ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ 200ಕ್ಕೂ ಹೆಚ್ಚು ಚಿತ್ರ ಪ್ರದರ್ಶನ

Social Share

ಬೆಂಗಳೂರು,ಮಾ.15 – ಈ ಬಾರಿಯ 14 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ 50 ದೇಶದಲ್ಲಿ 200ಕ್ಕೂ ಅಧಿಕ ಚಿತ್ರಗಳು ಪ್ರದರ್ಶನ ಕಾಣಲಿವೆ.

ಈ ಬಾರಿಯ ಚಿತ್ರೋತ್ಸವ ಮಾ.23 ರಿಂದ 30ರ ವರೆಗೆ ನಡೆಯಲಿದ್ದು ಒರಾಯನ್ ಮಾಲ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಇದರ ಜೊತೆಗೆ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರ ಫಿಲಂ ಸೊಸೈಟಿಯಲ್ಲಿಯೂ ಚಿತ್ರ ಪ್ರದರ್ಶನ ನಡೆಯಲಿದೆ.

ಚಿತ್ರೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅಕಾಡಮಿ ಅಧ್ಯಕ್ಷ, ಅಶೋಕ್ ಕಶ್ಯಪ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎಚ್.ಎನ್. ನರಹರಿ ಮಾಹಿತಿ ನೀಡಿ, ಮಾ.30ರಂದು ವಿಧಾನಸೌದದ ಮೆಟ್ಟಿಲುಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನರೇಗಾ ಯೋಜನೆ ಸ್ಥಗಿತಗೊಳಿಸುವ ಹುನ್ನಾರ : ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ

ಕಾರ್ಡ್ ಇರುವುದಿಲ್ಲ. ಕ್ಯೂ ಆರ್ ಕೋಡ್ ಮೂಲಕ ಪಾಸ್‍ಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಜೀವಮಾನ ಪ್ರಶಸ್ತಿ ನೀಡುವುದಾಗಿ ಚಿತ್ರೋತ್ಸವ ಸಂಘಟನಾ ಸಮಿತಿಯ ಅಧ್ಯಕ್ಷ ಆರ್ .ಅಶೋಕ್ ನೀಡುವುದಾಗಿ ಪ್ರಕಟಿಸಿದ್ದಾರೆ.

ಇದರ ಜೊತೆಗೆ ಅತ್ಯುತ್ತಮ ಕನ್ನಡ ಚಿತ್ರಗಳಿಗೆ 10 ಲಕ್ಷ, 5 ಲಕ್ಷ ಮತ್ತು 3 ಲಕ್ಷ ಬಹುಮಾನ ನೀಡಲಾಗು ವುದು ಎಂದು ಅವರು ಹೇಳಿದರು. ರಿಜಿಸ್ಟಾರ್ ಹಿಮಂತರಾಜ್ ಅವರು ಚಿತ್ರೋತ್ಸವದ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡರು.

ಚಿತ್ರೋತ್ಸವ ಸ್ಪರ್ಧಾ ವಿಭಾಗ: ಈ ಬಾರಿಯ ಚಿತ್ರೊತ್ಸವದಲ್ಲಿ ಏಷಿಯನ್, ಇಂಡಿಯನ್ ಕನ್ನಡ ಚಿತ್ರ ಸ್ಪರ್ಧೆ ಇರಲಿದೆ. ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಚಿತ್ರೋತ್ಸವ ನಡೆಯುವ ದಿನಗಳಲ್ಲಿ ಪ್ರತಿದಿನ ಮಾದ್ಯಮ, ಮತ್ತು ಉದ್ಯಮಕ್ಕೆ ಸಂಬಂದೊಟ್ಟ ತಜ್ಞರಿಂದ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್ ಇರಲಿದೆ. ಜೊತೆಗೆ ವಿಕೆ ಮೂರ್ತಿ ಅವರು ಹಿಂದಿ ಚಿತ್ರರಂದಲ್ಲಿ ಕಪ್ಪು ಬಿಳಿಪಿನಲ್ಲಿ ಮೆರೆದವರಜ ಅವರ ನುರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ನಿರ್ಮಾಪಕ ಗೋವಿಂದ ನಿಹಲಾನಿ ಅವರು ವಿಕೆ ಮೂರ್ತಿ ಸ್ಮರಣೆ ನಡೆಯಲಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ 800 ಮತ್ತು ಚಿತ್ರೋದ್ಯಮ ಸದಸ್ಯರು, ವಿದ್ಯಾರ್ಥಿಗಳು ಮತ್ತು ಚಿತ್ರ ಸಮಾಜಜದ ಸದಸ್ಯರಿಗೆ 400 ರೂಪಾಯಿ ಶುಲ್ಕ ನಿಗಧಪಡಿಸಲಾಗಿದೆ.

ಬೆಂಗಳೂರು ಚಿತ್ರೋತ್ಸವದ ಬಗ್ಗೆ ಹೆಮ್ಮೆ ಆಗುತ್ತಿದೆ. ಫಿಯಾಫಿ ಮಾನ್ಯತೆ ಸಿಕ್ಕ ನಂತ ಕೋಲ್ಕತ್ತಾ, ಗೋವಾ ಮತ್ತು ತಿರುವನಂತಪುರಂ ನಂತರ ಬೆಂಗಳೂರು ಚಿತ್ರೊತ್ಸವ ಮಾನ್ಯತೆ ಪಡೆದಿದೆ.

ಚಿತ್ರ, ಚಿತ್ರರಂಗಕ್ಕೆ ಸೇರಿದಂತೆ ಅನೇಕ ಸಂವಾದ, ಮಾಸ್ರ್ಟ ಕ್ಲಾಸ್ ಗಳು ನಡೆಯಲಿವೆ. ಶಬ್ದ, ಛಾಯಾಗ್ರಾಹಣ, ಚಿತ್ರಕಥೆ, ಮಾರುಕಟ್ಟೆ, ವಿತರಣೆ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಪರಿಣಿತರು ಮಾಹಿತಿ ನೀಡಲಿದ್ದಾರೆ ಎಂದರು.

ನಾಳೆ ಕತ್ತಲಲ್ಲಿ ಮುಳುಗುವುದೇ ಕರ್ನಾಟಕ..?

ಅಂದು ವಿಧಾನಸೌಧ ಬ್ಯಾಕ್ವೆಂಟ್ ಹಾಲ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಹೇಳಿದರು.

Biffes, grand, inauguration, March 23,

Articles You Might Like

Share This Article