನಕ್ಕೆ 1 ಮಿಲಿಯನ್ ಬ್ಯಾರೆಲ್‍ಗಳನ್ನು ಉತ್ಪಾದಿಸುತ್ತೇವೆ, ದಾಖಲೆಯ ತೈಲ ಉತ್ಪಾದನೆಯ ಹಾದಿಯಲ್ಲಿದ್ದೇವೆ ಎಂದು ಅವರು ಹೇಳಿದರು.

Articles You Might Like

Share This Article