ಶೇ.10ರಷ್ಟು ಮೀಸಲಾತಿ : ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಕಾರ್ಯಕ್ಕೆ ಸಂದ ಜಯ

Social Share

ನವದೆಹಲಿ,ನ.7- ಇಡಬ್ಲ್ಯುಎಸ್ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಧಾನಿ ನರೇಂದ್ರಮೋದಿಯವರ ಸಾಮಾಜಿಕ ನ್ಯಾಯದ ಕಾರ್ಯ ಯೋಜನೆಗೆ ದೊರೆತ ಜಯ ಎಂದು ಬಿಜೆಪಿ ವ್ಯಾಖ್ಯಾನಿಸಿದೆ. ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತಿಕ್ರಿಯಿಸಿದ್ದು, ಮೀಸಲಾತಿ ಹೊರತಾದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರಮೋದಿ ಸರ್ಕಾರದ ತೀರ್ಮಾನಕ್ಕೆ ಕಾನೂನಿನ ಬೆಂಬಲ ದೊರೆತಿದೆ ಎಂದಿದ್ದಾರೆ.

ಸಾಮಾಜಿಕ ನ್ಯಾಯದಾನದಲ್ಲಿ ಇದು ಹೊಸ ದಿಕ್ಕನ್ನು ಆರಂಭಿಸುತ್ತಿದೆ. ಪ್ರಧಾನಿಯವರ ಗರೀಬ್ ಕಲ್ಯಾಣ್‍ಗೆ ಹೊಸ ಸೇರ್ಪಡೆ ಎಂದು ಹೇಳಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಬಡವರಿಗೆ ನ್ಯಾಯ ನೀಡುವ ಮೋದಿಯವರ ನಿಲುವಿಗೆ ಜಯ ದೊರೆತಿದೆ ಎಂದು ವಿಶ್ಲೇಷಿಸಿದ್ದಾರೆ.

ಮುರುಗಾ ಶರಣರ ಪೋಕ್ಸ್ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ..!

ಇಡಬ್ಲ್ಯುಎಸ್‍ನ ಹೆಜ್ಜೆಗಳು:
2019ರ ಜನವರಿ 8ರಂದು ಲೋಕಸಭೆಯಲ್ಲಿ ಸಂವಿಧಾನದ 103ನೇ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಮಾರನೇ ದಿನ ಅಂದರೆ ಜನವರಿ 9ರಂದು ರಾಜ್ಯಸಭೆಯಲ್ಲೂ ಈ ಮಸೂದೆ ಅಂಗೀಕಾರಗೊಂಡಿದೆ.

ಜ.12ರಂದು ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆ ಪ್ರಕಟಣೆಯನ್ನು ಹೊರಡಿಸಿ ರಾಷ್ಟ್ರಾಧ್ಯಕ್ಷರಾದ ರಾಮನಾಥ ಕೋವಿಂದ್ ಅವರು ಮಸೂದೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ಹೊರಡಿಸಿತ್ತು.

ಫೆಬ್ರವರಿಯಲ್ಲಿ ಈ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮುಂದೆ ಅರ್ಜಿಗಳು ಸಲ್ಲಿಕೆಯಾದವು. ಫೆ.6ರಂದು ಸುಪ್ರೀಂಕೋರ್ಟ್ ಅರ್ಜಿಗಳನ್ನು ಆಧರಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಫೆ.8ರಂದು ಇಡಬ್ಲ್ಯುಎಸ್ ಮೀಸಲಾತಿಗೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿತ್ತು.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ, ಕಾಡುತ್ತಿದೆ ಶಿಕ್ಷಕರ ಕೊರತೆ

2022ರ ಸೆಪ್ಟೆಂಬರ್ 8ರಂದು ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರ ನೇತೃತ್ವದಲ್ಲಿ ಅ ಅರ್ಜಿಗಳ ವಿಚಾರಣೆಗೆ ಸಾಂವಿಧಾನಿಕ ಪೀಠವನ್ನು ರಚಿಸಲಾಗಿತ್ತು. ಸೆ.13ರಂದು ವಿಚಾರಣೆಯನ್ನು ಆರಂಭಿಸಿತ್ತು. ಸೆ.27ರಂದು ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು 3:2ರ ಅನುಪಾತದಲ್ಲಿ ತೀರ್ಪು ಹೊರಬಿದ್ದಿದೆ.

Articles You Might Like

Share This Article