ವಾಷಿಂಗ್ಟನ್,ಜ.21-ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರು ಇಂದು ತಮ್ಮ ಪ್ರಥಮ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ.ಉಭಯ ನಾಯಕರು ಉತ್ತರ ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮ ಮತ್ತು ಚೀನಾದ ಮಿಲಿಟರಿ ಆಕ್ರಮಣಶೀಲತೆ ಹೆಚ್ಚುತ್ತಿರುವುದಕ್ಕೆ ಕಳವಳಗೊಂಡಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದೆ.
ಮೂರು ವರ್ಷಗಳಿಗೂ ಅಕ ಕಾಲದಿಂದ ಸ್ಥಗಿತಗೊಳಿಸಿದ್ದ ಅಣ್ವಸ್ತ್ರ ಮತ್ತು ದೂರವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಗಳನ್ನು ಪುನರಾರಂಭಿಸುವುದಾಗಿ ಉತ್ತರ ಕೊರಿಯಾ ಈ ವಾರದ ಆರಂಭದಲ್ಲಿ ಹೇಳಿದ ಬಳಿಕ ಈ ವಚ್ರ್ಯುವಲ್ ಸಭೆ ನಡೆಸಲಾಗುತ್ತಿದೆ.
ಉತ್ತರ ಕೊರಿಯಾದ ಸರ್ವಾಕಾರಿ ಕಿಮ್ ಜಾಂಗ್ ಉನ್ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಪಾಲಿಟ್ ಬ್ಯೂರೋ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಅಕಾರಿಗಳು, ಅಮೆರಿಕದ ಹಗೆತನದ ಕ್ರಮಗಳ ವಿರುದ್ಧ ಕೊರಿಯನ್ ಸೇನೆಯನ್ನು ತತ್ಕ್ಷಣವೇ ಇನ್ನಷ್ಟು ಸಶಕ್ತಗೊಳಿಸಬೇಕು ಎಂಬ ನೀತಿ ಗುರಿಗಳನ್ನು ಸಲಹೆ ಮಾಡಿದರು ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅಮೆರಿಕ, ಜಪಾನ್ ಎರಡೂ ತೈವಾನ್ನತ್ತ ಚೀನಾದ ಆಕ್ರಮಣಶೀಲತೆ ಅಕವಾಗುತ್ತಿರುವುದಕ್ಕೆ ಆತಂಕಗೊಂಡಿವೆ. ಸ್ವಯಮಾಡಳಿತದ ತೈವಾನ್ ತನಗೆ ಸೇರಬೇಕೆಂದು ಚೀನಾ ಪ್ರತಿಪಾದಿಸುತ್ತಿದೆ. ಅಗತ್ಯ ಬಿದ್ದರೆ ಬಲ ಪ್ರಯೋಗಿಸಿ ತೈವಾನ್ ಅನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂದು ಚೀನಾ ಹೇಳಿದೆ.
ಇತ್ತೀಚಿನ ತಿಂಗಳುಗಳಲ್ಲಿ ತೈವಾನ್ ದ್ವೀಪದ ಸಮೀಪ ಮಿಲಿಟರಿ ಕಸರತ್ತುಗಳನ್ನು ಹೆಚ್ಚಿಸಿರುವ ಚೀನಾ ಪದೇ ಪದೇ ತೈವಾನ್ನ ವಾಯುಪ್ರದೇಶದ ಸನಿಹ ಯುದ್ಧ ವಿಮಾನಗಳನ್ನು ಕಳುಹಿಸುತ್ತಿದೆ.
